ಮೈಸೂರಿನ ODP ಹಾಗೂ ಕ್ರಾಸ್ ಸಂಸ್ಥೆಯ ಸಹಯೋಗದೊಂದಿಗೆ ಹುಣಸೂರಿನ ಚರ್ಚ್ ನಲ್ಲಿ ತಾಲ್ಲೂಕು ಮಹಿಳಾ ಒಕ್ಕೂಟಗಳ ಬಲವರ್ಧನೆಯ ತರಭೇತಿಯನ್ನು ಆಯೋಜಿಸಲಾಗಿತ್ತು ಕಾರ್ಯಕ್ರಮ

ಮೈಸೂರಿನ ODP ಹಾಗೂ ಕ್ರಾಸ್ ಸಂಸ್ಥೆಯ ಸಹಯೋಗದೊಂದಿಗೆ ಹುಣಸೂರಿನ ಚರ್ಚ್ ನಲ್ಲಿ ತಾಲ್ಲೂಕು ಮಹಿಳಾ ಒಕ್ಕೂಟಗಳ ಬಲವರ್ಧನೆಯ ತರಭೇತಿಯನ್ನು ಆಯೋಜಿಸಲಾಗಿತ್ತು ಕಾರ್ಯಕ್ರಮ

Share

ದಿನಾಂಕ 27/6 /2024 ರಂದು ಮೈಸೂರಿನ ODP ಹಾಗೂ ಕ್ರಾಸ್ ಸಂಸ್ಥೆಯ ಸಹಯೋಗದೊಂದಿಗೆ ಹುಣಸೂರಿನ ಚರ್ಚ್ ನಲ್ಲಿ ತಾಲ್ಲೂಕು ಮಹಿಳಾ ಒಕ್ಕೂಟಗಳ ಬಲವರ್ಧನೆಯ ತರಭೇತಿಯನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದ ಉದ್ಘಾಟನೆಯ ನಂತರ ಉಚಿತ ಕಾನೂನು ಸೇವಾ ಪ್ರಾಧಿಕಾರದ ವಕೀಲರಾದ ಶ್ರೀಮತಿ ಪವಿತ್ರಾರವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ ಮಹಿಳೆಯರಿಗೆ ಇರುವಂತಹ ಉಚಿತ ಕಾನೂನುಗಳು ಹಾಗೂ ಮಹಿಳಾಹಕ್ಕುಗಳ ಕುರಿತಾಗಿ ಮಾಹಿತಿಯನ್ನು ನೀಡಿದರು ನಂತರ ಮಾತನಾಡಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ವೀಣಾರವರು ಮಹಿಳಾ ದೌರ್ಜನ್ಯಗಳು, ಬಾಲ್ಯ ವಿವಾಹ ಹಾಗೂ ಇಲಾಖೆಯಲ್ಲಿ ಸಿಗುವಂತಹ ಯೋಜನೆಗಳ ಕುರಿತಾಗಿ ಮಾಹಿತಿಯನ್ನು ಒದಗಿಸಿದರು. ಕಾರ್ಯಕ್ರಮದಲ್ಲಿ ಮಹಿಳಾ ಒಕ್ಕೂಟಗಳ ಪದಾಧಿಕಾರಿಗಳು, ಮಹಿಳಾ ಸಬಲೀಕರಣ ಯೋಜನೆಯ ಸಂಯೋಜಕರು, ವಲಯ ಕಾರ್ಯಕರ್ತರು ಹಾಗೂ ಒಕ್ಕೂಟದ ಸದಸ್ಯರು ಕಾರ್ಯಕ್ರಮದಲ್ಲಿ ಹಾಜರಿದ್ದರು.


Share