ಶಿಡ್ಲಘಟ್ಟ:– ಜೂ, 25– ಗ್ರಾಮಾಂತರ ಪೊಲೀಸ್ ಠಾಣೆಯ ವ್ಯಾಪ್ತಿಯ ಸೊಣ್ಣೆನಹಳ್ಳಿಯಲ್ಲಿ ಬೆಳಂಬೆಳಗ್ಗೆ ಮಹಿಳೆಯ ಭೀಕರ ಕೊಲೆಯಾದ ಘಟನೆ ನಡೆದಿದೆ.ಪೋಲೀಸ್ ಠಾಣೆಗೆ ಶರಣಾದ ಆರೋಪಿ ಪತ್ನಿಯನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ ಪತಿ ಪೋಲೀಸ್ ಠಾಣೆಗೆ ಶರಣಾದ ಘಟನೆಯಾಗಿದ್ದು ತಾಲ್ಲೂಕಿನ ಜನತೆ ಬೆಚ್ಚಿ ಬೀಳಿಸುವ ಧಾರುಣ ಘಟನೆ ಸೊಣ್ಣೆನಹಳ್ಳಿಯಲ್ಲಿ ಇಂದು ಬೆಳಗ್ಗೆ ನೆಡೆದು ಸ್ಥಳಕ್ಕೆ ಸರ್ಕಲ್ ಇನ್ಸೆಕ್ಟರ್ ಎಂ.ಶ್ರೀನಿವಾಸ್, ಗ್ರಾಮಾಂತರ ಪೊಲೀಸ್ ಠಾಣೆ ಸಹಾಯಕ ಸಬ್ ಇನ್ಸೆಕ್ಟರ್ ಸುಬ್ರಮಣಿ, ನಗರ ಠಾಣೆ ಸಬ್ ಇನ್ಸೆಕ್ಟರ್ ವೇಣುಗೋಪಾಲ್, ದಿಬ್ಬೂರಹಳ್ಳಿ ಪೋಲೀಸ್ ಠಾಣೆ ಸಬ್ ಇನ್ಸೆಕ್ಟರ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದಾರೆ.ಆರೋಪಿತರಾದ ಮುನೇಗೌಡ ಹಾಗೂ ಮಗ ಗಿರೀಶ್ ಎಂಬುವರಿಂದ ಕೊಲೆಗೀಡಾದ ಮಹಿಳೆ ಹೆಸರು ಪದ್ಮಮ್ಮ50 ವರ್ಷ ಎಂದು ಹೇಳಲಾಗುತ್ತಿದೆ. ಡಿವೈಎಸ್ಪಿ ಮುರಳಿಧರ್ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ. ತನಿಖೆ, ಪರಿಶೀಲನೆ ನಡೆಯುತ್ತಿದೆ. ತನ್ನ ಮಗ ಇಬ್ಬರೂ ಸೇರಿ ಬೆಳಂ ಬೆಳಗ್ಗೆ ಪದ್ಮಮ್ಮ ಅವರನ್ನು ಮಚ್ಚಿನಿಂದ ಕೊಲೆ ಮಾಡಿದ್ದಾರೆಂದು ಎನ್ನಲಾಗಿದೆ.ಅಮಾನುಷ ಅಮಾನವೀಯ ಘಟನೆ ಇದಾಗಿದ್ದು, ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಗ್ರಾಮಾಂತರ ಪೊಲೀಸರು, ಹಾಗೂ ಸರ್ಕಲ್ ಇನ್ಸ್ ಪೆಕ್ಟರ್ ಆರೋಪಿಗಳು ತಾವೇ ಪೊಲೀಸರಿಗೆ ಶರಣಾಗಿದ್ದು, ಆರೋಪಿಯನ್ನ ಪೊಲೀಸ್ ವಶಕ್ಕೆ ಪಡೆದುಕೊಂಡಿದೆ. ಪ್ರಕರಣದ ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ಮಾಹಿತಿಯನ್ನು ಪೊಲೀಸರು ಕಲೆ ಹಾಕುತ್ತಿದ್ದಾರೆ.ಕೊಲೆ ಘಟನೆಯಿಂದ ಗ್ರಾಮದಲ್ಲಿ ಜನ ಬೆಚ್ಚಿ ಬಿದ್ದಿದ್ದು, ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಹೆಚ್ಚಿನ ತನಿಖೆ ಪೊಲೀಸರು ಕೈಗೊಂಡಿದ್ದಾರೆ…
ವರದಿ:ವೆಂಕಟೇಶ್.ಸಿ