ಕವನದ ಶೀರ್ಷಿಕೆ:– ಇನ್ನೊಬ್ಬರ ಹಂಗು

ಕವನದ ಶೀರ್ಷಿಕೆ:– ಇನ್ನೊಬ್ಬರ ಹಂಗು

Share

ನೋಡುವ ಮನಸ್ಸಿಗೆ ಆಗಲಿಲ್ಲ
ದುಃಖವ ಮರೆಸುವ ಹಂಗಿಲ್ಲ
ದುಡ್ಡಿನ ದುನಿಯಾದಲ್ಲಿ ಇರಲಿಲ್ಲ
ಹೆಮ್ಮರವಾಗಿ ಬೆಳೆದರು ನೋಡಲಿಲ್ಲ

ಜಗತ್ತಿಗೆ ಸೋತವರು ಹೆಚ್ಚು ಆವತ್ತು
ಜಗತ್ತು ನನ್ನ ಕೈಯಲ್ಲಿ ಇತ್ತು ಇವತ್ತು
ವೃತ್ತಿಯಲ್ಲಿ ಸೌಕಾರು ಇವರು ಇವತ್ತು
ನೆಮ್ಮದಿಯ ಜೀವನಕ್ಕೆ ಕತ್ತು ಇತ್ತು ಇವತ್ತು

ಪಳಪಳ ಹಪ್ಪಳ ತಿನ್ನಲು ಸುಂದರ
ಬೇಸಿಗೆ ಮುಗಿದರು ಹುಡುಕುವೆ ಮರ
ಕಾಡುತ್ತಿದೆ ಭೂಮಿಗೆ ಒಂದು ಪ್ರಚಾರ
ಕಾಯಬೇಕು ಬದುಕಿಗೆ ಸಾಗರದ ಪ್ರಚಾರ

ಹೇಳಬೇಕು ಮನಸಿನಿಂದ ಮಾತು
ಮನಸಿಗೆ ನಗುವಿನ ಹಂಗಿನ ಮಾತು
ಸಮಾಧಾನ ಪಡಿಸಲು ಅವಕಾಶವಿತ್ತು
ಒಳ್ಳೆಯ ಕೆಲಸಕ್ಕೆ ಕೈಚಾಚು ಇವತ್ತು

ಮಹಾಂತೇಶ ಖೈನೂರ
ಸಾ//ಯಾತನೂರ


Share