ಕಲಬುರಗಿ:– ಇಂದಿನ ಯುವ ಶಕ್ತಿ ಕಾರಣಾಂತರದಿಂದ ಮಾದಕ ವಸ್ತುಗಳ ಸೇವನೆಯ ದುಶ್ಚಟಕ್ಕೆ ಬಲಿಯಾಗುತ್ತಿರುವುದು ತುಂಬಾ ವಿಷಾದನೀಯವಾದ ಸಂಗತಿಯಾಗಿದೆ. ಇದು ಜೀವಕ್ಕೆ ಹಾನಿ ಉಂಟು ಮಾಡುವುದರ ಜೊತೆಗೆ, ಸಮಾಜದ ಸ್ವಾಸ್ಥ್ಯ ಹಾಳು ಮಾಡುತ್ತದೆ.ಇವುಗಳ ಸೇವನೆ, ಸಾಗಣೆ, ಮಾರಾಟ ಮಾಡುವುದು ಅಪರಾಧವಾಗಿದ್ದು, ಅದರ ಸೇವನೆಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ನಿರಂತರವಾಗಿ ಜಾಗೃತಿ ಮೂಡಿಸಬೇಕು ಎಂದು ಜೇವರ್ಗಿ ಸಾರ್ವಜನಿಕ ಆಸ್ಪತ್ರೆಯ ಆರೋಗ್ಯ ನಿರೀಕ್ಷಣಾಧಿಕಾರಿ ಮಹಮ್ಮದ ಅಲ್ತಾಫ್ ಹುಸೇನ್ ಹೇಳಿದರು.ಜೇವರ್ಗಿ ಪಟ್ಟಣದ ಬಸವೇಶ್ವರ ವೃತ್ತದ ಸಮೀಪವಿರುವ ಸರ್ಕಾರಿ ಪದವಿ ಪೂರ್ವಕಾಲೇಜ್‍ನಲ್ಲಿ ‘ಎನ್.ಎಸ್.ಎಸ್‍ಘಟಕ’ದ ವತಿಯಿಂದ ಬುಧವಾರ ಜರುಗಿದ’ಅಂತಾರಾಷ್ಟ್ರೀಯ ಮಾದಕ ಸೇವನೆ ಮತ್ತು ಕಳ್ಳ ಸಾಗಾಣಿಕೆ ವಿರೋಧಿ ದಿನಾಚರಣೆ’ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.ಎನ್.ಎಸ್.ಎಸ್‍ಅಧಿಕಾರಿ ಎಚ್.ಬಿ.ಪಾಟೀಲ ಮಾತನಾಡಿ, ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡುಕೊಳ್ಳುವಲ್ಲಿ ಮನುಷ್ಯ ಸದಾ ಎಚ್ಚರಿಕೆ ಹೊಂದಿರಬೇಕು. ಇವೆರಡರ ಮೇಲೆ ಪರಿಣಾಮ ಬೀರುವ ಅನೇಕ ಸನ್ನಿವೇಶಗಳು ಮನುಷ್ಯ ಜೀವನದ ಮೇಲೆ ಸಹಜ, ವಿವೇಚನಾಶೀಲನಾಗಿ ವರ್ತಿಸಿ, ಮಾದಕ ವಸ್ತುಗಳಿಂದ ತನ್ನನ್ನುತಾನು ದೂರವಿರಿಸಿಕೊಳ್ಳುವುದು ಆತನ ಪ್ರಮುಖವಾದ ಕರ್ತವ್ಯವಾಗಿದೆ. ಯುವಕರು ಗಾಂಜಾ, ಭಂಗಿ, ಚರಸ ಮತ್ತು ಮದ್ಯಪಾನ ಸೇವನೆಯಂತಹ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿರುವುದು ಶೂಚನೀಯವಾಗಿದೆ.ಮಾದಕ ವಸ್ತು ಸೇವನೆ ಜೀವಕ್ಕೆಅಪಾಯಕಾರಿಯೆಂದು ತಿಳಿದಿದ್ದರೂ ಕೂಡಾ ಆ ಚಟಕ್ಕೆ ದಾಸರಾಗುತ್ತಿರುವುದು ಇಂದು ಯುವ ಜನಾಂಗ ಅದೋಗತಿಯತ್ತ ಸಾಗುತ್ತಿರುವುದಕ್ಕೆ ಮೂಕ ಸಾಕ್ಷಿಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಚಾರ್ಯ ರವೀಂದ್ರಕುಮಾರ ಸಿ.ಬಟಗೇರಿ, ಉಪನ್ಯಾಸಕರಾದ ರೇಣುಕಾ ಚಿಕ್ಕಮೇಟಿ ವೇದಿಕೆ ಮೇಲೆ ಇದ್ದರು , ವರದಿ-ಡಾ ಎಂ ಬಿ ಹಡಪದ ಸುಗೂರ ಎನ್
