ಪೊಲೀಸರ ವರದಿ ಆಧರಿಸಿ ಆರೋಪಿಯನ್ನು ಮಾರ್ಚ್ 27 ರಿಂದ ಸಪ್ಟೆಂಬರ್ 27 ರವರೆಗೆ ಆರು ತಿಂಗಳ ಕಾಲ ಕಲಬುರಗಿ ಜಿಲ್ಲೆಯಿಂದ ಚಿತ್ರದುರ್ಗ ಜಿಲ್ಲೆಗೆ ಗಡಿಪಾರು ಮಾಡಿ ಕಲಬುರಗಿ ಉಪ ವಿಭಾಗದ ಉಪ ವಿಭಾಗಾಧಿಕಾರಿ ಆದೇಶಿಸಿದ್ದರು.
ಗಡಿಪಾರು ಆದೇಶ ರದ್ದು ಮಾಡುವಂತೆ ಕೋರಿ ಶರಣಪ್ಪ ರೆಡ್ಡಿ ಲಖಣಾಪೂರ ಇವರು ಕಲಬುರಗಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್ ವಿಶ್ವಜಿತ್ ಶೆಟ್ಟಿ ಅವರಿದ್ದ ಪೀಠವು, ಉಪ ವಿಭಾಗಾಧಿಕಾರಿ 2024ರ ಮಾ.27 ರಂದು ಹೊರಡಿಸಿದ್ದ ಆದೇಶವನ್ನು ರದ್ದುಪಡಿಸಿದೆ.
ಪೊಲೀಸರ ಅಕ್ರಮಗಳನ್ನು ಪ್ರಶ್ನಿಸುವವರನ್ನು ಗಡಿಪಾರು ಮಾಡಿರುವುದು ಆಘಾತಕಾರಿ ಬೆಳವಣಿಗೆ ಎಂದು ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.
ದುರುದ್ದೇಶಪೂರಿತ ಗಡಿಪಾರು ಆದೇಶ ಹೊರಡಿಸಿದ್ದ ಉಪವಿಭಾಗಾಧಿಕಾರಿ ಮತ್ತು ಜೇವರ್ಗಿ ಠಾಣೆ ಪಿಎಸ್ಐ ಇವರುಗಳ ವಿರುದ್ಧ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಹೂಡಲಾಗುವುದು ಎಂದು ಸಾಮಾಜಿಕ ಕಾರ್ಯಕರ್ತ ಶರಣಪ್ಪ ರೆಡ್ಡಿ ಲಖಣಾಪೂರ ತಿಳಿಸಿದ್ದಾರೆ.
ವರದಿ ಜಟ್ಟಪ್ಪ ಎಸ್ ಪೂಜಾರಿ