ಕಲಬುರಗಿ ಜಿಲ್ಲಾ ಹಡಪದ ಸಮಾಜದ ಸಾಮಾನ್ಯ ಸಭೆ ಇದೇ 28 ರಂದು ಈರಣ್ಣ ಸಿ ಹಡಪದ ಸಣ್ಣೂರ ಹೇಳಿಕೆ

ಕಲಬುರಗಿ ಜಿಲ್ಲಾ ಹಡಪದ ಸಮಾಜದ ಸಾಮಾನ್ಯ ಸಭೆ ಇದೇ 28 ರಂದು ಈರಣ್ಣ ಸಿ ಹಡಪದ ಸಣ್ಣೂರ ಹೇಳಿಕೆ

Share

ಕಲಬುರಗಿ:- ದಿನಾಂಕ – 28-05-2024 ರಂದು ಮಂಗಳವಾರ ಬೆಳಿಗ್ಗೆ: 10.30 ಗಂಟೆಗೆ ಕಲಬುರಗಿ ನಗರದಲ್ಲಿರುವ ಶರಣ ಹಡಪದ ಅಪ್ಪಣ್ಣನವರ ಮಂದಿರ ಶಿವಶಕ್ತಿ ನಗರ ಕಲಬುರಗಿಯಲ್ಲಿ ಜಿಲ್ಲಾ ಹಡಪದ ಸಮಾಜ ಸಾಮಾನ್ಯ ಸಭೆ ನಡೆಯಲಿದ್ದು, ಈ ಸಭೆಗೆ ಕಲಬುರಗಿ ತಾಲೂಕಿನ ಒಳಪಡುವ ಎಲ್ಲಾ ತಾಲೂಕಾ ಅಧ್ಯಕ್ಷರು, ಹಾಗೂ ಪದಾಧಿಕಾರಿಗಳು, ನಗರ ಅಧ್ಯಕ್ಷರು, ನಗರ ಪದಾಧಿಕಾರಿಗಳು, ನೌಕರ ಸಂಘದ ಅಧ್ಯಕ್ಷರು, ಹಾಗೂ ಪದಾಧಿಕಾರಿಗಳು, ಕ್ಷೌರಿಕ ಅಂಗಡಿ ಮಾಲೀಕರು, ಸಮಾಜದ ಹಿರಿಯರು ಹಾಗೂ ಯುವಕರು ಈ ಸಭೆಗೆ ಕಡ್ಡಾಯವಾಗಿ ಬರಬೇಕಾಗಿ ವಿನಂತಿ.

ಕಾರಣ ಈ ಸಭೆ ಬಹಳ ಮಹತ್ವದಾಗಿದ್ದು, ಸಮಾಜದ ಬೆಳವಣಿಗೆಯ ಬಗ್ಗೆ ಚರ್ಚೆ ಹಡಪದ ಅಪ್ಪಣ್ಣನವರ ದೇವಸ್ಥಾನದ, ಸಮುದಾಯ ಭವನ, ಜೀರ್ಣೋದ್ದಾರ ಬಗ್ಗೆ ಹಾಗೂ ಇತರೆ ಹತ್ತು ಹಲವಾರು ವಿಷಯಗಳ ಬಗ್ಗೆ ಚರ್ಚೆ ನಡೆಯಲಿದ್ದು, ದಯಮಾಡಿ ಈ ಸಭೆಗೆ ತಾವೆಲ್ಲರೂ ಕಡ್ಡಾಯವಾಗಿ ಆಗಮಿಸಿ ತಮ್ಮ ಸಲಹೆ ಸೂಚನೆಗಳನ್ನು ನೀಡಬೇಕಾಗಿ ತಮ್ಮಲ್ಲಿ ಈ ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಯಬಯಸುತ್ತೇನೆ.


Share