ಬಳ್ಳಾರಿ .ಆಂಧ್ರ ಕಲಾ ಸಮಿತಿ ವತಿಯಿಂದ ನೂತನವಾಗಿ ಬಳ್ಳಾರಿ ಮೇಯರ್ ಆಗಿರುವ ಮುಲ್ಲಂಗಿ ನಂದೀಶ್ ಅವರಿಗೆ ಸನ್ಮಾನ ಕಾರ್ಯಕ್ರಮವನ್ನು ಐ ಲರ್ನ್ ಐ ಪ್ಲೆ ಇಂಟರ್ನ್ಯಾಷನಲ್ ಶಾಲೆಯಲ್ಲಿ ನೆರವೇರಿಸಲಾಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಂಡ್ಲೂರು ಅನುಪ್ ಕುಮಾರ್ ಅವರು ವಹಿಸಿದ್ದರು. ಮುಖ್ಯ ಅತಿಥಿಯಾಗಿ ಜೆ ಎಸ್ ಆಂಜನೇಯಲು ಬುಡ ಚೇರ್ಮನ್ ವಹಿಸಿದ್ದರು. ಮರಿಸ್ವಾಮಿ ರೆಡ್ಡಿ ಭಸ್ಮಾ ಪ್ರೆಸಿಡೆಂಟ್ ಮಾತನಾಡಿ ಬಳ್ಳಾರಿ ಮಹಾನಗರ ಪಾಲಿಕೆಯಲ್ಲಿನ ಸಮಸ್ಯೆಗಳನ್ನು ವಿವರಿಸಿದ್ದರು.ಈ ವೇಳೆ ಮುಲ್ಲಂಗಿ ನಂದೀಶ್ ಅವರು ಮಾತನಾಡುತ್ತಾ ನನ್ನ ಶಕ್ತಿಯನ್ನು ಮೀರಿ ಬಳ್ಳಾರಿ ನಗರಾಭಿವೃದ್ಧಿಗೆ ಶ್ರಮಿಸುತ್ತೇನೆ, ನನಗೆ ನಿಮ್ಮೆಲ್ಲರ ಸಹಕಾರ ಬಹಳ ಮುಖ್ಯ ಎಂದರು. ಈ ಕಾರ್ಯಕ್ರಮದಲ್ಲಿ ಮುಲ್ಲಂಗಿ ಚಂದ್ರಶೇಖರ್ ಚೌದ್ರಿ ಅಧ್ಯಕ್ಷರು ಆಂಧ್ರ ಕಲಾ ಸಮಿತಿ, ಕೆ ಶಾಮ್ ಸುಂದರ್ ಉಪಾಧ್ಯಕ್ಷರು ಆಂಧ್ರ ಕಲಾ ಸಮಿತಿ, ಭೀಮನೆನೀ ಭಾಸ್ಕರ್ ನಾಯ್ಡು ಸೆಕ್ರೆಟರಿ ಆಂಧ್ರ ಕಲಾ ಸಮಿತಿ , ಕೆ ರಾಜಶೇಖರ್, ಜಯಪ್ರಕಾಶ್, ಆಂಧ್ರಕಲ ಸಮಿತಿ ಸದಸ್ಯರಾದ ವೆಂಕಮಾAಬ, ಸುರೇಂದ್ರಬಾಬು, ಜಿ ವೆಂಕಟೇಶಲು, ನಾಗೇಂದ್ರ,ರ‍್ರಿಸ್ವಾಮಿ, ಕೆ ರಾಮಾಂಜನೇಯಲು ಮತ್ತು ಇತರ ಸದಸ್ಯರು ಭಾಗವಹಿಸಿದ್ದರು.