ನಾಲ್ಕು ತಾಸು ಸತತ ಕಾರ್ಯಾಚರಣೆ : ಬೃಹತ್ ಮೊಸಳೆ ಕೊನೆಗೂ ಸೆರೆ!

ನಾಲ್ಕು ತಾಸು ಸತತ ಕಾರ್ಯಾಚರಣೆ : ಬೃಹತ್ ಮೊಸಳೆ ಕೊನೆಗೂ ಸೆರೆ!

Share

ಮುದ್ದೇಬಿಹಾಳ :ಕಳೆದ ಹಲವು ದಿನಗಳಿಂದ ರೈತರ ನಿದ್ದೆಗೆಡಿಸಿದ್ದ ಬೃಹತ್ ಮೊಸಳೆಯನ್ನು ಶುಕ್ರವಾರ ನಾಲ್ಕು ಘಂಟೆಗಳ ಸತತ ಕಾರ್ಯಾಚರಣೆ ನಡೆಸಿ ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಮೊಸಳೆ ಹಿಡಿಯುವ ಪರಿಣತರ ತಂಡ ಯಶಸ್ವಿಯಾಗಿದೆ.ಮುದ್ದೇಬಿಹಾಳ್ ತಾಲೂಕಿನ ಬಂಗಾರಗುಂಡ ಮತ್ತು ಕಪನೂರ್ ಗ್ರಾಮದ ಕೃಷ್ಣ ನದಿ ದಡದ ತೀರದಲ್ಲಿ ಇದ್ದ ಒಂದು ಚಿಕ್ಕ ಮಾಡುವಿನಲ್ಲಿ ಮೊಸಳೆ ಅಡಗಿಕೊಂಡಿತ್ತು. ಹಾಗೂ ಪಕ್ಕದ ಗ್ರಾಮದವರಿಗೆ ಭಯದ ವಾತಾವರಣ ಸೃಷ್ಟಿಯಾಗಿ ಹೋಗಬೇಕಾಗಿತ್ತು.ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಮೊಸಳೆ ಸೆರೆ ಹಿಡಿಯುವ ಪರಿಣತರಾದ ನಾಗೇಶ ಮೊಪಗಾರ್ ಗೌರೇಶ ಮೊಪಗಾರ್ ಶಿವು ಮೊಪಗಾರ್ ಯಮನೂರ ಮೊಪಗಾರ್ ಅರುಣ್ ಮೊಪಗಾರ್ ಹಾಗೂ ಅರಣ್ಯ ಇಲಾಖೆಯ ಸಿಂಬಂಧಿಗಳಾದ ವಿಜಯಕುಮಾರ್ ಕಿತ್ತೂರು ನೆರವಿನಿಂದ ಮೊಸಳೆಯನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾದರು.ಸಧ್ಯ ಮೊಸಳೆಯನ್ನು ಕೃಷ್ಣಾ ನದಿ ಬಸವ ಸಾಗರ್ ಆಣೆಕಟ್ಟು ಹಿನ್ನೀರಿನಲ್ಲಿ ಬಿಡಲಾಯಿತು. ಹಣಮಂತ್ರಾಯ ದಡ್ಡಿ ಬಸವರಾಜ ಗಡಗಿ ಮಲ್ಲಿಕಾರ್ಜುನ ಹಾಗೂ ಊರಿನ ಗ್ರಾಮಸ್ಥರು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.


Share