ಶಿಥಿಲಗೊಂಡ ಗೋಡೆಗಳು,ಬಿರುಕುಬಿಟ್ಟ ಬಾಗಿಲು,ಮುರಿದು ಬಿದ್ದ ಹೆಂಚುಗಳು ಮಳೆ ಬಿಸಿಲು ಗಾಳಿಗೆ ರಕ್ಷಣೆ ನೀಡದ ಸೂರು.ಇದು ಹುಣಸೂರು ತಾಲೂಕಿನ ಬಿಳಿಕೆರೆ ಹೋಬಳಿಯ ತಕ್ಕಹಾಡಿ ಗ್ರಾಮದ ವೃದ್ದೆ ಗಿರಿಯಮ್ಮ ಮನೆಯ ಹೀನ ಸ್ಥಿತಿ.ಕಳೆದ 33 ವರ್ಷಗಳಿಂದ ಇದೇ ಸ್ಥಿತಿಯಲ್ಲಿ ಗಿರಿಯಮ್ಮ ಜೀವನ ಸಾಗಿಸುತ್ತಿದ್ದಾರೆ.ಮಳೆ ಬಂದರೆ ಬಿರುಕು ಬಿಟ್ಟ ಹೆಂಚುಗಳ ಮಧ್ಯೆ ನೀರು ಸೋರಿಕೆಯಾಗುತ್ತದೆ.ಯಾವಾಗ ಬೇಕಾದರೂ ಕುಸಿದು ಬೀಳುವ ಹಂತದಲ್ಲಿರುವ ಈ ಮನೆಯಲ್ಲಿ ಏಕಾಂಗಿಯಾಗಿ ಜೀವ ಭಯದಲ್ಲೇ ಜೀವನ ಸಾಗಿಸುತ್ತಿದ್ದಾರೆ.ಮಳೆ ಬಂದರಂತೂ ಮತ್ತೊಬ್ಬರ ಮನೆ ಆಶ್ರಯ ಪಡೆಯುತ್ತಾರೆ.ತನ್ನ ಮನೆಗೆ ಕಾಯಕಲ್ಪ ಒದಗಿಸಲು ಸರ್ಕಾರದ ಮೊರೆ ಹೋಗಿದ್ದಾರೆ.ಕಚೇರಿಗಳ ಮೆಟ್ಟಿಲು ಹತ್ತಿ ಬಸವಳಿದಿದ್ದಾರೆ.ಒಬ್ಬಂಟಿ ಜೀವನ ಸಾಗಿಸುತ್ತಿರುವ ಈ ವೃದ್ದೆಗೆ ತಲೆ ಮೇಲೆ ಸೂಕ್ತವಾದ ಸೂರಿಲ್ಲ.ನಿರಂತರವಾಗಿ ಅಧಿಕಾರಿಗಳಿಗೆ ಮನವಿ ಸಲ್ಲಿಸುತ್ತಿರುವ ಗಿರಿಯಮ್ಮನ ನೆರವಿಗೆ ಸರ್ಕಾರ ಧಾವಿಸಬೇಕಿದೆ.ಸಂಪೂರ್ಣ ಶಿಥಿಲವಾದ ಮನೆಗೆ ಕಾಯಕಲ್ಪ ಒದಗಿಸಬೇಕಿದೆ…