ಸಿರುಗುಪ್ಪ ನಗರದ ತಾಲೂಕಿನ ಆಹಾರ ನಿರೀಕ್ಷಕರಾದ ಟೀ ಮಹಾ ರುದ್ರಗೌಡ ಇವರಿಗೆ ಸಿರುಗುಪ್ಪ ಪೊಲೀಸ್ ಠಾಣೆಯ ಪಿಎಸ್ಐ ತಿಮ್ಮಣ್ಣ ನಾಯಕ್ ಇವರ ಕರೆಯ ಮಾಹಿತಿಯೊಂದಿಗೆ ಬೆಳಗಿನ ಜಾವ ಸಮಯ ಸುಮಾರು 3:30 ಗಂಟೆಗೆ ಮಾನ್ಯ ತಹಸೀಲ್ದಾರ್ ಅನುಮತಿಯನ್ನು ಪಡೆದು.ಸಿರುಗುಪ್ಪ ತಾಲೂಕಿನ ಗಡಿಭಾಗದ ಆದೋನಿಗೆ ಹೋಗುವ ರಸ್ತೆಯಲ್ಲಿ ಏ ಪಿ 21 ಟಿ ಏ 2660 ಟಾಟಾ ಕಂಪನಿಯ ವಾಹನದಲ್ಲಿ ಆಂಧ್ರಪ್ರದೇಶದ ಹೊಳಗುಂದಿ ಗ್ರಾಮದಿಂದ ಸಿರುಗುಪ್ಪ ದ ಕಡೆಗೆ ಅಕ್ರಮವಾಗಿ ಸಾಗಿಸುತ್ತಿರುವ ಸರ್ಕಾರದ ವಿವಿಧ ಯೋಜನೆಗಳ ಮತ್ತು ಬಡವರ ಪಡಿತರ ಅಕ್ಕಿಯ ವಾಹನವನ್ನು ಮತ್ತು ಆರೋಪಿಯಾದ ಹೊಳಗುಂದಿ ಗ್ರಾಮದ ಕೊಂಡ ಪೆದ್ದ ಮಾರಣ್ಣ ಡ್ರೈವರ್ ಈತನ ಮೇಲೆ ಆಹಾರ ನಿರೀಕ್ಷಕರದ ಟಿ ಮಹಾ ರುದ್ರಗೌಡ ಸಿರುಗುಪ್ಪ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೇನೆ , ಈ ದೂರಿನ ಮೇರೆಗೆ ಪೊಲೀಸರು ಮುಂದಿನ ತನಿಖೆಯನ್ನು ಆರಂಭಿಸಲಿದ್ದಾರೆ ಎಂದು ಆಹಾರ ನಿರೀಕ್ಷಕ ಟಿ ಮಹಾ ರುದ್ರಗೌಡ ಮಾಧ್ಯಮದವರೊಂದಿಗೆ ತಮ್ಮ ಅಭಿಪ್ರಾಯವನ್ನು ತಿಳಿಸಿದರು.
ವರದಿ ಶೇಖರ್ ಹೆಚ್