ಎಪಿಎಂಸಿ ಅಭಿವೃದ್ಧಿಯೇ ನನ್ನ ಧ್ಯೇಯ-ನೂತನ ಅಧ್ಯಕ್ಷ ಕಟ್ಟೆಮನೆ ನಾಗೇಂದ್ರ ಶೀಘ್ರದಲ್ಲೆ ಮಾರುಕಟ್ಟೆಯಲ್ಲಿ ಬೀಜ ಬಿತ್ತನೆ ಮಾಡುತ್ತಿರುವ ರೈತನ ಪ್ರತಿಮೆ ನಿರ್ಮಾಣ ಸಿಸಿ ಕೆಮೆರಾ ಕಣ್ಗಾವಲಲ್ಲಿ ಎಪಿಎಂಸಿ-ಬಿಳಿ ಚೀಟಿ ದಂಧೆಗೆ ಗುಡ್‌ಬೈ

ಎಪಿಎಂಸಿ ಅಭಿವೃದ್ಧಿಯೇ ನನ್ನ ಧ್ಯೇಯ-ನೂತನ ಅಧ್ಯಕ್ಷ ಕಟ್ಟೆಮನೆ ನಾಗೇಂದ್ರ ಶೀಘ್ರದಲ್ಲೆ ಮಾರುಕಟ್ಟೆಯಲ್ಲಿ ಬೀಜ ಬಿತ್ತನೆ ಮಾಡುತ್ತಿರುವ ರೈತನ ಪ್ರತಿಮೆ ನಿರ್ಮಾಣ ಸಿಸಿ ಕೆಮೆರಾ ಕಣ್ಗಾವಲಲ್ಲಿ ಎಪಿಎಂಸಿ-ಬಿಳಿ ಚೀಟಿ ದಂಧೆಗೆ ಗುಡ್‌ಬೈ

