ಈರಣ್ಣ ಭಜಂತ್ರಿ ಅವರಿಗೆ ರಾಷ್ಟ್ರಮಟ್ಟದ ರೈತ ರತ್ನ ಸಮಾಜ ಸೇವ ರತ್ನ ಪ್ರಶಸ್ತಿ ಮಾಳಿಂಗರಾಯ ಕಾರಗೊಂಡ ಹರ್ಷ.

ಈರಣ್ಣ ಭಜಂತ್ರಿ ಅವರಿಗೆ ರಾಷ್ಟ್ರಮಟ್ಟದ ರೈತ ರತ್ನ ಸಮಾಜ ಸೇವ ರತ್ನ ಪ್ರಶಸ್ತಿ ಮಾಳಿಂಗರಾಯ ಕಾರಗೊಂಡ ಹರ್ಷ.

Share

ಕಲ್ಬುರ್ಗಿ ಜಿಲ್ಲೆಯ ಯಡ್ರಾಮಿ ತಾಲೂಕಿನ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ತಾಲೂಕ ಅಧ್ಯಕ್ಷರಾದ ಈರಣ್ಣ ಭಜಂತ್ರಿ ಅವರಿಗೆ ಜೂನ್ 23ರಂದು ಬೆಂಗಳೂರ ನಗರದ ಚಾಮರಾಜಪೇಟೆಯ ಅಕ್ಕಮಹಾದೇವಿ ಸಭಾಂಗಣದಲ್ಲಿ ಅದ್ದೂರಿಯಾಗಿ ಜರುಗಿದ ಬೆಳಕು ಸಂಭ್ರಮದ ಕಾರ್ಯಕ್ರಮದಲ್ಲಿ ಬೆಳಕು ಸಾಹಿತ್ಯ ಶೈಕ್ಷಣಿಕ ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ಯಡ್ರಾಮಿ ತಾಲೂಕ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ತಾಲೂಕ ಅಧ್ಯಕ್ಷರಾದ ಈರಣ್ಣ ಭಜಂತ್ರಿ ಅವರ ರೈತಪರ ಕಾಳಜಿ ಹಲವಾರು ವರ್ಷಗಳ ಪ್ರಗತಿಪರ ಹೋರಾಟವನ್ನು ಪರಿಗಣಿಸಿ ಭಜಂತ್ರಿ ಅವರಿಗೆ ಬೆಳಕು ಟ್ರಸ್ಟ್ ನ ಅಧ್ಯಕ್ಷರಾದ ಅಣ್ಣಪ್ಪ ಮೇಟಿ ಗೌಡ ಅವರು ಪ್ರಶಸ್ತಿ ಪ್ರಧಾನ ಮಾಡಿದರು ಈ ಸಂದರ್ಭದಲ್ಲಿ ಬೆಳಕು ಸಂಭ್ರಮದ ಸರ್ವಾಧ್ಯಕ್ಷರಾದ ಮತ್ತು ಸ್ವರ ಮಧುರ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ವಿದ್ಯಾಲಯದ ಪ್ರಾಂಶುಪಾಲರಾದ ಶ್ರೀಮತಿ ಗೌರಿಶಂಕರ್ ಚಟ್ಟಿ ಸೇರಿದಂತೆ ಹಲವಾರು ಗಣ್ಯ ಮಾನ್ಯರು ಅದ್ದೂರಿಯಾಗಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು ಎಂದು ಯಾದಗಿರಿ ಜಿಲ್ಲಾ ಮತ್ತು ಕಲಬುರ್ಗಿ ಜಿಲ್ಲೆಯ ಸ್ಥಾನಿಕ ಸಂಪಾದಕರಾದ ಮಾಳಿಂಗರಾಯ ಕಾರಗೊಂಡವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು
ವರದಿ ಜಟ್ಟಪ್ಪ ಎಸ್ ಪೂಜಾರಿ


Share