ಬಳ್ಳಾರಿ ಈಶಾನ್ಯ ಪದವಿಧರ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಚಂದ್ರಶೇಖರ್ ಪಾಟಿಲ್ ರವರ ಕುಟುಂಬ ಸಮಾಜಸೇವೆಯ ಕುಟುಂಬವಾಗಿದ್ದು ಅವರ ತಂದೆ ಕಾಂಗ್ರೆಸ್ ಪಕ್ಷದಿಂದ ಶಾಸಕರಾಗಿ ಸಚಿವರಾಗಿ ತಮ್ಮ ಕೆಲಸವನ್ನು ನಿಭಾಯಿಸಿದ್ದಾರೆ, ಇಂತ ಕುಟುಂಬದಿAದ ಸ್ಪರ್ಧಿಸಿರುವ ಚಂದ್ರಶೇಖರ್ ಪಾಟೀಲ್ ರವರಿಗೆ ಬ್ಯಾಲೆಟ್ ಪೇಪರ್‌ನಲ್ಲಿ ಕ್ರಮ ಸಂಖ್ಯೆ ಎರಡರಲ್ಲಿ ಒಂದು ಎಂದು ಮಾರ್ಕ್ ಮಾಡುವ ಮೂಲಕ ತಮ್ಮ ಪ್ರಥಮ ಪ್ರಾಸಸ್ತö್ಯದ ಮತ ನೀಡಿ ಗೆಲ್ಲಿಸಬೇಕೆಂದು ಪದವಿಧರರಿಗೆ ಮನವಿ ಮಾಡಿದರು.
ಅವರು ಇಂದು ನಗರದ ಕೌಲ್ ಬಜಾರ್ ಪ್ರದೇಶದಲ್ಲಿನ ರಾಯಲ್ ಬಿ.ಎಡ್ ಕಾಲೇಜಿನಲ್ಲಿ ಅಖಿಲ ಭಾರತ ರಾಹುಲ್ ಗಾಂಧಿ ಬ್ರಿಗೇಡ್‌ನ ಸಂಸ್ಥಾಪಕರಾದ ಅಖಿಲ್ ಅಹಮ್ಮದ್ ಇವರ ನೇತೃತ್ತದಲ್ಲಿ ನಡೆದ ಪ್ರಚಾರ ಕಾರ್ಯಕ್ರಮದ ಸಭೆಯಲ್ಲಿ ಮತಯಾಚಿಸಿ ಮಾತನಾಡಿ, ಕಾಂಗ್ರೆಸ್ ಪಕ್ಷವು ಶೈಕ್ಷಣಿಕ ಕ್ಷೇತ್ರದ ಅಬಿವೃದ್ಧಿಗೆ ಬಹಳಷ್ಟು ಒತ್ತು ನೀಡಿದೆ ಇದರಿಂದ ಕೊಟ್ಯಾಂತರ ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ, ಹಾಗೆ ಹೈದ್ರಾಬಾದ್ ಕರ್ನಾಟಕದಲ್ಲಿ 371/ಜೆ ಜಾರಿಗೊಳಿಸಿ ಸ್ಥಳೀಯ ವಿದ್ಯಾರ್ಥಿಗಳಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿಯನ್ನು ಒದಗಿಸಿದೆ, ಮತ್ತು ಚಂದ್ರಶೇಖರ್ ಪಾಟಿಲ್ ಅವರ ತಂದೆ ಬಸವರಾಜ ಪಾಟೀಲ್ ಹುಮನಾಬಾದ್ ಇವರು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಸಚಿವರಾಗಿದ್ದಾಗ ಸಂಡೂರಿನ ಎನ್.ಎಮ್.ಡಿ.ಸಿ ಯಲ್ಲಿ ಸುಮಾರು ಎರಡು ಸಾವಿರ ಹುದ್ದೆಗಳು ಉತ್ತರ ಭಾರತದವರ ಪಾಲಾಗುತ್ತಿದ್ದನ್ನು ತಡೆಹಿಡಿದು ಸ್ಥಳೀಯ ನಿರುದ್ಯೋಗಿಗಳಿಗೆ ನೀಡುವಂತೆ ಅಗ್ರಹಿಸಿದ್ದಾರು ಎಂದು ಹಿಂದಿನ ಘಟನೆಯನ್ನು ಮೆಲುಕು ಹಾಕಿದರು.
ಈ ಸಂದರ್ಭದಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ವಿಜಯನಗರ ಪತನಾನಂತರ ಮಸ್ಲಿಂ ಜನಾಂಗದ ಸಾಂಸ್ಕೃತಿಕ ಪಲ್ಲಟ ಎಂಬ ಆಧ್ಯಯನದ ಮಹಾಪ್ರಬಂಧಕ್ಕೆೆ ಗೌರವ ಡಾಕ್ಟರೇಟ್ (ಪಿ.ಎಚ್‌ಡಿ) ಪದವಿ ಪಡೆದ ಮಕ್ಬುಲ್ ಬೇಗಂ ಇವರನ್ನು ರಾಯಲ್ ಬಿ.ಎಡ್ ಕಾಲೇಜ್ ಆಡಳಿತ ಮಂಡಳಿಯಿAದ ಗೌರವಿಸಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಲಿಡ್ಕರ್ ಅಧ್ಯಕ್ಷ ಮುಂಡ್ರಿಗಿ ನಾಗರಾಜ್, ಬುಡಾ ಅಧ್ಯಕ್ಷ ಜೆ.ಎಸ್ ಆಂಜಿನೇಯಲು, ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ಹುಮಾಯೂನ್‌ಖಾನ್, ಡಿ.ಸಿ.ಸಿ ಅಧ್ಯಕ್ಷ ಅಲ್ಲಂ ಪ್ರಶಾಂತ್, ಕಾಂಡ್ರಾ ಸತೀಶ್‌ಕುಮಾರ್, ಡಿ.ಸಿ.ಸಿ ಕಾರ್ಯಾಧ್ಯಕ್ಷ ಬೋಯಾಪಾಟಿ ವಿಷ್ಣುವರ್ಧನ್, ಪಾಲಿಕೆ ಸದಸ್ಯರಾದ ಆಸೀಫ್ ಅಲಿ ಮತ್ತು ನಾಮನಿರ್ದೇಶಿತ ಸಮೀರ್, ರಾಬಿನ್, ವಸಂತ್, ಅನ್ವರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.