ಹೊನ್ನಾವರದ ಗುಳಿಬೆಲೆ (ಮೊಟೊ) ಊರಿನಲ್ಲಿ ಹೆಬ್ಬಾವು ರಕ್ಷಣೆ

ಹೊನ್ನಾವರದ ಗುಳಿಬೆಲೆ (ಮೊಟೊ) ಊರಿನಲ್ಲಿ ಹೆಬ್ಬಾವು ರಕ್ಷಣೆ

Share

ಹೊನ್ನಾವರ:-ಇತ್ತೀಚ್ಚಿನ ದಿನಗಳಲ್ಲಿ ವರುಣನ ಆಭ೯ಟ ಜೋರಾಗಿದ್ದು ಶರಾವತಿ ನದಿಯು ತುಂಬಿ ತುಳುಕುತ್ತಿದೆ. ಇದೇ ಸಂದರ್ಭದಲ್ಲಿ ಇಂದು ದಿನಾಂಕ 25/06/2024 ರಂದು ಹೊನ್ನಾವರ ತಾಲೂಕಿನ ಮಾವಿನಕುರ್ವ ಗ್ರಾಮದ ಗುಳಿಬೆಲೆ (ಮೊಟೊ) ಊರಿನ ನದಿಯ ತೀರದಲ್ಲಿ ಬಲೆಗೆ ಸಿಕ್ಕಿ ಒದ್ದಾಡುತ್ತಿದ್ದ ಹೆಬ್ಬಾವೊಂದನ್ನು ನೋಡಿ ಅದೇ ಊರಿನ ಅಲೋಶಿಯಸ್ ಅಂತೋನ್ ಲೋಪಿಸರವರು ತಕ್ಷಣವೇ ತಮ್ಮ ಮಿತ್ರರ ಸಹಾಯದೊಂದಿಗೆ ಕಕಿ೯ ಊರಿನ ನಾಗರಾಜ್ ವಾಸುದೇವ್ ಶೇಟ್ ರವರನ್ನು ಕರೆ ಮಾಡಿದರು. ತಕ್ಷಣವೇ ನಾಗರಾಜ್ ವಾಸುದೇವ್ ಶೇಟ್ ರವರು ಕರೆಗೆ ಸ್ಪಂಧಿಸಿ ಸ್ಥಳಕ್ಕೆ ಆಗಮಿಸಿ ಬಲೆಗೆ ಸಿಕ್ಕಿ ಒದ್ದಾಡುತ್ತಿದ್ದ ಹೆಬ್ಬಾವನ್ನು ರಕ್ಷಣೆ ಮಾಡಿ ಮಾನವೀಯತೆ ಮೆರೆದಿದ್ದಾರೆ. ಈ ಹೆಬ್ಬಾವು ಸರಿಸುಮಾರು 6ಅಡಿ ಉದ್ದ ಹಾಗೂ 5 ರಿಂದ 6 ಕೆ.ಜಿ ಇರಬಹುದು. ನಾಗರಾಜ್ ವಾಸುದೇವ್ ಶೇಟ್ ರವರು ಸುಮರು 12 ವರ್ಷಗಳಿಂದ ಈ ಸಮಾಜಸೇವೆ ಮಾಡುತಿದ್ದಾರೆ. ಇವರ ಸಮಾಜ ಸೇವೆಯಲ್ಲಿ ಸುಮಾರು 7200 ನಾಗರ ಹಾವು, 500 ರಕ್ಕು ಹೆಚ್ಚು ಹೆಬ್ಬಾವುಗಳು, 75 ಕ್ಕಿಂತ ಹೆಚ್ಚು ಕಿಂಗ್ ಕೋಬ್ರಾಗಳನ್ನು ಹಿಡಿದು ಸ್ಥಳೀಯ ಅರಣ್ಯ ಇಲಾಖೆಗೆ ಒಪ್ಪಿಸಿರುತ್ತಾರೆ. ವೃತ್ತಿಯಲ್ಲಿ ಇವರು ಅಕ್ಕಸಾಲಿಗರಾಗಿದ್ದರೂ ಸಮಾಜ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಇದು ನಮ್ಮ ಹೊನ್ನಾವರಕ್ಕೆ ಹೆಮ್ಮೆಯ ಸಂಗತಿಯಾಗಿದೆ.
ವರದಿ :- ನೀಲನ ಮಿರಾಂದಾ


Share