ಗಂಗಾವತಿ: ನಗರದ ವೀರಸಾವರ್ಕರ್ ರಸ್ತೆಯಲ್ಲಿರುವ ಬ್ಯಾಂಕ್ ಆಫ್ ಬರೋಡಾ ಮುಂಭಾಗದಲ್ಲಿ ಮೇ-೩೦ ರಂದು ೧೪೧ನೇ ವರ್ಷದ ವೀರಸಾವರ್ಕರ್ ಜಯಂತಿಯನ್ನು ಆಚರಿಸಲಾಗುವುದು ಎಂದು ವೀರಸಾವರ್ಕರ್ ಜಯಂತಿ ಸಲಹಾ ಸಮಿತಿಯ ಅಧ್ಯಕ್ಷರಾದ ರಾಘವೇಂದ್ರ ದೇವಾಂಗ ಅವರು ಪ್ರಕಟಣೆಯಲ್ಲಿ ತಿಳಿಸಿದರು.
ಅಂದು ಜಯಂತಿಯಲ್ಲಿ ಮುಖ್ಯ ಅತಿಥಿಗಳಾಗಿ ಖ್ಯಾತ ನಾಟಕಕಾರ ಹಾಗೂ ಸಾಹಿತಿಗಳಾದ ಅಡ್ಡಾಂಡ ಕಾರ್ಯಪ್ಪರವರು ಹಾಗೂ ಪ್ರಖರ ವಾಗ್ಮಿಯಾದ ಕುಮಾರಿ ಹಾರಿಕಾ ಮಂಜುನಾಥರವರು ಮತ್ತು ಅಖಿಲ ಭಾರತ ಹಿಂದೂ ಮಹಾಸಭಾ ಕರ್ನಾಟಕ ಪ್ರಚಾರಕರಾದ ಪ್ರೇಮ್ ಪೊಳಲಿ ಆಗಮಿಸಲಿದ್ದಾರೆ.
ಈ ಜಯಂತಿಯು ಅಂದು ಬೆಳಿಗ್ಗೆ ೧೦:೩೦ ರಿಂದ ಪ್ರಾರಂಭಗೊAಡು ಮದ್ಯಾಹ್ನ ೧:೦೦ ಗಂಟೆಯವರೆಗೆ ನಡೆಯಲಿದೆ. ಈ ಜಯಂತಿ ಕಾರ್ಯಕ್ರಮದಲ್ಲಿ ಹಿಂದೂಪರ ಸಂಘಟನೆಗಳು, ಎಲ್ಲಾ ಸಮಾಜಗಳ ಮುಖಂಡರು, ವಿವಿಧ ಸಂಘ-ಸAಸ್ಥೆಗಳ ಪದಾಧಿಕಾರಿಗಳು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಜಯಂತಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಕೋರಿದರು.