ಬೆಂಗಳೂರು: ನಕಲಿ ಕಿಡ್ನಾಪ್ ಪ್ರಕರಣ ದಾಖಲಿಸಿ ಪೇಚಿಗೆ ಸಿಲುಕಿದ ಪೊಲೀಸ್ ಅಧಿಕಾರಿಯ ಪುತ್ರ

ಬೆಂಗಳೂರು: ನಕಲಿ ಕಿಡ್ನಾಪ್ ಪ್ರಕರಣ ದಾಖಲಿಸಿ ಪೇಚಿಗೆ ಸಿಲುಕಿದ ಪೊಲೀಸ್ ಅಧಿಕಾರಿಯ ಪುತ್ರ

Share

ಬೆಂಗಳೂರು: ಪೊಲೀಸ್ ಅಧಿಕಾರಿಯೊಬ್ಬರ 22 ವರ್ಷದ ಮಗ ನಕಲಿ ಅಪಹರಣ ಮತ್ತು ಹಲ್ಲೆ ಪ್ರಕರಣ ದಾಖಲಿಸಿ ಪೇಚಿಗೆ ಸಿಲುಕಿದ್ದಾನೆ. ಜ್ಞಾನಭಾರತಿಯ ಉಳ್ಳಾಲ ಮುಖ್ಯರಸ್ತೆ ನಿವಾಸಿ ಗೌತಮ್ ಸುರೇಶ್ ಮಂಗಳವಾರ ಜ್ಞಾನಭಾರತಿ ಠಾಣೆಯಲ್ಲಿ ಸುಳ್ಳು ದೂರು ದಾಖಲಿಸಿದ್ದರು. ಗೌತಮ್ಮನ ತಂದೆ ಸುರೇಶ್ ಸಹಾಯಕ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಆಗಿದ್ದಾರೆ.

ಆರು ಮಂದಿ ದುಷ್ಕರ್ಮಿಗಳ ತಂಡ ತನ್ನನ್ನು ಅಪಹರಿಸಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದೆ ಎಂದು ಗೌತಮ್ ದೂರಿನಲ್ಲಿ ತಿಳಿಸಿದ್ದಾರೆ. ದೂರು ದಾಖಲಾದ ನಂತರ ಪೊಲೀಸರಿಗೆ ದೂರಿನಲ್ಲಿ ಹೇಳಿರುವಂತೆ ಯಾವುದೇ ಸಾಕ್ಷ್ಯಾಧಾರಗಳು ಸಿಗಲಿಲ್ಲ. ಪೊಲೀಸರು ಆತನನ್ನು ಕರೆಸಿದಾಗ ತಂದೆಯ ಕೋಪದಿಂದ ತಪ್ಪಿಸಿಕೊಳ್ಳಲು ಸುಳ್ಳು ದೂರು ದಾಖಲಿಸಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ.ಸೋಮವಾರ ರಾತ್ರಿ 9.30ಕ್ಕೆ ಗೌತಮ್ ತನ್ನ ಸ್ನೇಹಿತರೊಂದಿಗೆ ಪಾರ್ಟಿ ಮುಗಿಸಿ ಮನೆಗೆ ಮರಳುತ್ತಿದ್ದಾಗ ಉಳ್ಳಾಲ ಮುಖ್ಯರಸ್ತೆಯಲ್ಲಿ ತುಂತುರು ಮಳೆಯಾಗುತ್ತಿದ್ದರಿಂದ ಅತ್ಯಾಧುನಿಕ ಬೈಕ್‌ನಿಂದ ಜಾರಿ ಕೆಳಗೆ ಬಿದ್ದಿದ್ದಾರೆ. ಪರಿಣಾಮ ಅವರ ಬೈಕ್ ಹಾಗೂ ಮೊಬೈಲ್ ಜಖಂಗೊಂಡಿದೆ. ತಂದೆ ಬೈಯುತ್ತಾರೆ ಎಂದು ಭಾವಿಸಿ ಗೌತಮ್ ಬೈಕ್‌ನ ಉಪಕರಣಗಳನ್ನು ಬಳಸಿ ಗಾಯ ಮಾಡಿಕೊಂಡಿದ್ದಾರೆ. ಬಳಿಕ ತನ್ನ ತಂದೆ ಮತ್ತು ಸ್ನೇಹಿತರಿಗೆ ಕರೆ ಮಾಡಿ ಸುಳ್ಳು ಮಾಹಿತಿ ನೀಡಿದ್ದಾನೆ. ತಕ್ಷಣ ಆತನನ್ನು ಚಿಕಿತ್ಸೆಗಾಗಿ ತಂದೆ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಇದು ಮೆಡಿಕೋ ಲೀಗಲ್ ಕೇಸ್ ಆಗಿದ್ದರಿಂದ ಆಸ್ಪತ್ರೆಯವರು ಪೊಲೀಸರಿಗೆ ದೂರು ನೀಡಿದ್ದಾರೆ.


Share