ಕಾರು ಚಾಲಕನ ಅಜಾಗರುಕತೆಗೆ ಬೆಳ್ಳಂ ಬೆಳಿಗ್ಗೆ ಭೀಕರ ಅಪಘಾತ:

ಕಾರು ಚಾಲಕನ ಅಜಾಗರುಕತೆಗೆ ಬೆಳ್ಳಂ ಬೆಳಿಗ್ಗೆ ಭೀಕರ ಅಪಘಾತ:

Share

ಹಾಸನ: ಅಜಾಗರುಕತೆಯಲ್ಲಿ ಚಾಲಕನು ವೇಗವಾಗಿ ಕಾರು ಚಾಲನೆ ಮಾಡಿದ ಪರಿಣಾಮ ಡಿವೆಡರ್ ಗೆ ಡಿಕ್ಕಿ ಹೊಡೆದು ಪಲ್ಠಿಯಾಗಿ ಪಕ್ಕದ ರಸ್ತೆ ಮೇಲೆ ಬಿದ್ದು, ಎದುರಿನಿಂದ ಬರುತ್ತಿದ್ದ ಕೊರಿಯರ್ ಲಾರಿಗೆ ಡಿಕ್ಕಿಯಾಗಿ ಅಪಘಾತದಲ್ಲಿ ಕಾರಿನಲ್ಲಿದ್ದ ಒಂದೆ ಕುಟುಂಬದ ಆರು ಜನರು ಸ್ಥಳದಲ್ಲೆ ಸಾವನಪ್ಪಿದ ದುರ್ಘಟನೆ ಭಾನುವಾರ ಬೆಳ್ಳಂ ಬೆಳಿಗ್ಗೆ ತಾಲೂಕಿನ ಕಂದಲಿ ಗ್ರಾಮದ ಸಮೀಪ ರಾಷ್ಟ್ರೀಯ ಹೆದ್ದಾರಿ ೭೫ ರಲ್ಲಿ ನಡೆದಿದೆ.

 ಟೊಯೋಟಾ ಇಟಿಯೋಸ್ ಕಾರಿನಲ್ಲಿ ಬಾಲಕ ಚೇತನ್, ಸುನಂದಾ, ನೇತ್ರಾ, ರವಿಕುಮಾರ್, ನಾರಾಯಣಪ್ಪ ಹಾಗೂ ಕಾರು ಚಾಲಕ ರಾಕೇಶ್ ಇವರು ಚಿಕ್ಕಬಳ್ಳಪುರ ಮೂಲದವರೆಂದು ತಿಳಿದು ಬಂದಿದೆ. ಗೋವಿಂದಪ್ಪರಿಗೆ ಚಿಕಿತ್ಸೆ ಕೊಡಿಸಿ ವಾಪಸ್ ಬರುತ್ತಿದ್ದಾಗ ಬೆಳಿಗ್ಗೆ ಸುಮಾರು ೫:೩೦ ರಲ್ಲಿ ಆಲೂರು ರಾಷ್ಟ್ರೀಯ ಹೆದ್ದಾರಿ ೭೫ ರಲ್ಲಿ ಕಾರು ವೇಗವಾಗಿ ಬರುತ್ತಿದ್ದು, ನಿದ್ದೆಯ ಮಂಪರಿನಲ್ಲಿ ಇದ್ದ ಚಾಲಕನು ವೇಗದಲ್ಲಿ ಕಾರು ನಿಯಂತ್ರಣಕ್ಕೆ ಸಿಗದೇ ಡಿವೈಡರ್ ಗೆ ಡಿಕ್ಕಿ ಹೊಡೆದು ಪಕ್ಕದ ರಸ್ತೆಗೆ ಕಾರು ಹಾರಿ ಹಾಸನದ ಕಡೆಯಿಂದ ಬರುತ್ತಿದ್ದ ಕೊರಿಯರ್ ಲಾರಿಗೆ ಡಿಕ್ಕಿ ಹೊಡೆದು ಚಕ್ರಕ್ಕೆ ಸಿಕ್ಕಿಕೊಂಡು ಕೆಲ ದೂರು ಕಾರು ಹೋಗಿದೆ. ವೇಗಕ್ಕೆ ಕಾರು ಸಂಪೂರ್ಣ ಜಜ್ಜಿ ಹೋಗಿದ್ದು, ಕಾರಿನಲ್ಲಿದ್ದ ೬ ಜನರ ದೇಹ ಛಿದ್ರ ಛಿದ್ರವಾಗಿ ಸ್ಥಳದಲ್ಲೆ ಸಾವನಪ್ಪಿದ್ದಾರೆ. ಎಷ್ಟು ಸಮಯ ನಂತರ ಪೊಲೀಸ್ ಮತ್ತು ಅಗ್ನಿಶಾಮಕ ದಳಕ್ಕೆ ಕರೆವ ಮಾಡಿದ್ದು, ತಕ್ಷಣ ಸ್ಥಳಕ್ಕೆ ಬಂದು ಮೃತ ದೇಹಗಳನ್ನು ಅಂಬ್ಯೂಲೆನ್ಸ್ ವಾಹನದಲ್ಲಿ ಹಾಸನದ ಸರಕಾರಿ ಆಸ್ಪತ್ರೆಗೆ ಸಾಗಿಸಿದ್ದಾರೆ. ನಂತರ ಜೆಸಿಬಿ ಮೂಲಕ ಅಪಘಾತ ವಾಹನವನ್ನು ತೆರವುಗೊಳಿಸಲಾಯಿತು. ಸ್ಥಳಕ್ಕೆ ಎಸ್ಪಿ ಮೊಹಮದ್ ಸುಜೀತಾ, ಡಿವೈಎಸ್ಪಿ ಇತರರು ಆಗಮಿಸಿ ಪರಿಶೀಲನೆ ನಡೆಸಿದರು.

Share