ಶಿರಹಟ್ಟಿ: ಪಟ್ಟಣದ ಮರಾಠಾ ಗಲ್ಲಿಯಲ್ಲಿರುವ ಸುಪ್ರಸಿದ್ದ ಅಂಬಾ ಭವಾನಿ ದೇವಸ್ಥಾನದಲ್ಲಿ ಕಳ್ಳತನ ನಡೆದಿದೆ ಎನ್ನಲಾದ ಪ್ರಕರಣದಲ್ಲಿ ದೇವಸ್ಥಾನಕ್ಕೆ ಸಂಬಂಧಪಟ್ಟ ಸುಮಾರು ನಾಲ್ಕು ಲಕ್ಷ ರೂಪಾಯಿಯ ಚಿನ್ನಾಭರಣಗಳು ಕಳುವಾದ ಪ್ರಕರಣ ಮಂಗಳವಾರ ಬೆಳಗಿನ ಜಾವ ಸುಮಾರು 03 ಗಂಟೆಗೆ ನಡೆದಿದೆ ಎಂದು ಅಂದಾಜಿಸಲಾಗಿದ್ದು, ಶ್ರೀ ಅಂಬಾಭವಾನಿ ದೇವಿಯ ಮೇಲಿನ ಸುಮಾರು ಮೂರುವರೆ ಕೆಜಿ ತೂಕದ ಬೆಳ್ಳಿಯ ಪ್ರಭಾವಳಿ, ಸುಮಾರು ಅರ್ಧ ಕೆಜಿ ತೂಕದ ತ್ರಿಶೂಲ, ದೇವಿಯ ಕೊರಳಲ್ಲಿರುವ 15 ಗ್ರಾಂ ಚಿನ್ನದ ಮಾಂಗಲ್ಯ ಸರ ಜೊತೆಗೆ ಸಣ್ಣಪುಟ್ಟ ಬಂಗಾರದ ಒಡವೆಗಳು ಕಳವಾಗಿದ್ದ ಪ್ರಕರಣ ಬೆಳಿಗ್ಗೆ ಬಯಲಿಗೆ ಬಂದಿದೆ.ಎಂದಿನಂತೆ ದೇವಸ್ಥಾನದ ಪೂಜಾರಿ ಶ್ರೀದೇವಿಯ ಪೂಜಾ ಕಾರ್ಯಕ್ರಮಕ್ಕೆ ತೆರಳಿದಾಗ ಕಳವು ಪ್ರಕರಣ ಬಯಲಾಗಿದ್ದು, ಈ ಕಳವು ಪ್ರಕರಣ ರಾತ್ರಿ ನಡೆದಿರಬಹುದೆಂದು ಶ್ರೀ ಅಂಬಾಭವಾನಿ ದೇವಸ್ಥಾನ ಕಮಿಟಿ ಅಧ್ಯಕ್ಷರಾದ ಪರಮೇಶ ಪರಬ ಶಿರಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.ಈ ಕಳವು ಪ್ರಕರಣ ಪತ್ತೆಹಚ್ಚಲು ಶಿರಹಟ್ಟಿ ಪೊಲೀಸ್ ಠಾಣೆಯ ಸಿ ಪಿ ಐ ನಾಗರಾಜ ಮಾಡಳ್ಳಿ ಹಾಗೂ ಪಿಎಸ್‌ಐ ಶಿವಾನಂದ ಲಮಾಣಿ ನೇತೃತ್ವದ ತಂಡ ಎಸ್ ಪಿ ಬಿ ಎಸ್ ನೇಮಗೌಡ ಹಾಗೂ ಡಿ ವೈ ಎಸ್ ಪಿ ಮಾರ್ಗದರ್ಶನದಲ್ಲಿ ಶ್ವಾನದಳ, ಬೆರಳಚ್ಚು ತಜ್ಞರು, ಕ್ರೈಮ್ ಟೀಮ್ ಸ್ಥಳಕ್ಕೆ ಆಗಮಿಸಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆರಳಚ್ಚು ಹಾಗೂ ಶ್ವಾನದಳದಿಂದ ಕಳ್ಳರನ್ನು ಪತ್ತೆ ಹಚ್ಚುವಲ್ಲಿ ಮುಂದಾಗಿದ್ದಾರೆ.
ವರದಿ:ಖಾದರ್.ಕೆ.ಕೋಟಿಹಾಳ