ಬಳ್ಳಾರಿ. ಪ್ರತಿವರ್ಷ ಪದ್ದತಿಯಂತೆ ಈ ವರ್ಷವು ಕೂಡಾ ಬಳ್ಳಾರಿ ನಗರದ ಮುಂಡ್ಲೂರು ರಾಮಪ್ಪ ಸಭಾಂಗಣದಲ್ಲಿ ದಿ ೨೬.೦೬.೨೦೨೪ರಂದು ಬೆಳಿಗ್ಗೆ:೯.೩೦ಕ್ಕೆ ಗಾನಯೋಗಿ ಶಿವಯೋಗಿ ಪಂಡಿತ ಪಂಚಾಕ್ಷರಿ ಗವಾಯಿಗಳ ೮೦ನೇ ಪುಣ್ಯ ಸ್ಮರಣೋತ್ಸವದ ಕಾರ್ಯಕ್ರಮವನ್ನು ಪೂಜ್ಯರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವುದರ ಮೂಲಕ ನೇರವೇರಿಸಲಾಯಿತು.ಗಾನಯೋಗಿ ಪಂಚಾಕ್ಷರಿ ಗವಾಯಿಗಳು, ಯುಗಪುರಷ ಹಾನಗಲ್ಲು ಕುಮಾರ ಶಿವಯೋಗಿಗಳ ಕೃಪಾರ್ಶಿವಾದ ಪಡೆದು ಗದುಗಿನಲ್ಲಿ ವಿರೇಶ್ವರ ಪುಣ್ಯಾಶ್ರಮ ಸ್ಥಾಪನೆ ಮಾಡಿ ಸಾವಿರಾರು ಅಂಧ, ಅಂಗವಿಕಲ ಮಕ್ಕಳಿಗೆ ಮತ್ತು ಸಂಗೀತ ಆಸಕ್ತರಿಗೆ ಅನ್ನ, ಆಶ್ರಯ ನೀಡಿ ಸಂಗೀತ ವಿದ್ದೆಯನ್ನು ಧಾರೆ ಎರೆದರು. ಪಂಡಿತ್ ಪುಟ್ಟರಾಜ ಕವಿ ಗವಾಯಿಗಳಂತ ಶ್ರೇಷ್ಠ ಸಂಗೀತಗಾರ ಸಮಾಜಕ್ಕೆ ನೀಡಿದರು, ಪೂಜ್ಯರು ಸ್ಥಾಪಿಸಿದ ಗದುಗಿನ ವಿರೇಶ್ವರ ಪುಣ್ಯಾಶ್ರಮದಿಂದ ಇಂದಿಗೂ ಕೂಡಾ ಸಾವಿರಾರು ಜನರಿಗೆ ಆಶ್ರಯ ನೀಡಿ ಸಂಗೀತವನ್ನು ಕಲಿಸುವ ಕಾರ್ಯ ನಡೆಯುತ್ತದೆ.ಪೂಜ್ಯರ ಪರೋಪಕಾರ ಜೀವನ ಪ್ರತಿಯೊಬ್ಬರಿಗೂ ಕೂಡಾ ಆದರ್ಶವಾಗಿದೆ ಎಂದು ಬಂಡ್ರಾಳ್ ಎಂ. ಮೃತ್ಯಂಜಯಸ್ವಾಮಿ ತಿಳಿಸಿದರು. ಪೂಜ್ಯರ ಪುಣ್ಯಸ್ಮರಣೆಯ ನಿಮಿತ್ತ ನಗರದ ಸಮರ್ಥನ ಅಂಗವಿಕಲರ ಸಂಸ್ಥೆಯ ಮಕ್ಕಳಿಗೆ ಹಣ್ಣುಗಳನ್ನು ವಿತರಿಸಲಾಯಿತು. ಈ ಕಾರ್ಯಕ್ರಮದಲ್ಲಿ ದರೂರು ಪುರುಷೋತ್ತಮಗೌಡ್ರು, ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷರಾದ ಚಾನಾಳ್ ಶೇಖರ್, ಜೆ.ಎಂ.ಬಸವರಾಜಸ್ವಾಮಿ, ಕಾರದಪುಡಿ ಮುದ್ದನಗೌಡ, ಹೆಚ್.ಎಂ.ಕಿರಣ್, ಜಾಲಿಹಾಳ್ ಶ್ರೀಧರ್, ವನ್ನಗೌಡ, ಚನ್ನಬಸವ, ಶಿವಕುಮಾರ್, ಸೂಗೂರೇಶ್ವರ, ಹೆಚ್.ಎಂ.ಅಮರೇಶ್, ಚೈತನ್ಯ ಷಡಕ್ಷರಿ, ಕಗ್ಗಲ್ ಅಂಗಡಿ ಶಂಕರ್ ಮುಂತಾದವರು ಭಾಗವಹಿಸಿದ್ದರು.
