ಕಲ್ಯಾಣ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ವಿವಿಧ ಪದಾಧಿಕಾರಿಗಳ ನೇಮಕ.

ಕಲ್ಯಾಣ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ವಿವಿಧ ಪದಾಧಿಕಾರಿಗಳ ನೇಮಕ.

Share

ಗಂಗಾವತಿ: ಕಲ್ಯಾಣ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ವಿವಿಧ ಪದಾಧಿಕಾರಿಗಳನ್ನು ರಾಜ್ಯ ಗೌರವಾಧ್ಯಕ್ಷರಾದ ನರಸಿಂಹಲು ಚಿಂತಲಕುAಟ, ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಯಲ್ಲಪ್ಪ ಕಟ್ಟಿಮನಿ, ಹಿರಿಯ ದಲಿತ ಮುಖಂಡರಾದ ದುರುಗೇಶ ದೊಡ್ಡಮನಿ, ಮಾದಿಗ ಸಮಾಜದ ಹಿರಿಯ ಮುಖಂಡ ಯು. ಲಕ್ಷö್ಮಣ ಗಂಗಾವತಿ ಇವರುಗಳ ನೇತೃತ್ವದಲ್ಲಿ ಜೂನ್-೨೫ ಮಂಗಳವಾರ ಗಂಗಾವತಿ ನಗರದ ನೀಲಕಂಠೇಶ್ವರ ವೃತ್ತದಲ್ಲಿರುವ ಕೃಷ್ಣ ಫಂಕ್ಷನ್ ಹಾಲ್‌ನಲ್ಲಿ ಆಯ್ಕೆ ಮಾಡಲಾಯಿತು.ಕೊಪ್ಪಳ ಜಿಲ್ಲಾ ಗೌರವಾಧ್ಯಕ್ಷರಾಗಿ ಮಲ್ಲಿಕಾರ್ಜುನ ಯರಡೋಣ, ಜಿಲ್ಲಾಧ್ಯಕ್ಷರಾಗಿ ರಮೇಶ ಅಂಗಡಿ, ಜಿಲ್ಲಾ ಉಪಾಧ್ಯಕ್ಷರುಗಳಾಗಿ ತಾಯಪ್ಪ ಗುಂಡೂರು, ಜಡಿಯಪ್ಪ ಬೂದಗುಂಪ, ಜಿಲ್ಲಾ ಸಹ ಕಾರ್ಯದರ್ಶಿಯಾಗಿ ರುದ್ರೇಶ ಕಾಟಾಪುರ, ಕಾರಟಗಿ ತಾಲೂಕ ಘಟಕಕ್ಕೆ ಗೌರವ ಅಧ್ಯಕ್ಷರಾಗಿ ಕೆಂಚಪ್ಪ ಬೇವಿನಾಳ, ಉಪಾಧ್ಯಕ್ಷರುಗಳಾಗಿ ಮರಿಸ್ವಾಮಿ ಬೂದಗುಂಪ, ದ್ಯಾವಣ್ಣ ಗುಂಡೂರು, ಪ್ರಧಾನ ಕಾರ್ಯದರ್ಶಿಯಾಗಿ ದುರುಗೇಶ ನಾಗನಕಲ್ ಇವರುಗಳನ್ನು ನೇಮಕ ಮಾಡಲಾಯಿತು.ನೂತನ ಪದಾಧಿಕಾರಿಗಳಿಗೆ ನೇಮಕಾತಿ ಮಾಡಿ, ಆದೇಶ ಪತ್ರ ನೀಡಿದ ರಾಜ್ಯಾಧ್ಯಕ್ಷ ಯಲ್ಲಪ್ಪ ಕಟ್ಟಿಮನಿ ಮಾತನಾಡಿ, ಸಂಘಟನೆಯು ದೀನ ದಲಿತರ, ಹಿಂದುಳಿದವರ ಕಲ್ಯಾಣಕ್ಕಾಗಿ ಸ್ಥಾಪಿತಗೊಂಡಿದ್ದು, ಆ ನಿಟ್ಟಿನಲ್ಲಿ ಸಂಘಟನೆಯ ಧ್ಯೇಯೋದ್ಧೇಶಗಳಿಗೆ, ಸಿದ್ಧಾಂತಗಳಿಗೆ ಬದ್ಧರಾಗಿ ಕಾರ್ಯನಿರ್ವಹಿಸಬೇಕು, ಯಾವುದೇ ಕಾನೂನುಬಾಹಿರ ಚಟುವಟಿಕೆಗಳನ್ನು ನಡೆಸಿದಲ್ಲಿ ತಕ್ಷಣವೇ ತಮ್ಮನ್ನು ಸಂಘಟನೆಯಿAದ ಉಚ್ಛಾಟಿಸಲಾಗುವುದು. ಸಂಘಟನೆಯನ್ನು ಡಾ. ಬಿ.ಆರ್. ಅಂಬೇಡ್ಕರ್‌ರವರ ತತ್ವ ಸಿದ್ಧಾಂತಗಳಡಿಯಲ್ಲಿ ಬಲಪಡಿಸುವಲ್ಲಿ ಶ್ರಮಿಸಿ, ಕೆಳವರ್ಗದ, ಶ್ರಮಿಕರ, ಅಸಹಾಯಕರ ಪರವಾಗಿ ಕೆಲಸ ನಿರ್ವಹಿಸಿ ಸಂಘಟನೆಯ ಶಕ್ತಿಯನ್ನು ಬಲಪಡಿಸಬೇಕೆಂದು ಸೂಚಿಸಿದರು.ಈ ನೇಮಕಾತಿ ಸಂದರ್ಭದಲ್ಲಿ ಕನಕಗಿರಿ ತಾಲೂಕ ಅಧ್ಯಕ್ಷರಾದ ಮಂಜುನಾಥ ಬಡಿಗೇರ, ಕಾರಟಗಿ ತಾಲೂಕು ಅಧ್ಯಕ್ಷರಾದ ಹುಲುಗೇಶ ಬುಕನಟ್ಟಿ, ಗಂಗಾವತಿ ತಾಲೂಕು ಅಧ್ಯಕ್ಷರಾದ ಸುಮಿತ್ರಕುಮಾರ, ಕಾರಟಗಿ ನಗರ ಘಟಕ ಅಧ್ಯಕ್ಷರಾದ ಪರಶುರಾಮ ಎಸ್. ಸೇರಿದಂತೆ ವಿವಿಧ ಪದಾಧಿಕಾರಿಗಳು ಉಪಸ್ಥಿತರಿದ್ದರು.


Share