ಹೊನ್ನಕಿರಣಗಿಯಲ್ಲಿ ವೀರಭದ್ರೇಶ್ವರ ರಥೋತ್ಸವ!

ಹೊನ್ನಕಿರಣಗಿಯಲ್ಲಿ ವೀರಭದ್ರೇಶ್ವರ ರಥೋತ್ಸವ!

Share

ಕಲಬುರಗಿ:– ತಾಲೂಕಿನ ಹೊನ್ನಕಿರಣಗಿ ಗ್ರಾಮದ ಶ್ರೀ ವೀರಭದ್ರೇಶ್ವರ ರಥೋತ್ಸವ ಮೇ 28ರಂದು ಅದ್ದೂರಿಯಾಗಿ ಜರಗಲಿದೆ. ಎಂದು ಮಲ್ಲಿನಾಥ ಬಿ ಸಿನ್ನೂರ ಹಾಗೂ ವೀರಣ್ಣ ಎಂ ಯಳಸಂಗಿ ಜಂಟಿಯಾಗಿ ತಿಳಿಸಿದ್ದಾರೆ
ಮೇ ದಿ.27ರಂದು ಬೆಳಗ್ಗೆ ಸೋಮವಾರ ಶ್ರೀ ವೀರಭದ್ರೇಶ್ವರಗೆ ಗಂಗಸ್ಥಳ ರುದ್ರಾಭಿಷೇಕ ಬಿಲ್ವಾರ್ಜನೆ ಮಾಡಲಾಗುವುದು. ರಾಚೋಟೇಶ್ವರ ಸಂಸ್ಥಾನ ಮಠದ ಪೀಠಾಧಿಪತಿಗಳಾದ ಷ ಬ್ರ. ಚಂದ್ರಗುಂಡ ಶಿವಾಚಾರ್ಯ ಅವರ ದಿವ್ಯ ಸಾನಿಧ್ಯದಲ್ಲಿ ಜರುಗುವುದು. ರಥೋತ್ಸವ ಕಳಸವನ್ನು ವೀರಣ್ಣ ಅಂದಾನಿ ಅವರ ಮನೆಯಿಂದ ತರಲಾಗುವುದು. ಪಶುಪತಿ ಗುಡಿಯವರ ಮನೆಯಿಂದ ಕುಂಭವನ್ನು ತರಲಾಗುವುದು. ಶರಣು ಗೋದಿ ಹಾಗೂ ರಾಜಶೇಖರ್ ಹಿರೇಮಠ ಅವರ ಮನೆಯಿಂದ ನಂದಿಕೋಲ ತರಲಾಗುವುದು. ಮೇ 28 ರಂದು ಮಧ್ಯಾಹ್ನ 3 ಗಂಟೆಗೆ ಪುರವಂತರ ಸೇವೆ. ಸಂಜೆ 6 ಗಂಟೆಗೆ ರಥೋತ್ಸವ ಜರಗುವುದು. ಅಂದು ರಾತ್ರಿ ರೆಬಿನಾಳ ಶ್ರೀ ಬಸವೇಶ್ವರ ಬೈಲಾಟ ಸಂಘದವರಿಂದ ರೇಣುಕಾ ಎಲ್ಲಮ್ಮನ ನಾಟಕ ದೇವಸ್ಥಾನದಲ್ಲಿ ಜರುಗುವುದು. ಶ್ರೀ ವೀರಭದ್ರೇಶ್ವರ ಜಾತ್ರಾ ಮಹೋತ್ಸವದಲ್ಲಿ ಭಾಗಿಯಾಗಿ ತನು ಮನ ಧನದಿಂದ ದೇವರ ಕೃಪೆಗೆ ಪಾತ್ರರಾಗಬೇಕೆಂದು ಭಕ್ತ ಮಂಡಳಿ ತಿಳಿಸಿದೆ


Share