ಉಪಮೇಯರ್ ಆಗಿ ಡಿ.ಸುಕುಂ ಅಧಿಕಾರ ಸ್ವೀಕಾರ!

ಉಪಮೇಯರ್ ಆಗಿ ಡಿ.ಸುಕುಂ ಅಧಿಕಾರ ಸ್ವೀಕಾರ!

Share

ಮಹಾನಗರ ಪಾಲಿಕೆಯ ನೂತನ ಉಪಮೇಯರ್ ಆಗಿ ಕೌಲ್ ಬಜಾರ್ ೨೬ನೇ ವಾರ್ಡಿನ ಸದಸ್ಯೆ ಡಿ.ಸುಕುಂ ಆಯ್ಕೆಯಾದ ಬಳಿಕೆ ಇಂದು ಪಾಲಿಕೆಯ ಕಛೇರಿಯಲ್ಲಿ ಅಧಿಕೃತವಾಗಿ ಅಧಿಕಾರ ಸ್ವೀಕರಿಸಿ, ಮಾತನಾಡಿದ ಅವರು ಸ್ವಚ್ಛ ಹಾಗೂ ಸ್ವಸ್ಥ ಬಳ್ಳಾರಿಯ ಕನಸು ನನಸಾಗಿಸಲು ಶ್ರಮಿಸುವೆ ಎಂದರು.ಇದರ ಮುಂಚೆ ಸ್ಥಾಯಿ ಸಮಿತಿ ಅಧ್ಯಕ್ಷೆಯಾಗಿ ಕೆಲಸ ಮಾಡಿದ್ದೇನೆ ಈಗ ಉಪಮೇಯ ಸ್ಥಾನ ಸಿಕ್ಕಿರುವುದು ನನ್ನ ಅದೃಷ್ಟ ಮುಂದಿನ ದಿನಗಳಲ್ಲಿ ನಗರ ಅಭಿವೃದ್ಧಿಗಾಗಿ ಪಣತೊಟ್ಟು ಕಾರ್ಯನಿರ್ವಹಿಸುವೆ ಎಂದರು ಉಪಮೇಯರ್ ಕೊಠಡಿಯಲ್ಲಿ ಅವರ ಕುಟುಂಬಸ್ಥರ ಮತ್ತು ಹಿರಿಯರ ನೇತೃತ್ವದಲ್ಲಿ ಅವರು ಅಧಿಕಾರ ಸ್ವೀಕರೀಸಿದರು. ನಂತರ ಪಾಲಿಕೆಯ ಸದಸ್ಯರು, ಕಾಂಗ್ರೆಸ್ ಮುಖಂಡರು ಡಿ.ಸುಕುಂರವರಿಗೆ ಶುಭಕೋರಿದರು.


Share