ಪಿ. ಎಮ್. ಹೈಸ್ಕೂಲಿನಲ್ಲಿ ಮಾದಕ ದ್ರವ್ಯ ವಸ್ತುಗಳ ವಿರೋಧಿ ದಿನಾಚರಣೆ ಜಾಗೃತಿ ಅಭಿಯಾನ…

ಪಿ. ಎಮ್. ಹೈಸ್ಕೂಲಿನಲ್ಲಿ ಮಾದಕ ದ್ರವ್ಯ ವಸ್ತುಗಳ ವಿರೋಧಿ ದಿನಾಚರಣೆ ಜಾಗೃತಿ ಅಭಿಯಾನ…

Share

ಅಂಕೋಲಾ: ಕೆನರಾ ವೆಲ್ಫೇರ್ ಟ್ರಸ್ಟಿನ ಪಿ. ಎಮ್. ಹೈಸ್ಕೂಲ್ ಎನ್. ಸಿ. ಸಿ. ಘಟಕದ ವತಿಯಿಂದ ಮಾದಕ ದ್ರವ್ಯ ವಸ್ತುಗಳ ವಿರೋಧಿ ದಿನಾಚರಣೆ ಜಾಗೃತಿ ಅಭಿಯಾನವನ್ನು ಆಚರಿಸಲಾಯಿತು. ಎನ್. ಸಿ. ಸಿ. ಕೆಡೆಟಗಳು ಮಾದಕ ದ್ರವ್ಯ ಮತ್ತು ವಸ್ತುಗಳಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಚಿತ್ರಗಳನ್ನು ಬಿಡಿಸಿ ಜಾಗೃತಿ ಮೂಡಿಸಿದರು. ಈ ಸಂದರ್ಭದಲ್ಲಿ ಶಿಕ್ಷಕ ಎನ್.ಸಿ. ಸಿ. ಕಮಾಂಡರ್ ಜಿ.ಆರ್.ತಾಂಡೇಲ ಪ್ರಾಸ್ತವಿಕವಾಗಿ ಮಾತನಾಡಿ ಪ್ರತಿಯೊಬ್ಬರೂ ಮಾದಕ ದ್ರವ್ಯ ಮತ್ತು ವಸ್ತುಗಳ ಸೇವನೆಯಿಂದ ದೂರವಿದ್ದರೆ ಸಮಾಜದಲ್ಲಿ ಶಾಂತಿ ನೆಲೆಸಲು ಸಾಧ್ಯವಿದೆ. ವಿದ್ಯಾರ್ಥಿಗಳು ಇದರ ಬಗ್ಗೆ ಅರಿವನ್ನು ಮೂಡಿಸಿಕೊಂಡು ಜನಜಾಗ್ರತೆಯನ್ನು ಮೂಡಿಸಬೇಕೆಂದರು.ಈ ಕಾರ್ಯಕ್ರಮದಲ್ಲಿ ಜಿ ಸಿ ಕಾಲೇಜಿನ ಉಪನ್ಯಾಸಕರಾದ ಹರಿಪ್ರಸಾದ್ ದೇಸಾಯಿ ಮತ್ತು ಶಾಲೆಯ ಹಳೆ ವಿದ್ಯಾರ್ಥಿ ಪ್ರತಿಕ್ ನಾಯ್ಕ ಭಾಗವಹಿಸಿದ್ದರು.ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಾದ ರಾಜೇಶ ನಾಯಕರವರು ಸರ್ವರನ್ನು ಸ್ವಾಗತಿಸಿದರು.ಶಿಕ್ಷಕ ಮುಗುದಂ ಅಲಗೋಡಿಯವರು ವಂದಿಸಿದರು. ಈ ಸಂದರ್ಭದಲ್ಲಿ ಶಾಲೆಯ ಸಿಬ್ಬಂದಿಗಳು ಎಂಸಿಸಿ ಕೆಡೆಡ್ ಗಳು ವಿದ್ಯಾರ್ಥಿಗಳು ಭಾಗವಹಿಸಿದ್ದರು…


Share