ಹುಣ್ಣಿಮೆಯ ಕಾರ್ಯಕ್ರಮ : ಮಾಡಾಳು ಶಿವಬಸವ ಕುಮಾರಾಶ್ರಮ.

ಹುಣ್ಣಿಮೆಯ ಕಾರ್ಯಕ್ರಮ : ಮಾಡಾಳು ಶಿವಬಸವ ಕುಮಾರಾಶ್ರಮ.

Share

ಅರಸೀಕೆರೆ ತಾಲ್ಲೋಕ್, ಕಣಕಟ್ಟೆ ಹೋಬಳಿ, ಮಾಡಾಳು ಗ್ರಾಮದಲ್ಲಿರುವ ಸ್ವತಂತ್ರ ಮಠವಾದ ಶ್ರೀ ಗುರು ಶಿವ ಬಸವ ಕುಮಾರಾಶ್ರಮದಲ್ಲಿ ಲಿಂಗೈಕ್ಯರಾದ
ಶ್ರೀ ನೀಲಲೋಚನ ಮಹಾ ಸನ್ನಿದಿಯವರ ಗದ್ದುಗೆಯಲ್ಲಿ ಪ್ರತಿ ತಿಂಗಳು ಹುಣ್ಣಿಮೆಯಾದ 2 ನೇ ದಿನದಂದು ನಡೆದುಕೊಂಡು ಬಂದ ಹಾಗೆ ಈ ತಿಂಗಳು ದಿನಾಂಕ -25-05-2024ರಶನಿವಾರ ಸಾಯಂಕಾಲ ದೂಪದಾರತಿ, ದೀಪದಾರತಿ, ಮಹಾಮಂಗಳಾರತಿಯನ್ನು ಸ್ವತಂತ್ರ ಶ್ರೀ ಮಠದ ಪೀಠಾಧ್ಯಕ್ಷರಾದ ಶ್ರೀ ಮ ನಿ ಪ್ರ ಸ್ವ ಶ್ರೀ ಶ್ರೀ ಶ್ರೀ ಅಭಿನವ ಶಿವಲಿಂಗ ಮಹಾ ಸ್ವಾಮೀಜಿಯವರ ಅಧ್ಯಕ್ಷತೆಯಲ್ಲಿ & ನೇತೃತ್ವದಲ್ಲಿ ಮಾಡಾಳು, ಸೀತಾಪುರ, ಕೊಪ್ಪಲು,, ಯಾಚಗೊಂಡನಹಳ್ಳಿ, p, ಹೊಸಹಳ್ಳಿ, ಡಿ ಎಂ ಕುರ್ಕೆ, ಕಿತ್ತನಕೆರೆ, ಕೆ,ಶಂಕರನಹಳ್ಳಿ, ಕಡಲಮಗೆ, ಯರೇಹಳ್ಳಿ,, ಹಾಗೂ ಆಜುಬಾಜು ಸದ್ಭಕ್ತರು ನೂರಾರು ಸಂಖ್ಯೆಯಲ್ಲಿ ಸೇರಿ ಈ ಧಾರ್ಮಿಕ ಕಾರ್ಯಕ್ರಮವನ್ನು ಅದ್ದೂರಿಯಾಗಿ ನಡೆಸಿಕೊಟ್ಟರು. ನಂತರ ಈ ಧಾರ್ಮಿಕ ಕಾರ್ಯಕ್ರಮಕ್ಕೆ ಬಂದಂಥಹ ಸದ್ಭಕ್ತರಿಗೆ
ಶ್ರೀ ಮಠದಲ್ಲಿ ಪ್ರಸಾದದ ವ್ಯವಸ್ಥೆಯನ್ನು ಮಾಡಲಾಗಿತ್ತು.ಶ್ರೀ ಮಠದ ಪೂಜ್ಯರಾದ ಶ್ರೀ, ಮ ನಿ ಪ್ರ ಸ್ವ ಶ್ರೀ ಶ್ರೀ ಶ್ರೀ ಅಭಿನವ ಶಿವಲಿಂಗ ಮಹಾ ಸ್ವಾಮೀಜಿಯವರು ಮಾತನಾಡುತ್ತಾ, ಪ್ರತಿ ತಿಂಗಳು ಹುಣ್ಣಿಯಾದ 2 ನೇ ದಿನದಂದು ಶ್ರೀ ಮ ನಿ ಪ್ರ ಸ್ವ ಶ್ರೀ ಶ್ರೀ ಶ್ರೀ ಲಿಂಗೈಕ್ಯ ಶ್ರೀ ನೀಲಲೋಚನ ಮಹಾ ಸನ್ನಿದಿಯವರ ಗದ್ದುಗೆಗೆ,& ಶ್ರೀ ಮ ನಿ ಪ್ರ ಸ್ವ ಶ್ರೀ ಶ್ರೀ ಶ್ರೀ ತೋoಟದಾರ್ಯ ಮಹಾ ಸ್ವಾಮೀಜಿಯವರ ಗದ್ದುಗೆಗೆ ಪೂಜೆ, ದೂಪದಾರತಿ, ದೀಪದಾರತಿ, ಮಹಾ ಮಂಗಳಾರತಿ, ನಂತರ ಪ್ರಸಾದದ ವ್ಯವಸ್ಥೆ ಕೂಡ ಮಾಡಲಾಗಿರುತ್ತದೆ. ಆದ್ದರಿಂದ ಸಮಸ್ತ ನಾಡಿನ ಶ್ರೀ ಮಠದ ಸದ್ಭಕ್ತರು ಹುಣ್ಣಿಮೆಯಾದ 2ನೇ ದಿನದಂದು ಈ ಧಾರ್ಮಿಕ ಕಾರ್ಯಕ್ರಮಕ್ಕೆ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿಕೊಡಬೇಕೆಂದು ಕನಸಿನ ಭಾರತ ಪತ್ರಿಕೆಯ ಮೂಲಕ ಸಮಸ್ತ ನಾಡಿನ ಸದ್ಭಕ್ತರಿಗೆ ತಿಳಿಸಿದರು.


Share