ಸರಕಾರದ ವಿರುದ್ಧ ಕಿಡಿ ಕಾರಿದ ಮಡಿವಾಳಪ್ಪ ಯತ್ನಾಳ್

ಸರಕಾರದ ವಿರುದ್ಧ ಕಿಡಿ ಕಾರಿದ ಮಡಿವಾಳಪ್ಪ ಯತ್ನಾಳ್

Share

ಕಲ್ಬುರ್ಗಿ ಸುದ್ದಿ
ಪತ್ರಕರ್ತರಿಗೆ ಉಚಿತ ಬಸ್ ಪಾಸ್ ಅಂತ ಹೇಳಿ ದುಡ್ಡು ತೆಗೆದುಕೊಳ್ಳುತ್ತಿರುವುದು ನಾಚಿಕೆಗೇಡಿತನದ ಸಂಗತಿ ಪತ್ರಕರ್ತ
ರಾಜ್ಯಸರಕಾರ ಜಾರಿ ಮಾಡಿರುವ ಉಚಿತ ಯೋಜನೆಗಳ ಪೈಕಿ ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಗ್ರಾಮೀಣ ಭಾಗದ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ವಿತರಿಸುವದವಾಗಿ 2024ನೇ ಸಾಲಿನ ಬಜೆಟ್ ಮಂಡನೆಯ ಸಂದರ್ಭದಲ್ಲಿ ಘಂಟಾಘೂಷವಾಗಿ ಘೋಷಣೆ ಮಾಡಿದ್ದರು ಆದರೆ ಇಂದು ಗ್ರಾಮೀಣ ಭಾಗದ ಪತ್ರಕರ್ತರಿಗೆ ಬಸ್ ನಲ್ಲಿ ಪ್ರಯಾಣಿಸುವಾಗ ಹಣ ತೆಗೆದುಕೊಂಡು ಟಿಕೆಟ್ ನೀಡಿದ್ದಾರೆ ರಾಜ್ಯದ ಮುಖ್ಯಮಂತ್ರಿಗಳ ಬಜೆಟ್ ಮಂಡನೆಯ ಘೋಷಣೆ ನಾಮಕ ವ್ಯವಸ್ಥೆಗೆ ಮಾಡಿರುವಂತಿದೆ ಈ ಅವ್ಯವಸ್ಥೆಯ ವಿರುದ್ಧ ಕರ್ನಾಟಕ ಪ್ರೆಸ್ ಕ್ಲಬನ ಪರವಾಗಿ ಸರಕಾರದ ನಡೆಯನ್ನು ತೀವ್ರವಾಗಿ ಖಂಡಿಸುತ್ತೇವೆಂದು ಕರ್ನಾಟಕ ಪ್ರೆಸ್ ಕ್ಲಬ್ ಮೆಂಬರ್ ಹಾಗೂ ಸಂಜೆವಾಣಿಯ ದಿನಪತ್ರಿಕೆಯ ವರದಿಗಾರರಾದ ಮಡಿವಾಳಪ್ಪ ಯತ್ನಾಳ್ ಅವರು ಸರಕಾರದ ವಿರುದ್ಧ ಪತ್ರಿಕಾ ಪ್ರಕಟಣೆಯ ಮೂಲಕ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ


Share