ವೈಜ್ಞಾನಿಕ ಕೃಷಿ ಪ್ರಾತ್ಯಕ್ಷಿಕೆಯಲ್ಲಿ ಕೃಷಿ ಕುಟುಂಬ ಆರೋಗ್ಯಪೂರ್ಣ ಜೀವನ ನಡೆಸುವಂತಾಗಬೇಕು-ಕುದಿ ಶ್ರೀನಿವಾಸ್ ಭಟ್ ಉಡುಪಿ 

ವೈಜ್ಞಾನಿಕ ಕೃಷಿ ಪ್ರಾತ್ಯಕ್ಷಿಕೆಯಲ್ಲಿ ಕೃಷಿ ಕುಟುಂಬ ಆರೋಗ್ಯಪೂರ್ಣ ಜೀವನ ನಡೆಸುವಂತಾಗಬೇಕು-ಕುದಿ ಶ್ರೀನಿವಾಸ್ ಭಟ್ ಉಡುಪಿ 

Share

ಹಿರೇಗುತ್ತಿ: ಸವಿ ಪೌಂಡೇಶನ್ (ರಿ) ಮೂಡುಬಿದ್ರೆ ಹಾಗೂ ಆಶ್ರಯ ಪೌಂಡೇಶನ್ ಹಿರೇಗುತ್ತಿ ಇವರ ಆಶ್ರಯದಲ್ಲಿ ವೈಜ್ಞಾನಿಕ ಪದ್ದತಿಯಲ್ಲಿ ಲಾಭದಾಯಕ ಬೆಳೆಗಳ ಪ್ರಾತ್ಯಕ್ಷಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.ಹಿರೇಗುತ್ತಿಯ ಶ್ರೀಕಾಂತ ನಾಯಕರವರ ತಗತಗೇರಿಯ ತೋಟದ ಆವರಣದಲ್ಲಿ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿ ಶ್ರೀ ಕುದಿ ಶ್ರೀನಿವಾಸ್ ಭಟ್ ಪ್ರಧಾನ ಕಾರ್ಯದರ್ಶಿ ಉಡುಪಿ ಜಿಲ್ಲಾ ಕೃಷಿಕ ಸಂಘ ತೆಂಗಿನ ಸಸಿ ನೆಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ ಕರಾವಳಿಯ ತೆಂಗು ಪ್ರಮುಖ ವಾಣಿಜ್ಯ ಬೆಳೆಯಾಗಿದೆ. ಯುವ ಜನರು ಕೃಷಿ ಕ್ಷೇತ್ರದಲ್ಲಿ ತೊಡಗಿಸಿಕೊಂಡಾಗ ಕೃಷಿ ಉಳಿಯಲು ಸಾಧ್ಯ ಅಲ್ಲದೇ ಕೃಷಿಕರೂ ವೈಜ್ಞಾನಿಕ ಪದ್ದತಿಯಲ್ಲಿ ಲಾಭದಾಯಕ ಬೆಳೆಗಳನ್ನು ಬೆಳೆಯುವುದರಿಂದ ಕೃಷಿ ಕುಟುಂಬ ಆರೋಗ್ಯಪೂರ್ಣ ಜೀವನ ನಡೆಸಲು ಸಾಧ್ಯವಿದೆ ಎಂದರು.ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿದ ಸವಿ  ಪೌಂಡೇಶನ್ ಸಂದೀಪ ನಾಯಕ “ಹತ್ತು-ಹಲವು ಜನೋಪಯೋಗಿ ಕಾರ್ಯಕ್ರಮಗಳ ಮೂಲಕ ಆಶ್ರಯ ಪೌಂಡೇಶನ್ ಹಾಗೂ ಸವಿ ಪೌಂಡೇಶನ್ ಕಾರ್ಯತತ್ಪರವಾಗಿದೆ ಸಂಸ್ಥೆಗಳ ಪರಿಸರ ಪ್ರೇಮ ಶ್ಲಾಘನೀಯ ಪ್ರಕೃತಿಯ ರಕ್ಷಣೆಯಲ್ಲಿ ಇದೆ ಮನುಕುಲದ ಹಿತ” ಎಂದರು. ಕಾರ್ಯಕ್ರಮದಲ್ಲಿ ಶ್ರೀ ರಾಜೀವ ಗಾಂವಕರ ಹಿರೇಗುತ್ತಿ, ಶ್ರೀ ರಾಜೇಂದ್ರ ಕಾರ್ಯದರ್ಶಿ ಉಡುಪಿ ಜಿಲ್ಲಾ ಕೃಷಿಕ ಸಂಘ, ಶ್ರೀ ನಾಗರಾಜ ಹಾಗೂ ಕುಮಾರ ಸಾನಿಧ್ಯ, ಎನ್ ಟಿ ನಾಯಕ, ಶ್ರೀಕಾಂತ ನಾಯಕ, ಶ್ರೀಮತಿ ಸಂಗೀತಾ ನಾಯಕ, ಕುಮಾರಿ ಆದಿಶ್ರೀ ಶ್ರೀಕಾಂತ ನಾಯಕ, ಉದ್ದಂಡ ಗಾಂವಕರ, ಎನ್ ರಾಮು ಹಿರೇಗುತ್ತಿ, ಶಿಕ್ಷಕ ಮಹಾದೇವ ಗೌಡ,  ಹರೀಶ ನಾಯಕ, ಉಮೇಶ ನಾಯಕ, ಸುರೇಂದ್ರ ನಾಯಕ, ರಾಮನಾಥ ಕಣಗಿಲ, ಮಮತಾ ಗಾಂವಕರ, ಜಯಾ ಗಾಂವಕರ, ಗಣಪತಿ ನಾಯಕ, ಬೊಮ್ಮ ವೆಂಕಟ್ರಮಣ ನಾಯಕ, ನಾಗು ಪಟಗಾರ, ಹೈಸ್ಕೂಲ್ ಪ್ರಕೃತಿ ಇಕೋ ಕ್ಲಬ್ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.


Share