ಸರಕಾರಿ ಹಿರಿಯರು ಪ್ರಾಥಮಿಕ ಶಾಲೆಯ ದುಸ್ಥಿತಿ.

ಸರಕಾರಿ ಹಿರಿಯರು ಪ್ರಾಥಮಿಕ ಶಾಲೆಯ ದುಸ್ಥಿತಿ.

Share

ಯಡ್ರಾಮಿ ತಾಲೂಕಿನ ಕರ್ಕಿಹಳ್ಳಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಡು ಹಗಲೇ ಕುಸಿದು ಬಿದ್ದಿದೆ. ಅದೃಷ್ಟ ವಸ ಶಾಲೆ ರಜೆ ಇದ್ದಾಗ ಈ ಘಟನೆ ನಡದಿದೆ. ಮರಳಿ ಬಾ ಮಗು ಶಾಲೆಗೆ ಎಂಬ ಸರಕಾರದ ಆದೇಶವನ್ನು ಗಾಳಿಗೆ ತುರಿದ ಅಧಿಕಾರಿಗಳು, ಶಾಲೆಯ ಮುಖ್ಯ ಗುರುಗಳು, ಮತ್ತು ಎಸ್ ಡಿ ಎಂ ಸಿ ಅಧ್ಯಕ್ಷರು, ಸರ್ವ ಸದಸ್ಯರು ಹಾಗೂ ಗ್ರಾಮದ ಎಲ್ಲಾ ರಾಜಕೀಯ ಧುರಿಣರು.ಈ ದುರಂತದ ಬಗ್ಗೆ ಯಾರು ಚಿಂತಿಸುತ್ತಿಲ್ಲ. ನಾಳೇನೇ ಶಾಲೆ ಪುನರಾರಂಭವಾಗುತ್ತವೇ. ಮುದ್ದು ಮಕ್ಕಳ ಉಜ್ವಲ ಭವಿಷ್ಯವನ್ನು ಕಟ್ಟಬೇಕೆಂದರೆ ಉತ್ತಮ ನೂರಿತ ಶಿಕ್ಷಕರು, ಉತ್ತಮವಾದ ಕಟ್ಟಡ, ಸುಂದರ ಆಟದ ಮೈದಾನ, ಶುದ್ಧ ಕುಡಿಯುವ ನೀರು, ಮತ್ತು ಶೌಚಾಲಯ, ಈಗಿನ ಮಕ್ಕಳಿಗೆ ಮೂಲಭೂತ ಸೌಕರ್ಯಗಳು ಬೇಕೇ ಬೇಕು. ಅಂದಾಗ ಮಕ್ಕಳ ಬೌದ್ಧಿಕ ಶಿಕ್ಷಣ ಮಟ್ಟ ಮತ್ತು ಸರ್ವತೋಮುಖ ಅಭಿವೃದ್ಧಿಗೆ ಸಾಕ್ಷಿಯಾಗುತ್ತದೆ. ಇದನ್ನು ಗಾಳಿಗೆ ತುರಿದ ಅಧಿಕಾರಿಗಳಿಗೆ ನಾಚಿಕೆಯಾಗಬೇಕು. ಕೂಡಲೇ ಈ ಶಾಲೆಯನ್ನು ಪುನರ್ ನಿರ್ಮಾಣಗೊಳಿಸಿ ಮುದ್ದು ಮಕ್ಕಳಿಗೆ ಮತ್ತು ಶಿಕ್ಷಕರಿಗೆ ಅನುಕೂಲವಾಗುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಪತ್ರಿಕ ಪ್ರಕಟಣೆಯಲ್ಲಿ ವಿಶ್ವನಾಥ ಏನ್. ಪೂಜಾರಿ ಆಗ್ರಹಿಸಿದ್ದಾರೆ.


Share