ಅಗತ್ಯ ವಸ್ತುಗಳ ಬೆಲೆ ಏರಿಕೆ ಇಳಿಸಿ ಜನಸಾಮಾನ್ಯರ ಕಷ್ಟಕ್ಕೆ ಸ್ಪಂದಿಸಿ ರಾಜ್ಯ ಸರ್ಕಾರಕ್ಕೆ ಕಲ್ಯಾಣ ಕುಮಾರ ಅಚಲೆರಿ ಅಗ್ರಹ….

ಅಗತ್ಯ ವಸ್ತುಗಳ ಬೆಲೆ ಏರಿಕೆ ಇಳಿಸಿ ಜನಸಾಮಾನ್ಯರ ಕಷ್ಟಕ್ಕೆ ಸ್ಪಂದಿಸಿ ರಾಜ್ಯ ಸರ್ಕಾರಕ್ಕೆ ಕಲ್ಯಾಣ ಕುಮಾರ ಅಚಲೆರಿ ಅಗ್ರಹ….

Share

ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿ ಜನ ವಿರೋಧಿ ಆಡಳಿತ ನಡೆಸುತ್ತಿರುವ ರಾಜ್ಯ ಸರ್ಕಾರದ ನಡೆಗೆ ನಮ್ಮ ಕರ್ನಾಟಕ ಸೇನಾ ಸಂಘಟನೆಯ ರಾಜ್ಯ ಸಂಚಾಲಕರಾದ ಕಲ್ಯಾಣ್ ಕುಮಾರ ಅಚಲೇರಿ ಅವರು ಸರ್ಕಾರಕ್ಕೆ ಚೀಮಾರಿ ಹಾಕಿದ್ದಾರೆ ಕಳೆದ ಕೆಲವು ತಿಂಗಳುಗಳಿಂದ ರಾಜ್ಯದಲ್ಲಿ ಸ್ಪರ್ಧೆಗೆ ಬಿದ್ದಂತೆ ಅಗತ್ಯ ವಸ್ತುಗಳ ಏರಿಕೆ ಆಗುತ್ತಿದೆ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಆಗುವಷ್ಟರಲ್ಲಿ ಹಾಲಿನ ಬೆಲೆ ಏರಿಕೆ ಮಾಡಿ ಸಾಮಾನ್ಯ ಜನರ ಬದುಕಿನ ಜೊತೆ ಚೆಲ್ಲಾಟ ವಾಡುತ್ತಿರುವ ಸರ್ಕಾರದ ನಡೆಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ ತಮ್ಮ ಆಡಳಿತದ ಅನುಕೂಲಕ್ಕಾಗಿ ಬಿಕಾ ಬಿಟಿ ಬೆಲೆ ಏರಿಕೆ ಮಾಡಿದ ಪರಿಣಾಮ ರಾಜ್ಯದ ಜನತೆಗೆ ಮತದಾನ ಮಾಡಿದ ಪ್ರತಿಫಲವಾಗಿ ಮಾಡಿದ್ದುಣ್ಣೋ ಮಾರಾಯ ಎನ್ನುವಂತಾಗಿದೆ .ರಾಜ್ಯದ ಬಡ ಜನರ ಪರಿಸ್ಥಿತಿ ತುಗಲಕ್ ಸರ್ಕಾರದ ಈ ನಡೆಯಿಂದ ಮುಂದೆ ಬರುವಂತಹ ದಿನಗಳಲ್ಲಿ ರಾಜ್ಯದ ಜನರು ಪ್ರಜ್ಞಾವಂತರಾಗಿ ತಕ್ಕ ಪಾಠವನ್ನು ಕಲಿಸಲಿದ್ದಾರೆ .ರಾಜ್ಯದ ರೈತರ ಹಾಗೂ ಸಾಮಾನ್ಯ ಜನರ ಹೆಸರಿನಲ್ಲಿ ಸುಳ್ಳು ಆಶ್ವಾಸನೆ ಆಣೆ ಪ್ರಮಾಣ ವಚನ ಸ್ವೀಕರಿಸಿ ಇವತ್ತು ಇಡೀ ರಾಜ್ಯವನ್ನೇ ದಿವಾಳಿ ಹಂಚಿಗೆ ತಂದು ನಿಲ್ಲಿಸಿದ ಕೀರ್ತಿ ಈ ಸರ್ಕಾರಕ್ಕೆ ಸಲ್ಲುತ್ತದೆ ರಾಜ್ಯದ ರೈತರ ಸಾಲ ಮನ್ನಾ ಮಾಡದೇ ಉಚಿತ ಯೋಜನೆಗಳ ಹೆಸರಿನಲ್ಲಿ ರಾಜ್ಯದ ಜನತೆಗೆ ಮೂರು ನಾಮ ಹಾಕಿದ್ದಾರೆ ಎಂದು ನಮ್ಮ ಕರ್ನಾಟಕ ಸೇನೆ ಸಾಮಾಜಿಕ ಜಾಲತಾಣ ರಾಜ್ಯ ಸಂಚಾಲಕರಾದ ಕಲ್ಯಾಣಕುಮಾರ್ ಅಚಲೇರಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ಆಕ್ರೋಶವನ್ನು ಹೊರ ಹಾಕಿದ್ದಾರೆ
ವರದಿ ಜೆಟ್ಟಪ್ಪ ಎಸ್ ಪೂಜಾರಿ


Share