ರಾಜ್ಯದ ಎಲ್ಲಾ ಸರ್ಕಾರಿ ಸಂಸ್ಥೆ ಗಳಲ್ಲಿ ಮತ್ತು ಸಾರ್ವಜನಿಕ ವಲಯದ ಘಟಕಗಳಲ್ಲಿ ಕರ್ನಾಟಕದ ಕನ್ನಡಿಗರಿಗೆ ನೂರರಷ್ಟು ಮೀಸಲಾತಿ ನೀಡಬೇಕಾಗಿತ್ತು ಆದರೆ ಸರ್ಕಾರ ಕನ್ನಡಿಗರನ್ನು ಕಡೆಗಣಿಸಿ ಬೇರೆ ರಾಜ್ಯಗಳಿಂದ ಬರುವ ವಲಸೆ ಕಾರ್ಮಿಕರಿಗೆ ಆದ್ಯತೆ ನೀಡುತ್ತಿದೆ ಇದನ್ನು ನಮ್ಮ ಕರ್ನಾಟಕ ಸೇನೆ ಖಂಡಿಸುತ್ತದೆ ಅದೇ ರೀತಿಯಾಗಿ 1984ರ ಇಸ್ವಿಯಲ್ಲಿ ಸರಕಾರಕ್ಕೆ 58 ಶಿಫಾರಸು ಅಂಶಗಳನ್ನು ಒಳಗೊಂಡ ಒಂದು ವರದಿಯನ್ನು ಸಲ್ಲಿಸಿತು ಅದುವೇ ಡಾ ಸರೋಜಿನಿ ಮಹಿಷಿ ವರದಿ ರಾಜ್ಯದ ಎಲ್ಲ ಕೈಗಾರಿಕಾ ಘಟಕಗಳಲ್ಲಿ ಸಿಬ್ಬಂದಿ ಹಾಗೂ ಅಧಿಕಾರಿಗಳ ನೇಮಕಾತಿಯಲ್ಲಿ ಕನ್ನಡಿಗರಿಗೆ ಮೊದಲು ಆದ್ಯತೆ ನೀಡಬೇಕು ಮತ್ತು ಕರ್ನಾಟಕದ ಕನ್ನಡಿಗರಿಗೆ ಮೊದಲು ಉದ್ಯೋಗ ಸಿಗಬೇಕು ಮತ್ತು ಉದ್ಯೋಗದ ನೇಮಕಾತಿಯ ವಿಚಾರ ಬಂದಾಗ ಕನ್ನಡಿಗರನ್ನು ಕಡೆಗಣಿಸಲಾಗುತ್ತಿದೆ ಇದಕ್ಕೆಲ್ಲ ಕಡಿವಾಣ ಹಾಕಬೇಕಾದರೆ ಡಾ ಸರೋಜಿನಿ ಮಹಿಷಿ ವರದಿ ಜಾರಿಗೆ ಬರಬೇಕು ಆದಕಾರಣ ಮುಂದಿನ ಯುವ ಪೀಳಿಗೆಯ ಭವಿಷ್ಯಕ್ಕೋಸ್ಕರ ಪ್ರತಿಯೊಬ್ಬ ಸ್ವಾಭಿಮಾನಿ ಕನ್ನಡಿಗರು ರಾಜ್ಯ ಸರ್ಕಾರದ ವಿರುದ್ಧ ಪ್ರತಿಯೊಬ್ಬ ಸ್ವಾಭಿಮಾನಿ ಕನ್ನಡಿಗರು ಸರಕಾರಕ್ಕೆ ಆಗ್ರಹಿಸಬೇಕಿದೆ ಎಂದು ನಮ್ಮ ಕರ್ನಾಟಕ ಸೇನೆ ಸಾಮಾಜಿಕ ಜಾಲತಾಣ ರಾಜ್ಯ ಸಂಚಾಲಕರಾದ ಕಲ್ಯಾಣ್ ಕುಮಾರ್ ಕಚೇರಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ..