ರೈಲಿಗೂ ತಟ್ಟಿದ ‘ಬೆಂಗಳೂರು ಟ್ರಾಫಿಕ್’ ಬಿಸಿ: ವಿಡಿಯೋ ವೈರಲ್, ಅಧಿಕಾರಿಗಳ ಸ್ಪಷ್ಟನೆ

ರೈಲಿಗೂ ತಟ್ಟಿದ ‘ಬೆಂಗಳೂರು ಟ್ರಾಫಿಕ್’ ಬಿಸಿ: ವಿಡಿಯೋ ವೈರಲ್, ಅಧಿಕಾರಿಗಳ ಸ್ಪಷ್ಟನೆ

Share

ಬೆಂಗಳೂರು: ಬೆಂಗಳೂರು ಟ್ರಾಫಿಕ್​​​​ನಲ್ಲಿ ಸಿಲುಕಿಕೊಂಡಿರುವ ರೈಲಿನ ವಿಡಿಯೋ ಮತ್ತು ವಾಹನ ದಟ್ಟಣೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಈ ಬಗ್ಗೆ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.

ಬೆಂಗಳೂರಿನ ಮಾರತಹಳ್ಳಿ ಸಮೀಪದ ಮುನ್ನೆಕೊಲ್ಲಾಲ ರೈಲ್ವೆ ಕ್ರಾಸಿಂಗ್‌ ಬಳಿ ಟ್ರಾಫಿಕ್‌ ಜಾಮ್‌ ಆಗಿದ್ದು, ವಾಹನಗಳು ಸಾಲಾಗಿ ನಿಂತ ಪರಿಣಾಮ ರೈಲು ಕೂಡ ಟ್ರಾಫಿಕ್ ಜಾಮ್ ನಲ್ಲಿಯೇ ಸಿಲುಕಿಕೊಂಡಿದೆ ಎಂಬ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.ಈ ಕುರಿತ ವಿಡಿಯೋವೊಂದನ್ನು ಸುಧೀರ್‌ ಚಕ್ರವರ್ತಿ ಎಂಬವರು ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದು, ನಾನು ಅಥವಾ ನೀವು ಮಾತ್ರವಲ್ಲ ರೈಲಿಗೂ ಕೂಡಾ ಬೆಂಗಳೂರು ಟ್ರಾಫಿಕ್‌ನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂಬ ಶೀರ್ಷಿಕೆಯನ್ನು ಬರೆದಿದ್ದಾರೆ.ಈ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದ್ದು, ಮಾರತಹಳ್ಳಿ ಸಮೀಪದ ಮುನ್ನೆಕೊಲ್ಲಾಲ ರೈಲ್ವೆ ಕ್ರಾಸಿಂಗ್‌ ಬಳಿ ವಾಹನ ದಟ್ಟಣೆಯಿಂದದ ಟ್ರಾಫಿಕ್‌ ಜಾಮ್‌ ಆಗಿ, ಈ ಟ್ರಾಫಿಕ್‌ ಜಾಮ್‌ನಲ್ಲಿ ಕ್ರಾಸಿಂಗ್‌ ದಾಟಲಾಗದೆ ರೈಲು ಕೂಡಾ ಸಿಕ್ಕಿ ಹಾಕಿಕೊಂಡಿರುವುದು ಕಂಡು ಬಂದಿದೆ.

ವಿಡಿಯೋ ವೈರಲ್ ಹಿನ್ನೆಲೆಯಲ್ಲಿ ಸ್ಪಷ್ಟನೆ ನೀಡಿರುವ ಹಿರಿಯ ರೈಲ್ವೇ ಅಧಿಕಾರಿಯೊಬ್ಬರು, ಬೈಯಪ್ಪನಹಳ್ಳಿ ಮತ್ತು ಕಾರ್ಮೆಲಾರಂ ನಡುವೆ ರೇಕ್ ಚೆಕ್ ಮಾಡಲಾಗುತ್ತಿದ್ದು. ಇದರಿಂದಾಗಿ ರೈಲು ನಂ. 12257ನ್ನು ಲೋಕೊ-ಪೈಲಟ್ ನಿಲ್ಲಿಸಿದ್ದರು. ರೇಕ್ ತಪಾಸಣೆ ಬಳಿಕ ಗೇಟ್ ಬಂದ್ ಮಾಡಿ, ರೈಲು ಸಂಚರಿಸಲು ಅನುವು ಮಾಡಿಕೊಡಲಾಯಿತು ಎಂದು ಹೇಳಿದ್ದಾರೆ.


Share