ಬಳ್ಳಾರಿ ನಗರದ ಪ್ರತಿಷ್ಠಿತ ವಿದ್ಯಾ ಸಂಸ್ಥೆಯಾದ ರಾವ್ ಬಹದ್ದೂರ್ ವೈ ಮಹಾಬಲೇಶ್ವರಪ್ಪ ತಾಂತ್ರಿಕ ಮಹಾವಿದ್ಯಾಲಯದ ಆರ್.ವೈ.ಎಂ.ಇ.ಸಿ-ಇಕೋ ಕ್ಲಬ್,ಬಳ್ಳಾರಿ ಜಿಲ್ಲಾ ಪೊಲೀಸ್ ಕೌಲ್ ಬಜಾರ್ ಸಹಯೋಗದೊಂದಿಗೆ ಆಯೋಜಿಸಿದ ಕಾರ್ಯಕ್ರಮ, ಈ ಮಹತ್ವದ ಕಾರ್ಯಕ್ರಮದಲ್ಲಿ ಚಂದ್ರಕಾAತ ನಂದ ರೆಡ್ಡಿ ಉಪ ಪೊಲೀಸ್ ವರಿಷ್ಠಾಧಿಕಾರಿ ಬಳ್ಳಾರಿ, ಟಿ ಸುಭಾಷ್ ಚಂದ್ರ, ಪೊಲೀಸ್ ನಿರೀಕ್ಷಕ ಕೌಲ್ ಬಜಾರ್,ಜಿವಿ ನಾರಾಯಣ ರೆಡ್ಡಿ ಪ್ರಾದೇಶಿಕ ಔಷಧ ಡ್ರಗ್ಸ್ ದುರ್ಬಳಕೆ ನಿಯಂತ್ರಕರು ಬಳ್ಳಾರಿ,ನಾಗರಾಜ್ ವೈಜ್ಞಾನಿಕ ಅಧಿಕಾರಿ ಪ್ರಾದೇಶಿಕ ಡ್ರಗ್ಸ್ ಪರೀಕ್ಷಾ ಪ್ರಯೋಗಾಲಯ, ಅಧ್ಯಕ್ಷ ಜಾನೇಕುಂಟೆ ಬಸವರಾಜ, ಪ್ರಾಂಶುಪಾಲ ಟಿ ಹನುಮಂತ ರೆಡ್ಡಿ, ಉಪಪ್ರಾಂಶುಪಾಲರಾದ ಸವಿತಾ ಸೊನೊಳಿ, ಡಾ ಪ್ರಭಾವತಿ, ಡಾ ಕೆ ಆರ್ ಭಾಗ್ಯ, ಡಾ ಸೋಮನಾಥ ಸ್ವಾಮಿ, ಡಾ ಆದನ ಗೌಡ, ಡಾ ಲಿಂಗರಾಜ್, ಡಾ ಬಸವರಾಜ ಕುಸುಮನವರ್, ಶ್ರೀಮತಿ ಸೌಮ್ಯ, ರಾಜಶೇಖರ್, ಪ್ರಶಾಂತ್ ಖೇಣಿ ವಿದ್ಯಾರ್ಥಿ ಸಮುದಾಯ ಭಾಗವಹಿಸಿದ್ದರು.ಬಳ್ಳಾರಿನಗರ ಉಪ ಪೊಲೀಸ್ ವರಿಷ್ಠಾಧಿಕಾರಿಗಳಾದ ಚಂದ್ರಕಾAತ ನಂದ ರೆಡ್ಡಿ ಅವರು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಮಾದಕ ವ್ಯಸನದ ಅಪಾಯಕಾರಿ ಪರಿಣಾಮಗಳ ಬಗ್ಗೆ ಅನುಮಾನಗಳನ್ನು ಸ್ಪಷ್ಟಪಡಿಸಿದರು. ಸುಭಾಷ್ ಚಂದ್ರ ಅವರು “ಭಾರತೀಯ ಜನಸಂಖ್ಯೆಯು ೧೪೦ ಕೋಟಿ ದಾಟಿದೆ, ಅದರಲ್ಲಿ ೪೦ ಪ್ರತಿಶತ ಅಂದರೆ ಸುಮಾರು ೫೦ ಕೋಟಿ ಯುವ ಭಾರತೀಯರು, ಇಂದಿನ ಯುವಕರು ಮಾದಕ ವಸ್ತುಗಳೊಂದಿಗೆ ಸಂಪರ್ಕ ಸಾಧಿಸುವ ಮತ್ತು ಅವರು ಮಾದಕ ವ್ಯಸನಿಗಳಾಗುವ ಎಲ್ಲಾ ಪ್ರವೃತ್ತಿಯನ್ನು ಹೊಂದಿದ್ದಾರೆ. ಈ ಪ್ರವೃತ್ತಿಯು ಶಿಕ್ಷಣ ಸಂಸ್ಥೆಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ, ಆದ್ದರಿಂದ ನಾವು ಡ್ರಗ್ಸ್ ದುರುಪಯೋಗ ಮತ್ತು ಅಕ್ರಮ ಸಾಗಾಟದ ಬಗ್ಗೆ ಜಾಗೃತಿ ಮೂಡಿಸಲು ಪ್ರಾರಂಭಿಸಿದ್ದೇವೆ, ಅಂತರಾಷ್ಟ್ರೀಯ ಮಟ್ಟದಲ್ಲಿ ಡ್ರಗ್ಸ್ ದುರುಪಯೋಗ ಮತ್ತು ಅಕ್ರಮ ಸಾಗಾಟದ ಸುಮಾರು ೫೦೦ ಶತಕೋಟಿ ಡಾಲರ್ ಆಗಿದೆ, ಇದು ಕರ್ನಾಟಕ ರಾಜ್ಯ ಸರ್ಕಾರದ ಹಣಕಾಸು ಬಜೆಟ್ಗಿಂತ ಹೆಚ್ಚು, ತಿಳಿದೋ ಅಥವಾ ತಿಳಿಯದೆಯೋ ಮಾದಕ ವ್ಯಸನಿಗಳೊಂದಿಗೆ ಸ್ನೇಹಿತರೆಂದು ನಂಬಿ ಸಂಪರ್ಕದಲ್ಲಿ ಬರುತ್ತೇವೆ. ಇದು ಅಪಾಯಕಾರಿ, ಈ ಬೆಳವಣಿಗೆಯನ್ನು ಆರಂಭದಲ್ಲಿಯೇ ತಪ್ಪಿಸಬೇಕು ಎಂದರು.”ಜಿ ವಿ ನಾರಾಯಣ ರೆಡ್ಡಿ ಮಾತನಾಡುತ್ತಾ. “ ನಾವು ನಮ್ಮ ದೇಶದ ಪ್ರಮುಖ ಕಾರ್ಯಕ್ರಮಗಳ ಇಂಜಿನಿಯರ್ ಡೇ, ಶಿಕ್ಷಕರ ದಿನ ,ತಾಯಂದಿರ ದಿನ ,ಕಾರ್ಮಿಕರ ದಿನ, ಯೋಗ ದಿನ ,ವಿಶ್ವ ಪರಿಸರ ದಿನ ಆಚರಿಸುತ್ತೇವೆ, ಈ ದಿನಗಳ ಉದ್ದೇಶ ಒಳ್ಳೆಯ ಸಂಭಧಗಳು ಬೆಳೆಸುವುದು, ಹಾಗೂ ನಾವು ವಾಸಿಸುವ ಪರಿಸರದ ಸುತ್ತಮುತ್ತಲಿನ ಮಾನವರ ಆರೋಗ್ಯದ ಅಂಶಗಳ ಜೊತೆಗೆ, ಇಂಜಿನಿಯರುಗಳ, ಶಿಕ್ಷಕರ, ಪೋಷಕರ ಪ್ರಾಮುಖ್ಯತೆಯ ಬಗ್ಗೆ ಅರಿವು ಮೂಡಿಸುವುದು ಅದೇ ರೀತಿ ಪ್ರತಿ ವರ್ಷ ಜೂನ್ ೨೬ ರಂದು ದೇಶದ, ವಿಶ್ವದಾದ್ಯಂತ ಡ್ರಗ್ಸ್ ದುರ್ಬಳಕೆ, ಯುವಕರಲ್ಲಿ ಜಾಗೃತಿ ಮೂಡಿಸಲು ಅವುಗಳನ್ನು ರಕ್ಷಿಸಲು ಆಚರಿಸಲಾಗುತ್ತದೆ. ದಯವಿಟ್ಟು