ವಿಶ್ವಕನ್ನಡ ಸೇವಾ ರತ್ನ ರಾಷ್ಟ್ರ ಪ್ರಶಸ್ತಿ ಸ್ವೀಕರಿಸಿದ ಭಟ್ಕಳದ ಸಾಮಾಜಿಕ ಹೋರಾಟಗಾರ ಈರಾ ನಾಯ್ಕ್ ಚೌತನಿ

ವಿಶ್ವಕನ್ನಡ ಸೇವಾ ರತ್ನ ರಾಷ್ಟ್ರ ಪ್ರಶಸ್ತಿ ಸ್ವೀಕರಿಸಿದ ಭಟ್ಕಳದ ಸಾಮಾಜಿಕ ಹೋರಾಟಗಾರ ಈರಾ ನಾಯ್ಕ್ ಚೌತನಿ

Share

ಭಟ್ಕಳ-ವಿಶ್ವ ದರ್ಶನ ಕನ್ನಡ ದಿನ ಪತ್ರಿಕೆ ಹುಬ್ಬಳ್ಳಿ ವತಿಯಿಂದ ಕೊಡಮಾಡುವ 2024 ನೆ ಸಾಲಿನ ವಿಶ್ವ ಕನ್ನಡ ಸೇವಾ ರತ್ನ ರಾಷ್ಟ್ರ ಪ್ರಶಸ್ತಿಯನ್ನು ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಸಾಮಾಜಿಕ ಹೋರಾಟಗಾರ ಈರಾ ಡಿ ನಾಯ್ಕ ಚೌತನಿ ಅವರು ವಿಜಯನಗರ ಜಿಲ್ಲೆ ಹೊಸಪೇಟೆ ತಾಲೂಕಿನ ಹಂಪಿ ಹಾಗೂ ಕಂಪ್ಲಿ ರಸ್ತೆಯ ಕಮಲಾಪುರ ಗ್ರಾಮದ ರೈತ ಸಮುದಾಯ ಭವನದಲ್ಲಿ ದಿನಾಂಕ 26.05.2024 ರವಿವಾರ ಬೆಳಿಗ್ಗೆ 11ಗಂಟೆಗೆ ಸರಿಯಾಗಿ ನಡದ 4 ನೇ ಭಾವೈಕ್ಯತೆಯ ಸಮ್ಮೇಳನದಲ್ಲಿ ಭಾಗವಹಿಸಿ ಗಜೇಂದ್ರಗಡದ ಶ್ರೀ ಕಾಲಜ್ಞಾನ ಬ್ರಹ್ಮ ಬಸವಮಹಾನಂದ ಸ್ವಾಮೀಜಿಗಳ ಸಮ್ಮುಖದಲ್ಲಿ ವಿಶ್ವ ಕನ್ನಡ ಸೇವಾ ರತ್ನ ಪ್ರಶಸ್ತಿಯನ್ನು ಸಂಘಟಕರಾದ ಡಾ.ಎಸ್.ಎಸ್ ಪಾಟೀಲ್ ಹುಬ್ಬಳ್ಳಿ ಅವರಿಂದ ಸ್ವೀಕರಿಸಿದರು. ಭಟ್ಕಳದ ಸಾಮಾಜಿಕ ಹೋರಾಟಗಾರ ಈರಾ.ಡಿ.ನಾಯ್ಕ್ ಅವರಿಗೆ ಸಂಘಟಕರಾದ ಡಾ.ಎಸ್.ಎಸ್ ಪಾಟೀಲ್ ಹುಬ್ಬಳ್ಳಿ ಅವರು ಶಾಲು ಹೊದಿಸಿ, ಹಾರ ಹಾಕಿ, ವಿಶ್ವ ಕನ್ನಡ ಸೇವಾ ರತ್ನ ಶಾಶ್ವತ ಪ್ರಶಸ್ತಿ ಫಲಕ ನೀಡಿ ಸನ್ಮಾನಿಸಿದರು.ಸಂಘಟಕರಾದ ಡಾ.ಎಸ್.ಎಸ್ ಪಾಟೀಲ ಅವರು ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಈರಾ ನಾಯ್ಕ್ ಚೌತನಿ ಅವರ ದಶಕಗಳ ಕಾಲದ ಸಮಾಜಸೇವೆ , ಕನ್ನಡ ಪರ ಹೋರಾಟ ಮತ್ತು ಸಾಮಾಜಿಕ ಚುಟುವಟಿ ಕೆಗಳನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ನೀಡಿರುವುದಾಗಿ ತಿಳಿಸಿದ್ದಾರೆ.


Share