ನವದೆಹಲಿ: ತೆರಿಗೆ ಪಾವತಿದಾರರಿಗೆ ಹೆಚ್ಚಿನ ದರದಲ್ಲಿ ತೆರಿಗೆ ಕಡಿತವನ್ನು ತಪ್ಪಿಸಲು ಆದಾಯ ತೆರಿಗೆ ಇಲಾಖೆ ಮೇ 31 ರೊಳಗೆ ಪ್ಯಾನ್ ನ್ನು ಆಧಾರ್‌ನೊಂದಿಗೆ ಲಿಂಕ್ ಮಾಡಲು ಸೂಚಿಸಿದೆ.
ಆದಾಯ ತೆರಿಗೆ ನಿಯಮಗಳ ಪ್ರಕಾರ, ಶಾಶ್ವತ ಖಾತೆ ಸಂಖ್ಯೆ (PAN) ನ್ನು ಬಯೋಮೆಟ್ರಿಕ್ ಆಧಾರ್‌ನೊಂದಿಗೆ ಲಿಂಕ್ ಮಾಡದಿದ್ದರೆ, ಟಿಡಿಎಸ್ ಅನ್ವಯಿಸುವ ದರಕ್ಕಿಂತ ಎರಡು ಪಟ್ಟು ಹೆಚ್ಚು ಕಡಿತಗೊಳಿಸಬೇಕಾಗುತ್ತದೆ.ಆದಾಯ ತೆರಿಗೆ ಇಲಾಖೆಯು ಈ ಸುತ್ತೋಲೆ ಹೊರಡಿಸಿದ್ದು, ತೆರಿಗೆ ಪಾವತಿದಾರರು ಮೇ 31ರೊಳಗೆ ತನ್ನ ಪ್ಯಾನ್ ನ್ನು ಆಧಾರ್‌ನೊಂದಿಗೆ ಲಿಂಕ್ ಮಾಡಿದರೆ ಟಿಡಿಎಸ್ ಮೊತ್ತ ಸಣ್ಣ ಪ್ರಮಾಣದಲ್ಲಿ ಕಡಿಮೆಯಾಗುತ್ತದೆ.
ಹೆಚ್ಚಿನ ದರದಲ್ಲಿ ತೆರಿಗೆ ಕಡಿತವನ್ನು ತಪ್ಪಿಸಲು ಪ್ಯಾನ್ ಸಂಖ್ಯೆಯನ್ನು ಮೇ 31, 2024 ರ ಮೊದಲು ಆಧಾರ್‌ನೊಂದಿಗೆ ಲಿಂಕ್ ಮಾಡಿ ಎಂದು ಆದಾಯ ತೆರಿಗೆ ಇಲಾಖೆಯು ಎಕ್ಸ್ ಪೋಸ್ಟ್ ಮಾಡಿದೆ.