ಅಮಾಯಕ ಹೋರಾಟಗಾರನಿಗೆ ಗಡಿಪಾರು: ಸರ್ಕಾರಕ್ಕೆ ಹೈಕೋರ್ಟ್ ಛಿಮಾರಿ.!

ಅಮಾಯಕ ಹೋರಾಟಗಾರನಿಗೆ ಗಡಿಪಾರು: ಸರ್ಕಾರಕ್ಕೆ ಹೈಕೋರ್ಟ್ ಛಿಮಾರಿ.!

Share

ಪೊಲೀಸರೆಂದರೆ ಭಯ ಬೀಳುವ ಈ ಕಾಲದಲ್ಲಿ ಪೊಲೀಸರ ಅಕ್ರಮಗಳ ವಿರುದ್ಧ ಧ್ವನಿ ಎತ್ತಿ ಅವರ ಅಕ್ರಮಗಳನ್ನು ಬಯಲಿಗೆಳೆದು ಮೇಲಧಿಕಾರಿಳಿಗೆ ದೂರು ನೀಡಿ ಅವರ ವಿರುದ್ಧ ಕಾನೂನು ಕ್ರಮಕ್ಕಾಗಿ ಹೋರಾಟ ಮಾಡುತ್ತಿರುವ ಸಾಮಾಜಿಕ ಕಾರ್ಯಕರ್ತ ಶರಣಪ್ಪ ರೆಡ್ಡಿ ಲಖಣಾಪೂರ ಇವರನ್ನು ಕಲಬುರಗಿ ಜಿಲ್ಲೆಯಿಂದ ಗಡಿಪಾರು ಮಾಡುವಂತೆ ಜೇವರ್ಗಿ ಪೊಲೀಸ್ ಠಾಣೆಯ ಪಿಎಸ್ಐ ಪ್ರಸ್ತಾವನೆ ಸಲ್ಲಿಸಿದ್ದರು. ಈ ಪ್ರಸ್ತಾವನೆಯ ಮೇಲಿನ ವಿಚಾರಣೆ ಸಂದರ್ಭದಲ್ಲಿ ಸಹಾಯಕ ಆಯುಕ್ತರು, ಆರೋಪಿಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ಕೊಡದೆ, ನಿರ್ಲಕ್ಷಿಸಿ ಚಿತ್ರದುರ್ಗ ಜಿಲ್ಲೆಗೆ ಗಡಿಪಾರು ಮಾಡಿ ಆದೇಶ ಹೊರಡಿಸಿದ್ದರು. ಅಲ್ಲದೇ, ಈ ಆದೇಶದ ಪ್ರತಿ ಕೊಡಲು ಸತಾಯಿಸಿ ಬರೋಬ್ಬರಿ 46 ದಿನಗಳ ಬಳಿಕ ಆರೋಪಿಗೆ ಆದೇಶದ ಪ್ರತಿ ಕೊಟ್ಟಿದ್ದಾರೆ. ಈ ಅನ್ಯಾಯದ ವಿರುದ್ಧ ಶರಣಪ್ಪ ರೆಡ್ಡಿ ಲಖಣಾಪೂರ ಇವರು ಹೈಕೋರ್ಟ್ ಮೆಟ್ಟಿಲೆರಿದ್ದರು. ಇವರ ಅರ್ಜಿಯನ್ನು ಮಾನ್ಯ ಮಾಡಿದ ಕಲಬುರಗಿ ಹೈಕೋರ್ಟ್ ಪೀಠವು, ಸರ್ಕಾರಕ್ಕೆ ಛಿಮಾರಿ ಹಾಕಿ, ಶರಣಪ್ಪ ರೆಡ್ಡಿ ವಿರುದ್ಧದ ಗಡಿಪಾರು ಆದೇಶಕ್ಕೆ ತಡೆಯಾಜ್ಞೆ ನೀಡಿ ಆದೇಶ ಹೊರಡಿಸಿದೆ.
ಸುಳ್ಳು ಗಡಿಪಾರು ಪ್ರಸ್ತಾವನೆಯನ್ನು ಸಲ್ಲಿಸಿದ ಹಾಗೂ ರಾಜಕೀಯ ಪ್ರಭಾವಕ್ಕೂಳಗಾಗಿ ಆದೇಶವನ್ನು ಹೊರಡಿಸಿದ ಸಹಾಯಕ ಆಯುಕ್ತರ ವಿರುದ್ಧ ಕಾನೂನುನಾತ್ಮಕ ಹೋರಾಟ ಮಾಡುವುದಾಗಿ ಸಾಮಾಜಿಕ ಕಾರ್ಯಕರ್ತರಾದ ಶರಣಪ್ಪ ರೆಡ್ಡಿ ಲಖಣಾಪೂರ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Share

Leave a Reply

Your email address will not be published. Required fields are marked *