ಕಡಣಿ ಚಿರತೆ ದಾಳಿ ಮೂರು ಹಸುಗಳ ಸಾವು

ಕಡಣಿ ಚಿರತೆ ದಾಳಿ ಮೂರು ಹಸುಗಳ ಸಾವು

Share

ಆಲಮೇಲ ತಾಲೂಕಿನ ಕಡಣಿ ಗ್ರಾಮದ ಬೀಮಾ ನದಿಯ ದಂಡೆಯ ಜಮೀನಿನಲ್ಲಿ ಕಟ್ಟಲಾಗಿದ್ದ ಆಕಳುಗಳ ಮೇಲೆ ಚಿರತೆ ದಾಳಿ ಮಾಡಿದ್ದು. ಮೂರು ಆಕಳು ಮೃತಪಟ್ಟಿವೆ

ಕಡಣಿ ಭೀಮಾನದಿಯ ದಡದಲ್ಲಿನ ಜಮೀನುಗಳಲ್ಲಿ ರಾತ್ರಿ ಕೊಟ್ಟಿಗೆಯಲ್ಲಿ ಕಟ್ಟಿ ಬಂದಿದ್ದ ಸದಾಶಿವ ಕತ್ತಿ ಅವರಿಗೆ ಸೇರಿದ ಆಕಳು ಕರು. ಚನ್ನಪ್ಪ ದೊಡ್ಡಿ ಅವರಿಗೆ ಸೇರಿದ ಹೆಮ್ಮೆ. ಮಲ್ಲು ದೊಡ್ಡಿಯವಿಗೆ ಸೇರಿದ ಎಮ್ಮೆ ಮೇಲೆ ಚಿರತೆ ದಾಳಿ ಮಾಡಿ ಕೊಂದು ಹಾಕಿದೆ ಎಂದು ರೈತರ ತಿಳಿಸಿದ್ದಾರೆ.

ಈ ಭಾಗದಲ್ಲಿ ರೈತರ ರಾತ್ರಿ ಹೊತ್ತಿನಲ್ಲಿ ತಮ್ಮ ಜಮೀನಿನ ಶಡಗಳಲ್ಲಿ ದನ ಕರುಗಳನ್ನು ಕಟ್ಟಿರುತ್ತಾರೆ ರೈತರು ಕೂಡಾ ರಾತ್ರಿ ಹೊತ್ತು ಹೊಲಕ್ಕೆ ನೀರು ಹಾಯಿಸಲು ಹೋಗುತ್ತಾರೆ ಈ ಘಟನೆ ರೈತರಲ್ಲಿ ಆತಂಕ ಮೂಡಿಸಿದೆ. ತುರ್ತು ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ತಾಲೂಕ ಆಡಳಿತ ಮುಂಜಾಗ್ರತ ಕ್ರಮ ತೆಗೆದು ಕಾರ್ಯಾಚರಣೆ ಮಾಡಿದರು.
ಎರಡು ದಿನಗಳಾದರು ಚಿರತೆ ಇನ್ನೂ ಸಿಕ್ಕಿಲ್ಲ ವೆಂದು ಊರಿನ ಜನರು ಭಯದಿಂದ ಓಡಾಡುತ್ತಿದ್ದಾರೆ ಕನಸಿನ ಭಾರತ ಪತ್ರಿಕೆಗೆ ಸೈಪನಗೌಡ ಪಾಟೀಲ್ ತಿಳಿಸಿದರು

ತಾಲೂಕು ಅರಣ್ಯ ಅಧಿಕಾರಿ ಎಂ ಎನ್ ಮುಲ್ಲಾ ಹಾಗೂ ಪಶುವೈದ್ಯ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಪಂಚನಮೆ ಮಾಡಿದ್ದು ಪರಿಹಾರ ಒದಗಿಸುವುದಾಗಿ ತಿಳಿಸಿದ್ದಾರೆ ಹೆಜ್ಜೆ ಗುರುತುಗಳನ್ನು ಕಲೆಹಾಕಲಾಗಿದ್ದು ಕತ್ತೆ ಕಿರುಬು ಎಂಬ ಪ್ರಾಣಿ ಇರಬೇಕು. ಚಿರತೆ ಆಗಿರಲಿಕ್ಕಿಲ್ಲ ಎಂದರು


Share