ಜಮ್ಮು-ಕಾಶ್ಮೀರ: ಪೀಪಲ್ಸ್ ಡೆಮಾಕ್ರಟಿಕ್ ಪಕ್ಷದ(PDP) ಅಧ್ಯಕ್ಷೆ ಮೆಹಬೂಬಾ ಮುಫ್ತಿ ಅವರು ತಮ್ಮ ಮೊಬೈಲ್ ನಿಂದ ಹೊರಹೋಗುವ ಕರೆಗಳನ್ನು ಯಾವುದೇ ಸೂಕ್ತ ಕಾರಣವಿಲ್ಲದೆ ಏಕಾಏಕಿ ರದ್ದುಗೊಳಿಸಲಾಗಿದೆ ಎಂದು ಆರೋಪಿಸಿದ್ದಾರೆ.
ಬೆಳಿಗ್ಗೆಯಿಂದ ನನಗೆ ಯಾವುದೇ ಕರೆ ಮಾಡಲು ಸಾಧ್ಯವಾಗುತ್ತಿಲ್ಲ. ಅನಂತನಾಗ್ ಲೋಕಸಭಾ ಕ್ಷೇತ್ರದಲ್ಲಿ ಮತದಾನದ ದಿನದಂದು ಈ ಹಠಾತ್ ಸೇವೆಗಳನ್ನು ಸ್ಥಗಿತಗೊಳಿಸಿದ್ದಕ್ಕೆ ಅಧಿಕಾರಿಗಳು ಯಾವುದೇ ವಿವರ ಮತ್ತು ಸೂಕ್ತ ಕಾರಣ ನೀಡುತ್ತಿಲ್ಲ ಎಂದರು.ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಅನಂತನಾಗ್-ರಜೌರಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದು, ಪ್ರಸ್ತುತ ಮತದಾನ ನಡೆಯುತ್ತಿದೆ. X ನಲ್ಲಿನ ಪೋಸ್ಟ್‌ನಲ್ಲಿ ಪಿಡಿಪಿ ಪಕ್ಷ ಸಹ ಸಮಸ್ಯೆಯನ್ನು ಪೋಸ್ಟ್ ಮಾಡಿದೆ. ಚುನಾವಣೆಗೆ ಸ್ವಲ್ಪ ಮುಂಚಿತವಾಗಿ, ಮೆಹಬೂಬಾ ಮುಫ್ತಿ ಸೆಲ್ಯುಲಾರ್ ಫೋನ್ ಸೇವೆಯನ್ನು ಹಠಾತ್ತನೆ ಸ್ಥಗಿತಗೊಳಿಸಲಾಗಿದೆ. ನಿನ್ನೆ ಸಂಜೆ ಮತ್ತು ಇಂದು ಮುಂಜಾನೆ, PDP ಕಾರ್ಯಕರ್ತರು ಮತ್ತು ಪೋಲಿಂಗ್ ಏಜೆಂಟ್‌ಗಳನ್ನು ಮತಗಟ್ಟೆಯಾದ್ಯಂತ ಬಂಧಿಸಲಾಗಿದೆ ಎಂದು ಹೇಳಿದೆ.
ಮೊನ್ನೆ ಶುಕ್ರವಾರ ಮೆಹಬೂಬಾ ಅವರು ಪಿಡಿಪಿ ಕಾರ್ಯಕರ್ತರು ಮತ್ತು ಪೋಲಿಂಗ್ ಏಜೆಂಟರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದರು.