ಬಳ್ಳಾರಿ : ಎಚ್‌ಡಿಎಫ್‌ಸಿ ಬ್ಯಾಂಕಿನ ಅಂಗಸಂಸ್ಥೆಯಾಗಿರುವ ಮತ್ತು ಅಗ್ರಗಣ್ಯ ಸ್ಟಾಕ್ ಬ್ರೋಕಿಂಗ್ ಕಂಪನಿಯಾದ ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್ ಲಿಮಿಟೆಡ್ ಕಂಪನಿ ಮತ್ತು ಅದರ ಅಧಿಕಾರಿಗಳಂತೆ ಸೋಗು ಹಾಕಿ ಅನುಕರಿಸುವ ನಕಲಿ ವಾಟ್ಸಪ್ ಗ್ರೂಪ್‌ಗಳನ್ನು ಒಳಗೊಂಡ ಮೋಸದ ಚಟುವಟಿಕೆಗಳ ಹೆಚ್ಚಳದ ವಿರುದ್ಧ ಗ್ರಾಹಕರನ್ನು ಎಚ್‌ಡಿಎಫ್‌ಸಿ ಸೆಕ್ಯೂರಿಟೀಸ್ ಎಚ್ಚರಿಸುತ್ತಿದೆ. ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್‌ಎಲ್ಲ ಹೂಡಿಕೆದಾರರನ್ನುಇಂಥ ವಂಚನೆ ಜಾಲದ ವಿರುದ್ಧ ತೀವ್ರ ಎಚ್ಚರಿಕೆ ವಹಿಸುವಂತೆ ಒತ್ತಾಯಿಸುತ್ತದೆ, ಮತ್ತು ಕಾನೂನು ಬಾಹಿರವಾಗಿ, ಸ್ಟಾಕ್ ಮಾರುಕಟ್ಟೆಯ ಸೂಚಕ, ಖಚಿತವಾದ ಅಥವಾ ಖಾತರಿ ಪಡಿಸಿದ ಆದಾಯವನ್ನು ಒದಗಿಸುವುದಾಗಿ ಪ್ರತಿಪಾದಿಸುವ ವ್ಯಕ್ತಿಗಳು ಅಥವಾ ಘಟಕಗಳು ನೀಡುವ ಯಾವುದೇ ಯೋಜನೆ ಅಥವಾ ಉತ್ಪನ್ನಕ್ಕೆ ಚಂದಾದಾರರಾಗದಂತೆ ಗ್ರಾಹಕರಲ್ಲಿ ಮನವಿ ಮಾಡಿಕೊಂಡಿದೆ.
ಈ ಗುಂಪುಗಳು ಹೆಚ್ಚಿನ ಆದಾಯದ ಭರವಸೆ ನೀಡಿ, ಗ್ರಾಹಕರನ್ನು ವಂಚಿಸುವ ಮೂಲಕ ಸೂಕ್ಷ್ಮ ಮಾಹಿತಿಯನ್ನು ಹಂಚಿಕೊಳ್ಳುವAತೆ ಮತ್ತು ಹಣವನ್ನು ವರ್ಗಾಯಿಸುವಂತೆ ಸೂಚಿಸುತ್ತಾರೆ. ಬಳಕೆದಾರ ಐಡಿ ಮತ್ತು ಪಾಸ್‌ವರ್ಡ್ ನಂತಹ ವ್ಯಾಪಾರದ ರುಜುವಾತುಗಳನ್ನು ತಾನು ಕೇಳುವುದಿಲ್ಲ ಎಂದು ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್ ಎಚ್ಚರಿಕೆ ನೀಡಲು ಬಯಸುತ್ತದೆ.
ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್ ಸಿಡಿಓ ಮತ್ತು ಸಿಓಓ ಸಂದೀಪ್ ಭಾರದ್ವಾಜ್ ಈ ಬಗ್ಗೆ ಹೇಳಿಕೆ ನೀಡಿ, “ಹೂಡಿಕೆದಾರರು ಮೋಸದ ಚಟುವಟಿಕೆಗಳ ವಿರುದ್ಧ ಜಾಗರೂಕರಾಗಿರಬೇಕು ಮತ್ತು ಸಂಪೂರ್ಣ ಸಂಶೋಧನೆ ಮತ್ತು ವಿಶ್ವಾಸಾರ್ಹ ಮಾಹಿತಿಯ ಆಧಾರದ ಮೇಲೆ ಹೂಡಿಕೆ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಬಹಳ ಮುಖ್ಯ. ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್‌ನವರು ಎಂದು ಹೇಳಿಕೊಂಡು ಯಾವುದೇ ಸಂವಹನ ನಡೆಸುವ ವ್ಯಕ್ತಿಗಳ ದೃಢೀಕರಣವನ್ನು ಅಗತ್ಯವಾಗಿ ಪರಿಶೀಲಿಸಬೇಕು ಮತ್ತು ನೀವು ನಮ್ಮ ಅಧಿಕೃತ ಚಾನೆಲ್‌ಗಳ ಮೂಲಕ ಮಾತ್ರ ವ್ಯವಹಾರ ಮಾಡುತ್ತಿದ್ದೀರಿ ಎನ್ನುವುದನ್ನು ಖಾತರಿ ಪಡಿಸಿಕೊಳ್ಳಬೇಕು” ಎಂದು ಸಲಹೆ ಮಾಡಿದ್ದಾರೆ.
ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್ ವಾಟ್ಸಪ್ ಅಥವಾ ಯಾವುದೇ ಅನಧಿಕೃತ ಚಾನಲ್‌ಗಳ ಮೂಲಕ ಆಧಾರ್ ಅಥವಾ ಪಾನ್‌ಕಾರ್ಡ್ ವಿವರಗಳನ್ನು ಒಳಗೊಂಡಂತೆ ವೈಯಕ್ತಿಕ ಮಾಹಿತಿಯನ್ನು ಕೋರುವುದಿಲ್ಲ. ಇದಲ್ಲದೆ, ಗ್ರಾಹಕರನ್ನು ಯಾವುದೇ ವಾಟ್ಸಪ್ ಗುಂಪುಗಳಿಗೆ ಸೇರಿಸುವುದಿಲ್ಲ ಅಥವಾ ಅಧಿಕೃತ ಪ್ಲಾಟ್‌ಫಾರ್ಮ್ ಹೊರತುಪಡಿಸಿ ಇತರೆಡೆಗೆ ಹಣವನ್ನು ವರ್ಗಾವಣೆ ಮಾಡಲು ವಿನಂತಿಸುವುದಿಲ್ಲ. ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು, ಅಧಿಕೃತ ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್ ವೆಬ್‌ಸೈಟ್ ಅಥವಾ ಅಧಿಕೃತ ಅಪ್ಲಿಕೇಶನ್ ಸ್ಟೋರ್‌ಗಳಂತಹ ವಿಶ್ವಾಸಾರ್ಹ ಮೂಲಗಳಿಂದ ಮಾತ್ರ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡಬೇಕು. ಗ್ರಾಹಕರು ಯಾವುದೇ ಅನುಮಾನಾಸ್ಪದ ಚಟುವಟಿಕೆಗಳು ಅಥವಾ ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್ ಸಂಸ್ಥೆಯನ್ನು ಪ್ರತಿನಿಧಿಸುವ ಗ್ರೂಪ್‌ಗಳು ಕಂಡುಬಂದಲ್ಲಿ ತಕ್ಷಣವೇ ಗೊತ್ತುಪಡಿಸಿದ ಗ್ರಾಹಕ ಸೇವಾ ತಂಡಕ್ಕೆ ವರದಿ ಮಾಡಬೇಕು. ಹೆಚ್ಚಿನ ಸಹಾಯಕ್ಕಾಗಿ ಅಥವಾ ಹಗರಣವನ್ನು ವರದಿ ಮಾಡಲು, ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್ ಗ್ರಾಹಕ ಸೇವೆಯನ್ನು ೦೨೨-೩೯೦೧೯೪೦೦ ನಲ್ಲಿ ಸಂಪರ್ಕಿಸಲು ಪ್ರಕಟಣೆಯಲ್ಲಿ ಕೋರೊದ್ದಾರೆ.