ಜಿಲ್ಲಾ ಆಸ್ಪತ್ರೆ ವತಿಯಿಂದ ತಂಬಾಕು ವ್ಯಸನಮುಕ್ತ ಮಾಡಲು ಹಮ್ಮಿಕೊಂಡ ಕಾರ್ಯಕ್ರಮ

ಜಿಲ್ಲಾ ಆಸ್ಪತ್ರೆ ವತಿಯಿಂದ ತಂಬಾಕು ವ್ಯಸನಮುಕ್ತ ಮಾಡಲು ಹಮ್ಮಿಕೊಂಡ ಕಾರ್ಯಕ್ರಮ

Share

ವಿಜಯಪುರ ( ಇಂಡಿ)
ಜಿಲ್ಲೆಯ ಜಿಲ್ಲಾ ಆಸ್ಪತ್ರೆ ವತಿಯಿಂದ ತಂಬಾಕು ವ್ಯಸನಮುಕ್ತ ಮಾಡಲು ಹಮ್ಮಿಕೊಂಡ ಜಿಲ್ಲಾ ಆಸ್ಪತ್ರೆ ಕಾರ್ಯಕ್ರಮ ನಿನ್ನೆ ದಿವಸ ಇಂಡಿ ತಾಲೂಕಿನಾದ್ಯಂತ ಪ್ರಚಾರ ಕೈಗೊಂಡು ಇಂಡಿ ತಾಲೂಕಿನ ಬಸ್ ಘಟಕ ಕ್ಕೆ ಆಗಮಿಸಿ ಅಲ್ಲಿನ ಎಲ್ಲಾ ಸಿಬ್ಬಂದಿಗಳನ್ನು ಧೂಮಪಾನ ಹಾಗೂ ತಂಬಾಕು ವ್ಯಸನಗಳಿಂದ ಮುಕ್ತರನ್ನಾಗಿ ಮಾಡಲು ಕಾರ್ಯಕ್ರಮ ಹಮ್ಮಿಕೊಂಡಿತು.

ಈ ಕಾರ್ಯಕ್ರಮದಲ್ಲಿ ಬಸ್ ಘಟಕ ವ್ಯವಸ್ಥಾಪಕರಾದ ಶ್ರೀ ಎಸ್ ಜಿ ಬಿರಾದಾರ್ ಸೇರಿದಂತೆ ಇನ್ನುಳಿದ ಬಸ್ ನಿರ್ವಾಹಕ ಹಾಗೂ ಬಸ್ ಚಾಲಕ ಹಾಗೂ ಇನ್ನುಳಿದ ಸಿಬ್ಬಂದಿಗಳು ಪಾಲ್ಗೊಂಡು ತಂಬಾಕು ಸೇವನೆಯಿಂದ ದೂರ ಉಳಿಯುವುದಾಗಿ ದೃಢಸಂಕಲ್ಪ ಮಾಡಿದರು.

ತಾಲೂಕ ಬಸ್ ಕಟಕ ವ್ಯವಸ್ಥಾಪಕರಾದ ಶ್ರೀ ಎಸ್‌ಜಿ ಬಿರಾದಾರ್ ಇವರು ಮಾತನಾಡಿ ನಮ್ಮ ಸಿಬ್ಬಂದಿಗಳು ತಂಬಾಕು ಹಾಗೂ ಧೂಮ್ರ ಪಾನ ದಿಂದ ದೂರ ಉಳಿಯಲು ಪ್ರತಿಜ್ಞೆ ಮಾಡಿದ್ದಾರೆ ಎಂದು ತಿಳಿಸಿದರು. ಇದರಿಂದ ಅವರ ಆರೋಗ್ಯಕ್ಕೆ ಒಳ್ಳೆಯದು ಹಾಗೂ ಎಷ್ಟೋ ಜನ ತಂಬಾಕು ಹಾಗೂ ಧೂಮಪಾನ ದಿಂದ ಮುಕ್ತರಾಗಿದ್ದಾರೆ. ಎಂದು ಹೇಳಿದರು

ಇದೇ ಸಂದರ್ಭದಲ್ಲಿ ಜಿಲ್ಲಾ ಆಸ್ಪತ್ರೆಯ ಸಿಬ್ಬಂದಿಗಳು ಸಿಬ್ಬಂದಿಗಳನ್ನು ತಂಬಾಕು ಮುಕ್ತರನೆ ಮಾಡಲು ನಿಕೋಟಿನ್ ಎಂಬ ಗಮ್ ಕೊಡುತ್ತಿದ್ದೇವೆ ತಂಬಾಕಿನ ಬದಲಾಗಿ ಈ ನಿಕೋಟಿನ ಗಮ್ ಉಪಯೋಗಿಸುದರಿಂದ ಯಾವುದೇ ರೀತಿಯ ಆರೋಗ್ಯಕ್ಕೆ ಹಾನಿಕಾರಕ ಆಗುವುದಿಲ್ಲ. ಇದರಿಂದ ಸಾರ್ವಜನಿಕರು ಆರೋಗ್ಯವಾಗಿ ಇರಬಹುದು ಹಾಗೂ ತಂಬಾಕು ವ್ಯಸನ ಮುಕ್ತರಾಗಬಹುದು ಎಂದು ತಿಳಿಸಿದರು.ಈ ಸಮಯದಲ್ಲಿ ವಿವಿಧ ಬಸ್ ನಿರ್ವಾಹಕರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.


Share