ಅಂತೂ ಇಂತೂ ಬಂತು ತಡವಲಗಾ ಕೆರೆಗೆ ನೀರು ರೈತರ ಹೋರಾಟಕ್ಕೆ ಸಿಕ್ಕ ಫಲ

ಅಂತೂ ಇಂತೂ ಬಂತು ತಡವಲಗಾ ಕೆರೆಗೆ ನೀರು ರೈತರ ಹೋರಾಟಕ್ಕೆ ಸಿಕ್ಕ ಫಲ

Share

ಹೌದು ವಿಜಯಪೂರ ಜಿಲ್ಲೆಯ ಇಂಡಿ ತಾಲ್ಲೂಕಿನ ತಡವಲಗಾ ಗ್ರಾಮದಲ್ಲಿ ಇದೆ ದಿನಾಂಕ 24-05-2024 ರಂದು ಭಾರತೀಯ ಕಿಸಾನ್ ಸಂಘದ ರಾಜ್ಯ ಅಧ್ಯಕ್ಷರಾದ ಬೀಮಸಿಂಗ್ ಕೊಕರೆ ಅವರ ನೇತೃತ್ವದಲ್ಲಿ ಇಂಡಿ ತಾಲ್ಲೂಕಿನ ತಡವಲಗಾ ಗ್ರಾಮದ ಜೋಡುಗುಡಿಯ ಹತ್ತಿರ ಇಂಡಿ -ವಿಜಯಪೂರ ರಾಜ್ಯ ಹೆದ್ದಾರಿಯ ಬಳಿ ಸುಮಾರು ಎರಡು ಗಂಟೆಗಳ ಕಾಲ ರಸ್ತೆ ತಡೆ ಪ್ರತಿಭಟನೆ ಮಾಡಲಾಯಿತು , ಆದರೂ ಫಲ ನೀಡಲಿಲ್ಲ , ಆದರೂ ಎದೆಗುಂದದ ಅಧ್ಯಕ್ಷರು ಹಾಗೂ ರೈತರು ಪ್ರತಿಭಟನೆ ಮುಂದುವರಿಸಿದರು, ನಂತರ ರಾಜ್ಯ ಅಧ್ಯಕ್ಷರು ಸಂಬಂದ ಪಟ್ಟ ಸಚಿವರಿಗೆ, ಶಾಸಕರಿಗೆ, ಅಧಿಕಾರಿಗಳ ಸಂಪರ್ಕ ಮಾಡಿ ಕೆರೆ ನೀರು ತುಂಬಿಸುವಲ್ಲಿ ಯಶಸ್ವಿಯಾಗಿದ್ದಾರೆ,ನಂತರ ಮಾತನಾಡಿದ ಭಾರತೀಯ ಕಿಸಾನ್ ಸಂಘದ ಜಿಲ್ಲಾ ಅಧ್ಯಕ್ಷರಾದ ಮಲ್ಲನಗೌಡ ಪಾಟೀಲ ಡೋಮನಾಳ ಮಾತನಾಡಿ KBJNL ಅಧಿಕಾರಿಗಳು ಕೊನೆಗೂ ರೈತರ ಹೋರಾಟಕ್ಕೆ ಸ್ಪಂದಿಸಿದ ತಡವಲಗಾ ಕೆರೆಗೆ ನೀರು ಹರಿಸಿರುವುದು ಸ್ವಾಗತಾರ್ಹ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ,ನಂತರ ಮಾತನಾಡಿದ ಭಾರತೀಯ ಕಿಸಾನ್ ಸಂಘದ ರಾಜ್ಯ ಉಪಾಧ್ಯಕ್ಷರಾದ ಗುರುನಾಥ ಬಗಲಿ ಅವರನ್ನು ಸಂಪರ್ಕಿಸಿದ್ದಾಗ ನಮ್ಮೊಂದಿಗೆ ಮಾತನಾಡಿದ ಅವರು ನಾವು ಎರಡು ಬೇಡಿಕೆಗಳನ್ನು