Share

ಬಳ್ಳಾರಿ ನಗರದ ಕೃಷಿ ಉತ್ಪನ್ನ ಮಾರುಕಟ್ಟೆಯ ನೂತನ ಅಧ್ಯಕ್ಷರಾಗಿ ಕಟ್ಟೆಮನೆ ನಾಗೇಂದ ಉಪಾಧ್ಯಕ್ಷರಾಗಿ ಕೊಳಗಲ್ ಹುಲಿಯಪ್ಪ ಸಿದ್ದಮನಹಳ್ಳಿ ಇದೇ ತಿಂಗಳ ೧೩ ನೇ ತಾರೀಖು ಪದಗ್ರಹಣ ಮಾಡಿದ್ದರು. ಸೋಮವಾರ ಸದಸ್ಯರೊಂದಿಗೆ ಮತ್ತು ಎಪಿಎಂಸಿ ವರ್ತಕರೊಂದಿಗೆ ಮೊದಲನೇ ಸಭೆ ನಡೆಸಿ ಸಭೆಯಲ್ಲಿ ಎಪಿಎಂಸಿ ಅಭಿವೃದ್ಧಿಗೆ,ಸ್ವಚ್ಚತೆಗೆ ಮೊದಲ ಆಧ್ಯತೆಯನ್ನು ನೀಡಿದ್ದಾರೆ. ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಡ್ರೆöÊನೇಜ್ ವ್ಯವಸ್ಥೆ, ರಸ್ತೆಗಳು,ಬೀದಿ ದೀಪಗಳು,ಕುಡಿಯುವ ನೀರಿನ ವ್ಯವಸ್ಥೆಯನ್ನು ಅತಿ ಶೀಘ್ರದಲ್ಲೇ ಮಾಡಿಕೊಡುವುದಾಗಿ ತಿಳಿಸಿದ್ದಾರೆ.ಕೃಷಿ ಉತ್ಪನ್ನ ಮಾರುಕಟ್ಟೆ ಅಂದರೇ ರೈತ, ರೈತ ಅಂದರೇ ಕೃಷಿ ಉತ್ಪನ್ನ ಮಾರುಕಟ್ಟೆ ಎನ್ನುವ ಹಾದಿಯಲ್ಲಿ ಮಾರುಕಟ್ಟೆನ್ನು ಅಭಿವೃದ್ಧಿ ಮಾಡುತ್ತೇನೆ ಎಂದು, ಇದಕ್ಕೆ ಎಲ್ಲಾ ಸದಸ್ಯರ ಮತ್ತು ಎಲ್ಲಾ ವರ್ತಕರ ಸಹಕಾರ ಬೇಕೆಂದರು. ಹಾಗು ಮಾರುಕಟ್ಟೆಯಲ್ಲಿ ಬೀಜ ಬಿತ್ತನೆ ಮಾಡುವ ರೈತನ ಪ್ರತಿಮೆಯನ್ನು ನಿರ್ಮಾಣ ಮಾಡಬೇಕೆಂದು ಸಭೆಯಲ್ಲಿ ತೀರ್ಮಾನಿಸಿದ್ದೇವೆ ಎಂದು ತಿಳಿಸಿದರು. ರೈತರಿಗೆ ತೊಂದರೆಯಾಗದಂತೆ ಧನಗಳ ಹಾವಳಿಯನ್ನು ತಪ್ಪಿಸುತ್ತೆವೆ, ಮತ್ತು ಮಾರುಕಟ್ಟೆಯಲ್ಲಿ ಎಲ್ಲಡೆ ಸಿಸಿ ಕೆಮೆರಾಗಳನ್ನು ಅಳವಡಿಸಿ ಬಿಳಿ ಚೀಟಿಯ ದಂಧೆಯನ್ನು ಸ್ಥಗಿತಗೊಳಿಸುತ್ತೇನೆ, ಒಂದೇ ಗೇಟಿನಲ್ಲಿ ವಾಹನಗಳು ಸಂಚಾರ ಮಾಡುವಂತೆ, ಮತ್ತೊಂದು ಗೇಟಿನಲ್ಲಿ ಎತ್ತಿನ ಬಂಡಿಗಳು, ದ್ವಿಚಕ್ರ,ತ್ರಿಚಕ್ರ ವಾಹನಗಳ ಸಂಚಾರಕ್ಕೆ ವ್ಯವಸ್ಥೆ ಮಾಡಿಕೊಡುತ್ತೇವೆ ಎಂದರು.ತರಕಾರಿ ವರ್ತಕರು ನಿಜವಾಗಿ ಯಾರು ವ್ಯಾಪಾರ ಮಾಡುತ್ತಾರೋ, ಯಾರು ಮಾರುಕಟ್ಟೆಗೆ ಶುಲ್ಕವನ್ನು ಕಟ್ಟುತಿದ್ದಾರೋ ನೋಡಿಕೊಂಡು ಪ್ರಾಮಾಣಿಕವಾಗಿ ಅವರಿಗೆ ನಿವೇಶನಗಳನ್ನು ನೀಡಲು ಶೀಘ್ರದಲ್ಲಿ ಮತ್ತೊಂದು ಸಭೆ ಕರೆದು ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದರು. ಸರ್ಕಾರ ಹಮಾಲರಿಗೆ ನೀಡಿದ ನಿವೇಶನಗಳನ್ನು ಅವರಿಗೆ ಹಸ್ಥಾಂತರಿಸಿ ಅವರಿಗೆ ನೀರು ಮತ್ತು ಇನ್ನಿತರ ಸೌಲಭ್ಯಗಳನ್ನು ಒದಗಿಸಿಕೊಡುತ್ತೇವೆ ಎಂದರು.ಈ ಸಂದರ್ಭದಲ್ಲಿ ಅಧ್ಯಕ್ಷರಿಗೆ ಮತ್ತು ಉಪಾಧ್ಯಕ್ಷರಿಗೆ,ಸದಸ್ಯರಿಗೆ ತರಕಾರಿ ವರ್ತಕರಿಂದ ಹೋಗುಚ್ಚು ನೀಡುವ ಮೂಲಕ ಶುಭಾಶಯ ಕೋರಿದರು. ಈ ಸಂದರ್ಭದಲ್ಲಿ ಎಪಿಎಂಸಿ ಕಾರ್ಯಧರ್ಶಿ ನಂಜುಂಡಸ್ವಾಮಿ, ಕಛೇರಿ ಸಿಬ್ಬಂದಿಗಳಾದ ವಿ.ಬಸವರಾಜ್,ರ‍್ರಿಗೌಡ, ಶರಣಬಸವ, ,ತರಕಾರಿ ವ್ಯಾಪಾರಸ್ಥರಾದ ಪಿ.ಎ.ಬಿ,ಅಬ್ದುಲ್ ಬಾರಿ, ವೆಂಕಟರೆಡ್ಡಿ, ಮುರಳಿಕೃಷ್ಣ, ತನ್ವೀರ್,ರಾಜಾ,ಪಂಪನಗೌಡ,ಮಾರುತಿ ಸೇರಿದಂತೆ ಅನೇಕ ಜನ ಹೂಗುಚ್ಚು ನೀಡುವ ಮೂಲಕ ಶುಭಾಶಯ ತಿಳಿಸಿದರು.
ಈ ವೇಳೆ ಅಧ್ಯಕ್ಷ ನಾಗೇಂದ್ರ ಅವರು ಮಾತನಾಡುತ್ತಾ ನನ್ನ ಮೇಲೆ ನಂಬಿಕೆಯನ್ನಿಟ್ಟು ಕಾಂಗ್ರೆಸ್ ಸರಕಾರದ ಮುಖಂಡರು ನನ್ನ ಹೆಗಲಿಗೆ ಈ ಅಧ್ಯಕ್ಷ ಸ್ಥಾನದ ಜವಾಬ್ದಾರಿಯನ್ನು ಇಟ್ಟಿದ್ದಾರೆ. ನಾನು ಈ ಸ್ಥಾನಕ್ಕೆ ಕಪ್ಪುಚುಕ್ಕೆ ಬಾರದಂತೆ ನನ್ನ ಶಕ್ತಿಯನ್ನು ಮೀರಿ ಎಪಿಎಂಸಿ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದು ತಿಳಿಸಿದರು.


Share