ಬೆಂಗಳೂರು: ಬಿಎಂಟಿಸಿಗೆ ಉತ್ತರ ಪ್ರದೇಶದ ನಿಯೋಗ ಭೇಟಿ, ಶಕ್ತಿ ಯೋಜನೆ ಸೇರಿ ಹಸಿರು ತಂತ್ರಜ್ಞಾನದ ಕುರಿತು ಚರ್ಚೆ

ಬೆಂಗಳೂರು: ಬಿಎಂಟಿಸಿಗೆ ಉತ್ತರ ಪ್ರದೇಶದ ನಿಯೋಗ ಭೇಟಿ, ಶಕ್ತಿ ಯೋಜನೆ ಸೇರಿ ಹಸಿರು ತಂತ್ರಜ್ಞಾನದ ಕುರಿತು ಚರ್ಚೆ

Share

ಬೆಂಗಳೂರು: ಉತ್ತರ ಪ್ರದೇಶ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಅಧಿಕಾರಿಗಳು ಬಿಎಂಟಿಸಿಗೆ ಭೇಟಿ ನೀಡಿ, ಶಕ್ತಿ ಯೋಜನೆ ಸೇರಿ ಹಸಿರು ತಂತ್ರಜ್ಞಾನದ ಕುರಿತು ಮಾಹಿತಿ ಪಡೆದುಕೊಂಡರು.

ಉತ್ತರ ಪ್ರದೇಶ ರಾಜ್ಯ ರಸ್ತೆ ಸಾರಿಗೆ ವ್ಯವಸ್ಥಾಪಕ ನಿರ್ದೇಶಕರಾದ ಪ್ರನ್ನಾತ ಐಶ್ವರ್ಯ, ಪ್ರಧಾನ ವ್ಯವಸ್ಥಾಪಕ (ಟೆಕ್‌) ರಾಜೀವ್ ಆನಂದ್, ಪ್ರಾದೇಶಿಕ ವ್ಯವಸ್ಥಾಪಕ ಕೇಸರಿ ನಂದನ್ ಚೌಧರಿ, ಸೇವಾ ನಿರ್ವಾಹಕ ಅನುರಾಗ್ ಯಾದವ್ ಅವರು ಬಿಎಂಟಿಸಿಗೆ ಭೇಟಿ ನೀಡಿದ್ದು, ಈ ನಿಯೋಗಕ್ಕೆ ಬಿಎಂಟಿಸಿ ನಿರ್ದೇಶಕಿ (ಮಾಹಿತಿ ತಂತ್ರಜ್ಞಾನ) ಶಿಲ್ಪಾ ಪ್ರಾತ್ಯಕ್ಷಿಕೆ ನೀಡಿದರು.ಬಿಎಂಟಿಸಿ ಅಳವಡಿಸಿಕೊಂಡಿರುವ ಮಾದರಿ ಉಪಕ್ರಮಗಳು, ಸಂಸ್ಥೆಯ ಇತಿಹಾಸ, ಶಕ್ತಿ ಯೋಜನೆಯ ಅನುಷ್ಠಾನ, ಪ್ರಯಾಣಿಕರ ಪಾಸ್ ವ್ಯವಸ್ಥೆ, ಆರ್ಥಿಕ ಕಾರ್ಯಕ್ಷಮತೆ, ಸಂಚಾರ ಆದಾಯ, ಜಾಹೀರಾತು ಶಿಷ್ಟಾಚಾರ, ಸಂಸ್ಥೆಯ ಬಸ್ ವೇಳಾಪಟ್ಟಿ, ಕಾರ್ಯಚರಣೆಗಳ ವೆಚ್ಚ, ಎಲೆಕ್ಟ್ರಿಕ್ ಬಸ್ಸುಗಳ ಹಸಿರು ತಂತ್ರಜ್ಞಾನದ ಕಾರ್ಯಾಚರಣೆ ಬಗ್ಗೆ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಬಿಎಂಟಿಸಿ ಮುಖ್ಯ ಸಂಚಾರ ವ್ಯವಸ್ಥಾಪಕ (ಆಚರಣೆ) ಜಿ.ಟಿ. ಪ್ರಭಾಕರ ರೆಡ್ಡಿ, ಮುಖ್ಯ ತಾಂತ್ರಿಕ ಎಂಜಿನಿಯರ್‌ ಎ.ಎನ್. ಗಜೇಂದ್ರ ಕುಮಾರ್, ಗಣಕ ವ್ಯವಸ್ಥಾಪಕಿ ಎ. ಪ್ರಿಯಾಂಕ, ವಿಭಾಗೀಯ ಸಂಚಾರ ಅಧಿಕಾರಿ ಪ್ರತಿಮಾ.ಎಸ್.ವಿ. ಉಪಸ್ಥಿತರಿದ್ದರು.


Share