ಮಾದಕ ವಸ್ತುಗಳ ಹಾಗೂ ಪೋಕ್ಸೋ ಕಾಯ್ದೆ ಬಗ್ಗೆ ಜಾಗೃತಿ ಕಾರ್ಯಕ್ರಮ

ಮಾದಕ ವಸ್ತುಗಳ ಹಾಗೂ ಪೋಕ್ಸೋ ಕಾಯ್ದೆ ಬಗ್ಗೆ ಜಾಗೃತಿ ಕಾರ್ಯಕ್ರಮ

Share

ಜೂನ್ 26 ರಂದು ವಿಶ್ವ ಮಾದಕ ವಸ್ತುಗಳ ವಿರೋಧಿ ದಿನದ ಅಂಗವಾಗಿ ದಿಬ್ಬೂರಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಆಶಾ ಕಾರ್ಯಕರ್ತೆಯರ ಸಮ್ಮುಖದಲ್ಲಿ ಪಿಎಸ್ಐ ಶ್ಯಾಮಲಾರವರಿಂದ ಜಾಗೃತಿ ಸಮಾವೇಶ.ಕಾರ್ಯಕ್ರಮದಲ್ಲಿ ಮಾತನಾಡಿದ ಪಿಎಸ್ಐ ರವರು ಆಶಾ ಕಾರ್ಯಕರ್ತೆಯರು ಆರೋಗ್ಯದ ಬಗ್ಗೆ ಹಳ್ಳಿಗಳಲ್ಲಿ ಜಾಗೃತಿ ಮೂಡಿಸುವ ಜೊತೆಗೆ ಪೋಕ್ಸೋ ಕಾಯ್ದೆಯ ಬಗ್ಗೆಯೂ ಸಹ ಸಮಾಜದಲ್ಲಿ ಅರಿವು ಮೂಡಿಸಬೇಕು ಅದೇ ರೀತಿ ಬಾಲ್ಯ ವಿವಾಹವನ್ನು ತಡೆಗಟ್ಟುವಲ್ಲಿ ತಾವು ಸಫಲರಾಗಬೇಕು, ಮಾದಕ ವಸ್ತುಗಳಿಂದ ಆರೋಗ್ಯದ ಮೇಲೆ ಬೀರುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿಯನ್ನು ನೀಡಿ, ಅಕ್ರಮ ಮಾದಕ ವಸ್ತುಗಳ ಮಾರಾಟ ಅಥವಾ ಸೇವನೆಯು ನಿಮಗೆ ಕಂಡು ಬಂದಲ್ಲಿ ಕೂಡಲೇ ಠಾಣೆಗೆ ಮಾಹಿತಿ ನೀಡಿ ನಿಮಗೆ ಬೆಂಬಲವಾಗಿ ಪೋಲೀಸ್ ಇಲಾಖೆ ಇದೆ ಯಾರಿಗೂ ತಾವು ಭಯ ಪಡುವ ಅವಶ್ಯಕತೆ ಇಲ್ಲ ನಿಮಗೆ ಎಲ್ಲಾ ರೀತಿಯಲ್ಲೂ ಸಹಕಾರ ನೀಡುತ್ತೇವೆ ಎಂದು ಆಶಾ ಕಾರ್ಯಕರ್ತೆಯರಿಗೆ ಧೈರ್ಯ ತುಂಬಿದರು.ಕಾರ್ಯಕ್ರಮದಲ್ಲಿ ಪಂಚಾಯಿತಿ ಪಿಡಿಒ ರಮೇಶ್ ಕುಮಾರ್, ಕಾರ್ಯದರ್ಶಿಗಳಾದ ಅಶ್ವತ್ಥ ನಾರಾಯಣ, ಆಶಾ ಕಾರ್ಯಕರ್ತೆಯರಾದ ರತ್ನಮ್ಮ ಆಶಾ ಸುಗಮಕಾರರು, ದಿಬ್ಬೂರಹಳ್ಳಿ, ನಂಜಮ್ಮ ಬಶೆಟ್ಟಹಳ್ಳಿ, ಶಿವಮ್ಮ ಆಶಾ ಸುಗಮಕಾರರು ತಿಮ್ಮಸಂದ್ರ,
ಭಾಗ್ಯಲಕ್ಷ್ಮಿ ಸಾದಲಿ ಸುಗಮಕಾರರು ಪೋಲೀಸ್ ಸಿಬ್ಬಂದಿ ಭಾಗವಹಿಸಿದ್ದರು…

ವರದಿ ‌.ವೆಂಕಟೇಶ್.ಸಿ


Share