ಗಂಗಾವತಿ ನಗರದ ರಸ್ತೆಗಳಲ್ಲಿರುವ ಗುಂಡಿಗಳನ್ನು ಮುಚ್ಚಲು ಗಂಗಾವತಿ ನಾಗರಿಕ ವೇದಿಕೆ ಸಿದ್ಧತೆಗಾಗಿ ಸಭೆ: ಭಾರಧ್ವಾಜ್

ಗಂಗಾವತಿ ನಗರದ ರಸ್ತೆಗಳಲ್ಲಿರುವ ಗುಂಡಿಗಳನ್ನು ಮುಚ್ಚಲು ಗಂಗಾವತಿ ನಾಗರಿಕ ವೇದಿಕೆ ಸಿದ್ಧತೆಗಾಗಿ ಸಭೆ: ಭಾರಧ್ವಾಜ್

Share

ಗಂಗಾವತಿ: ನಗರದ ಪ್ರಮುಖ ರಸ್ತೆಗಳಲ್ಲಿ ಗುಂಡಿಗಳು ಬಿದ್ದು, ಸರ‍್ವಜನಿಕರ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿದ್ದು, ಆದರೆ ಶಾಸಕರು, ನಗರಸಭೆ ಅಧಿಕಾರಿಗಳು ಇದರ ಬಗ್ಗೆ ಗಮನಹರಿಸದೇ ಕಣ್ಮುಚ್ಚಿ ಕುಳಿತಿರುವುದರಿಂದ, ಗಂಗಾವತಿ ನಾಗರಿಕ ವೇದಿಕೆ ಜುಲೈ-೩ ಬುಧವಾರದಂದು ಬೆಳಿಗ್ಗೆ ೧೧:೦೦ ಗಂಟೆಗೆ ಆಟೋನಗರದ ಕ್ರಾಂತಿಕೇಂದ್ರದಲ್ಲಿ ಸಭೆ ನಡೆಸಿ ನಗರದ ಪ್ರಮುಖ ರಸ್ತೆಗಳಲ್ಲಿ ಬಿದ್ದಿರುವ ಗುಂಡಿಗಳನ್ನು ಮುಚ್ಚಲು ತರ‍್ಮಾನಿಸಲಾಗುವುದು ಎಂದು ಸಿ.ಪಿ.ಐ.ಎಂ.ಎಲ್ ರಾಜ್ಯ ಸ್ಥಾಯಿ ಸಮಿತಿ ಸದಸ್ಯರಾದ ಭಾರಧ್ವಾಜ್ ಪ್ರಕಟಣೆಯಲ್ಲಿ ತಿಳಿಸಿದರು.ಪಕ್ಷಾತೀತವಾಗಿ ನಡೆಯುವ ಈ ಸಭೆಯಲ್ಲಿ ಎಲ್ಲಾ ಪಕ್ಷಗಳ ಮುಖಂಡರು, ದಲಿತ ಸಂಘಟನೆಗಳ ಮುಖಂಡರು, ಕರ‍್ಮಿಕ ಸಂಘಟನೆಗಳ ಮುಖಂಡರು, ಬೀದಿವ್ಯಾಪಾರಸ್ಥರು, ಗಂಜ್ ವ್ಯಾಪಾರಸ್ಥರು ಪಾಲ್ಗೊಂಡು ಸಭೆಯಲ್ಲಿ ಸೂಕ್ತ ಮರ‍್ಗರ‍್ಶನ, ಸಲಹೆ, ಸೂಚನೆ, ಸಹಕಾರ ನೀಡಲು ಕೋರಲಾಗಿದೆ.


Share