“ಹಾಕಿ ಬಳ್ಳಾರಿ” ತಂಡದ ಎರಡನೇ ಪಂದ್ಯದಲ್ಲಿ “ಜಿಎಸ್ಟಿ & ಕಸ್ಟಮ್ಸ್ ಚೆನ್ನೈ” ತಂಡದ ವಿರುದ್ಧ ಭರ್ಜರಿ ಗೆಲುವು

“ಹಾಕಿ ಬಳ್ಳಾರಿ” ತಂಡದ ಎರಡನೇ ಪಂದ್ಯದಲ್ಲಿ “ಜಿಎಸ್ಟಿ & ಕಸ್ಟಮ್ಸ್ ಚೆನ್ನೈ” ತಂಡದ ವಿರುದ್ಧ ಭರ್ಜರಿ ಗೆಲುವು

Share

ಬಳ್ಳಾರಿ 13ನೇ ಅಖಿಲ ಭಾರತ ಲಕ್ಷ್ಮಿ ಅಮ್ಮಾಳ್ ಹಾಕಿ ಟೂರ್ನಮೆಂಟ್ ದಿನಾಂಕ: 24.05.2024 ರಿಂದ 02.06.2024 ರ ವರೆಗೆ ಕೋವಿಲ್ಪಟ್ಟಿ, ತಮಿಳನಾಡು ರಾಜ್ಯದಲ್ಲಿ ನಡೆಯುತ್ತಿದೆ. ಈ ಹಾಕಿ ಟೊರ್ನಮೆಂಟ್ ನಲ್ಲಿ ಕರ್ನಾಟಕ ರಾಜ್ಯದಿಂದ “ಹಾಕಿ ಬಳ್ಳಾರಿ” ತಂಡ ಪಾಲ್ಗೊಂಡಿದೆ. “ಹಾಕಿ ಬಳ್ಳಾರಿ” ತಂಡದ ಎರಡನೇ ಪಂದ್ಯದಲ್ಲಿ “ಜಿಎಸ್ಟಿ & ಕಸ್ಟಮ್ಸ್ ಚೆನ್ನೈ” ತಂಡದ ವಿರುದ್ಧ 3-2 ಗೋಲ್ಸ್ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದ್ದಾರೆ. ಈ ಪಂದ್ಯದಲ್ಲಿ “ಮ್ಯಾನ್ ಆಫ್ ದಿ ಮ್ಯಾಚ್” ರಾಹುಲ್ ಸಿ.ಜೆ. ಅವರು ಆಯ್ಕೆಯಾಗಿದ್ದಾರೆ. ಈ ಪಂದ್ಯದ ಗೆಲುವಿಗೆ ಶ್ರಮಿಸಿದ ಎಲ್ಲಾ ತಂಡದ ಆಟಗಾರರು, ಸಹಕರಿಸಿದ ಹಾಕಿ ಬಳ್ಳಾರಿ ಅಸೋಸಿಯೇಷನ್ ಹಾಗೂ ಹಿರಿಯ ಆಟಗಾರರಿಗೆ ತಂಡದ ಕೋಚ್ ಜಾಕಿರ್ ಅಹಮದ್ ಅವರು ಹಾಗೂ ತಂಡದ ಮ್ಯಾನೇಜರ್ ಸಯ್ಯದ್ ಸೈಫುಲ್ಲಾ ಅವರು ಶುಭಾಶಯಗಳನ್ನು ತಿಳಿಸಿದ್ದಾರೆ.


Share