ನವದೆಹಲಿ: ನಕಲಿ ದಾಖಲೆಗಳನ್ನು ಕೊಟ್ಟು 6.80 ಲಕ್ಷ ಮೊಬೈಲ್ ಸಂಪರ್ಕಗಳನ್ನು ಪಡೆದಿರುವುದನ್ನು ದೂರಸಂಪರ್ಕ ಇಲಾಖೆ (DoT) ಗುರುತಿಸಿದೆ. ಈ ಸಂಪರ್ಕಗಳನ್ನು ತಕ್ಷಣವೇ ಮರು-ಪರಿಶೀಲಿಸುವಂತೆ ದೂರಸಂಪರ್ಕ ಸೇವಾ ಪೂರೈಕೆದಾರರಿಗೆ (ಟಿಎಸ್‌ಪಿ) ದೂರಸಂಪರ್ಕ ಇಲಾಖೆ ನಿರ್ದೇಶಿಸಿದೆ.ಈ ಗುರುತಿಸಲಾದ ಮೊಬೈಲ್ ಸಂಖ್ಯೆಗಳನ್ನು ತಕ್ಷಣ ಮರು-ಪರಿಶೀಲಿಸುವಂತೆ TSP ಗೆ DoT ನಿರ್ದೇಶನ ನೀಡಿದೆ. ಅಲ್ಲದೆ DoT ಗುರುತಿಸಿರುವ ಸಂಪರ್ಕಗಳನ್ನು 60 ದಿನಗಳಲ್ಲಿ ಮರು ಪರಿಶೀಲಿಸುವುದನ್ನು ಕಡ್ಡಾಯಗೊಳಿಸಲಾಗಿದೆ.ಮರು ಪರಿಶೀಲನೆಯನ್ನು ಪೂರ್ಣಗೊಳಿಸಲು ವಿಫಲವಾದರೆ ಸಂಬಂಧಿಸಿದ ಮೊಬೈಲ್ ಸಂಖ್ಯೆಗಳ ಸಂಪರ್ಕ ಕಡಿತಗೊಳ್ಳುತ್ತದೆ ಎಂದು ಪತ್ರಿಕಾ ಟಿಪ್ಪಣಿಯಲ್ಲಿ DoT ತಿಳಿಸಿದೆ. ಸುಧಾರಿತ AI ವಿಶ್ಲೇಷಣೆಯು ಈ ಸಂಭಾವ್ಯ ಮೋಸದ ಸಂಪರ್ಕಗಳನ್ನು ಗುರುತಿಸಿದೆ ಎಂದು DoT ಹೇಳಿದೆ.