ಶಿರಸಿ: ಕುಮಟಾ-ಶಿರಸಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಾಕಿ ಉಳಿದಿರುವ ಕಾಮಗಾರಿಯನ್ನ ಪೂರ್ಣಗೊಳಿಸಬೇಕಾಗಿರುವ ಕಾರಣ ನಾಲ್ಕು ತಿಂಗಳುಗಳ ಕಾಲ – ಹೆದ್ದಾರಿಯಲ್ಲಿ ಸಂಚಾರ ನಿಷೇಧಿಸಲು ತೀರ್ಮಾನಿಸಲಾಗಿದೆ.ಕುಮಟಾ-ಶಿರಸಿ, ರಾಷ್ಟ್ರೀಯ ಹೆದ್ದಾರಿ-766E ರಸ್ತೆಯ ಕಿ.ಮೀ 27.15 ರಿಂದ 60.00 ರ ವರೆಗಿನ ರಸ್ತೆಯನ್ನು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಭಾರತ ಮಾಲಾ ಯೋಜನೆಯಡಿಯಲ್ಲಿ ಕಾಮಗಾರಿಯನ್ನ ಆರಂಭಿಸಲಾಗಿದ್ದು, ಇನ್ನೂ ಕೆಲವು ಕಡೆಯಲ್ಲಿ ಕಾಮಗಾರಿ ಬಾಕಿ ಇರುವ ಕಾರಣ ತ್ವರಿತಗತಿಯಲ್ಲಿ ಕಾಮಗಾರಿ ಮುಗಿಸಬೇಕಾಗಿರುವ ಕಾರಣ ಅಕ್ಟೋಬರ್ 15-2024 ರಿಂದ 25 | ಪೆಬ್ರವರಿ 2025ರ ತನಕ ಸಂಪೂರ್ಣವಾಗಿ ಹೆದ್ದಾರಿಯನ್ನ ಬಂದ್ ಮಾಡಿ ಸೇತುವೆ ಹಾಗೂ ಹೆದ್ದಾರಿ ಕಾಮಗಾರಿಯನ್ನ ಕೈಗೊಳ್ಳಲಾಗುವುದು. ಈ ಸಮಯದಲ್ಲಿ ಬದಲಿ ಸಂಚಾರ ವ್ಯವಸ್ಥೆ ಕಲ್ಪಿಸುವ ಬಗ್ಗೆ ಆದೇಶ ಹೊರಡಿಸಲಾಗಿದೆ.ಬದಲಿ ಸಂಚಾರ ವ್ಯವಸ್ಥೆ: ಕುಮಟಾ-ಶಿರಸಿ ಮೂಲಕ ಸಿದ್ದಾಪುರ ಎಸ್.ಹೆಚ್- 69 ಮಾರ್ಗವಾಗಿ ಲಘು ವಾಹನಗಳ ಸಂಚಾರ, ಅಂಕೋಲಾ-ಶಿರಸಿ ಮೂಲಕ ಯಲ್ಲಾಪುರ ರಾಷ್ಟ್ರೀಯ ಹೆದ್ದಾರಿ-63, ಮತ್ತು ಎಸ್.ಹೆಚ್-93 ಮಾರ್ಗವಾಗಿ ಎಲ್ಲಾ 5 | ವಿಧದ ವಾಹನಗಳು ಸಂಚರಕ್ಕೆ ಅವಕಾಶ.ಮಂಗಳೂರು-ಹೊನ್ನಾವರ-ಶಿರಸಿ ಮೂಲಕ ಸಿದ್ದಾಪುರ ಮಾವಿನಗುಂಡಿ ಮಾರ್ಗವಾಗಿ ಎಲ್ಲಾ ವಿಧದ ವಾಹನಗಳು ಸಂಚರಿಸಬಹುದಾಗಿದೆ. ಕುಮಟಾ-ಕಾರವಾರ ಶಿರಸಿ ಮೂಲಕ ಯಾಣ ಮಾರ್ಗವಾಗಿ ಲಘುವಾಹನಗಳ ಸಂಚಾರಕ್ಕೆ ಅವಕಾಶ ಇರಲಿದೆ. ಸಹಾಯಕ ಕಮೀಷನರ ಶಿರಸಿ ಹಾಗೂ ಕುಮಟಾ, ಪೊಲೀಸ್ ಅಧೀಕ್ಷಕರು ಉತ್ತರ ಕನ್ನಡ ಜಿಲ್ಲೆ. ಲೋಕೋಪಯೋಗಿ ಇಲಾಖೆ ಶಿರಸಿ, ಪ್ರಾದೇಶಿಕ ಸಾರಿಗೆ ಅಧಿಕಾರಿರವರು ಸಲ್ಲಿಸಿದ ವರದಿ ಮೇಲೆ ಜಿಲ್ಲೆಯ ಶಿರಸಿ-ಕುಮಟಾ ರಾಷ್ಟ್ರೀಯ ಹೆದ್ದಾರಿ-766( E) ರಸ್ತೆಯಲ್ಲಿನ ವಾಹನ ಸಂಚಾರ ನಿಷೇಧಿಸಿ ಬದಲಿ ಸಂಚಾರ ವ್ಯವಸ್ಥೆ ಮಾಡಲಾಗಿದೆ.