ಮುಂದಿಟ್ಟು ಹೋರಾಟ ಮಾಡಿದಿವು ಒಂದು ತಡವಲಗಾ , ಹಂಜಗಿ, ಅಥರ್ಗಾ,ನಿಂಬಾಳ ಕೆರೆಗಳನ್ನು ತುಂಬಿಸಬೇಕು, ಎರಡನೇದು ಗುತ್ತಿ ಬಸವಣ್ಣ ಏತ ನೀರಾವರಿ ಇಂಡಿ ಕಾಲುವೆ ಮೂಲಕ ಟೇಲ್ ಎಂಡ್ ಅವರಿಗೆ ನೀರು ಹರಿಸಬೇಕು ಎಂಬೂವುದು ನಮ್ಮ ಬೇಡಿಕೆ ಆಗಿತ್ತು, ಆದರೆ ಕೆರೆಗಳಿಗೆ ನೀರು ಬಿಟ್ಟಿದ್ದು ಸಂತಸ ತಂದಿದೆ ಹಾಗೂ ಇಂಡಿ ಗುತ್ತಿ ಬಸವಣ್ಣ ಏತ ನೀರಾವರಿ ಕಾಲುವೆ ಮೂಲಕ ನೀರು ಹರಿಸಿದರೆ ಇನ್ನಷ್ಟು ಸಂತೋಷ ಪಡುತ್ತಿದ್ದೆವು, ಕೆರೆ ನೀರು ಹರಿಸಲು ಶ್ರಮಿಸಿದ ಇಂಡಿ ಕ್ಷೇತ್ರದ ಶಾಸಕರಾದ ಯಶವಂತರಾಯಗೌಡ ಪಾಟೀಲ ಅವರಿಗೆ ತುಂಬಾ ಧನ್ಯವಾದಗಳು, ಹಾಗೂ ಕಾಲುವೆಗೆ ನೀರು ಹರಿಸಲು ಶಾಸಕರು ಪ್ರಯತ್ನ ಪಡಬೇಕು,ಈ ಹೋರಾಟದಲ್ಲಿ ತಡವಲಗಾ ಹಾಗೂ ಸುತ್ತಮುತ್ತಲಿನ ರೈತರು ಸಹಕಾರದಿಂದ ಎಲ್ಲರೂ ಕೂಡಿ ಶಾಂತಿಯುತವಾಗಿ ಹೋರಾಟ ಮಾಡಿದಿವು, ನಮ್ಮ ಹೋರಾಟಕ್ಕೆ ಸ್ಪಂದಿಸಿದ ಜಿಲ್ಲಾ ಆಡಳಿತ ,ತಾಲೂಕು ಆಡಳಿತ ಅಧಿಕಾರಿಗಳು ತಡವಲಗಾ ಕೆರೆಗೆ ನೀರು ಹರಿಸಿ ತಮ್ಮ ಮಾತನ್ನು ಉಳಿಸಿಕೊಂಡು ರೈತರಿಗೆ ಹಾಗೂ ಜನ ಜಾನುವಾರುಗಳಿಗೆ ಕುಡಿಯುವ ನೀರಿನ ಬವಣೆಯನ್ನು ನಿಗಿಸಿದ್ದಾರೆ, ಎಲ್ಲಾ ಅಧಿಕಾರಿಗಳು ಹಾಗೂ ಹೋರಾಟಕ್ಕೆ ಬೆಂಬಲ ನೀಡಿದ ಎಲ್ಲ ರೈತ ಬಾಂಧವರಿಗು ತುಂಬಾ ಧನ್ಯವಾದಗಳು ಎಂದು ಹೇಳಿದರು.ಏನೇ ಇರಲಿ ರೈತರ ಬೇಡಿಕೆಗೆ ಸ್ಪಂದಿಸಿ ತಡವಲಗಾ ಕೆರೆಗೆ ನೀರು ಹರಿಸಿ,ನೀರಿನ ಬವಣೆ ನೀಗಿಸುವಲ್ಲಿ ಯಶಸ್ವಿಯಾದ , ಶಾಸಕರಿಗೂ,ಅಧಿಕಾರಿಗಳಿ


Share