ನೆನಪಿಡಿ ಡ್ರಗ್ಸ್ ದುರ್ಬಳಕೆ, ನಿಮ್ಮ ಜೀವನ, ನಿಮ್ಮ ಕುಟುಂಬಕ್ಕೆ, ನೀವು ಬದುಕುವ ಸಮಾಜಕ್ಕೆ ಬಹಳ ಅಪಾಯಕಾರಿ, ಮತ್ತು ನಿಮ್ಮ ಜೀವ£ನ್ನು ಹಾಳು ಮಾಡಬೇಡಿ. ಇದು ನಿಮಗೆ ನನ್ನ ವಿನಂತಿ” ಸಂಸ್ಥೆಯ ಅಧ್ಯಕ್ಷರು ಜಾನಕುಂಟೆ ಬಸವರಾಜ್ ಅವರು, ಅಧ್ಯಕ್ಷೀಯ ಭಾಷಣದಲ್ಲಿ , ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿ, “ನಮ್ಮ ಸಂಸ್ಥೆಗೆ ಸಮಾಜದ ಪ್ರಮುಖ ವ್ಯಕ್ತಿಗಳು ಭೇಟಿ ನೀಡುತ್ತಾರೆ , ಅವರ ಜೀವನದ ಅಮೂಲ್ಯ ಅನುಭವವನ್ನು ನೀಡಿ ಮತ್ತು ನಿಮ್ಮ ಮುಂದಿನ ಜೀವನವನ್ನು ರೂಪಿಸಲು ವಿನಂತಿಸುತ್ತಾರೆ, ನಿಮ್ಮ ತಂದೆ ತಾಯಿ ಅಥವಾ ಪೋಷಕರು. ನಿಮ್ಮಿಂದ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿರುತ್ತಾರೆ, ಇಂತಹ ಮಾದಕ ವ್ಯಸನಕ್ಕೆ ಒಳಗಾಗಿ ಅವರ ನಿರೀಕ್ಷೆಗಳನ್ನು ಹುಸಿಗೊಳಿಸಬೇಡಿ ಮತ್ತು ಪೋಷಕರಿಗೆ ದುಃಖದ ಜೀವನವನ್ನು ಉಂಟುಮಾಡಬೇಡಿ, ನಿಮ್ಮ ಭವಿಷ್ಯವನ್ನು ಹಾಳು ಮಾಡಬೇಡಿ. ನೀವು ವಿಶ್ವೇಶ್ವರಯ್ಯ, ಅಬ್ದುಲ್ ಕಲಾಂ, ಸಿ ವಿ ರಾಮನ್ ಮುಂತಾದ ಮಹಾನ್ ಇಂಜಿನಿಯರಿAಗ್ ವ್ಯಕ್ತಿಗಳಾಗುವುದನ್ನು ಬಯಸಿರಿ ಮತ್ತು ನಿಮ್ಮ ಭವಿಷ್ಯದ ಎಂಜಿನಿಯರಿಗ್ ಜೀವನವನ್ನು ರೂಪಿಸುಕೊಳ್ಳಿರಿ” ಎಂದರು. ವೀ.ವಿ.ಸಂಘದ ಅಧ್ಯಕ್ಷರು ಅಲ್ಲಂ ಗುರುಬಸವರಾಜ, ಉಪಾಧ್ಯಕ್ಷರು ಜಾನೇಕುಂಟೆ ಬಸವರಾಜ, ಕಾರ್ಯದರ್ಶಿಗಳು ಡಾ.ಅರವಿಂದ್ ಪಟೇಲ್, ಸಹ ಕಾರ್ಯದರ್ಶಿಗಳು ಯಾಳ್ಪಿ ಮೇಟಿ ಪಂಪನಗೌಡ, ಕೋಶಾಧಿಕಾರಿಗಳು ಬೈಲುವದ್ದಿಗೇರಿ ರ‍್ರಿಸ್ವಾಮಿ ಶುಭಹಾರೈಸಿದರು.