ಶ್ರೀನಿವಾಸಪುರ : ತಾಲೂಕಿನ ದೇವಲಪಲ್ಲಿ ಗ್ರಾಮದ ಯುವ ರೈತ ವಿ.ಆಂಜನೇಯ ಎಂಬುವವರು ಪಕ್ಕದ ಜಮೀನಿನಿಂದ ನೀರು ಪಡೆದು ಒಂದು ಎಕರೆಯಲ್ಲಿ ೫೦೦ ಕಂಬಗಳು, ೨೦೦೦ ಗಿಡಗಳನ್ನು ಹಾಕಿದ್ದು, ಮೊದಲ ವರ್ಷ ೮ ರಿಂದ ೧೦ ಲಕ್ಷ ಬಂಡವಾಳ ಖರ್ಚುಮಾಡಿ, ಒಂದು ವರ್ಷ ಗಿಡಗಳನ್ನು ಪೋಷಣೆ ಮಾಡಿ ಪ್ರಥಮ ಇಳುವರಿಯಲ್ಲಿ ಕಳೆದ ೧೦ ದಿನಗಳ ಹಿಂದೆ ೨ ಕ್ವಿಂಟಾಲ್ ಗಳ ಹಣ್ಣುಗಳನ್ನು ಬೆಂಗಳೂರಿನ ಕೆಆರ್.ಮಾರುಕಟ್ಟೆಗೆ ಹಾಕಿದ್ದಾರೆ.
ವಿ.ಆಂಜನೇಯ ಮಾತನಾಡಿ ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿದೇರ್ಶಕ ಶ್ರೀನಿವಾಸನ್ ಮಾರ್ಗದರ್ಶನದಿಂದ ನರೇಗಾ ಯೋಜನೆಯಡಿಯಲ್ಲಿ ಒಂದು ಎಕರೆ ೧ಲಕ್ಷ ೫೩ ಸಾವಿರ ಪ್ರೋತ್ಸಾಹ ಧನವನ್ನು ಪಡೆದು ಗಿಡಗಳನ್ನು ಬೆಳೆಸಲಾಗುತ್ತಿದೆ ಎಂದರು. ಇದರ ಸದುಪಯೋಗವನ್ನು ಇತರೆ ರೈತರು ಬಳಸಿಕೊಳ್ಳಬಹುದು ಎಂದು ಮಾಹಿತಿ ನೀಡಿದರು. ಅಲ್ಲದೆ ಈ ಬೆಳೆಗೆ ಕಾಡು ಪ್ರಾಣಿಗಳ, ಹಕ್ಕಿಗಳ, ಕೋತಿಗಳ ಕಾಟ ಇರುವುದಿಲ್ಲ. ನೀರು ಕಡಿಮೆ ಅವಶ್ಯಕತೆ ಇದ್ದು, ವಾರಕ್ಕೆ ಎರಡು ಸಲ ಅರ್ಧ ಗಂಟೆ ನೀರು ಬಿಟ್ಟರೆ ಸಾಕು. ಕೊಳವೆಬಾವಿಯಲ್ಲಿ ನೀರು ಕಡಿಮೆ ಇರುವ ರೈತರು ಸಹ ಬೆಳೆಯ ಬಹುದು.ಯಲಹಂಕದ ಶ್ರೀನಿವಾಸರವರ ಬಳಿ ಒಂದು ಗಿಡಕ್ಕೆ ೭೦ ರೂ ನಂತೆ ೨೦೦೦ ಗಿಡಗಳನ್ನ ತೆಗೆದುಕೊಂಡು ಬಂದು ಒಂದು ವರ್ಷ ಗಿಡಗಳನ್ನು ಕಾಲಕಾಲಕ್ಕೆ ನೀರು, ಗೊಬ್ಬರವನ್ನು ಹಾಕಿ ಸಂವೃದ್ಧಿಯಾಗಿ ಬೆಳಸಿ, ಗಿಡಗಳಿಗೆ ಹಸು ಮತ್ತು ಕುರಿಗಳ ಗೊಬ್ಬರವನ್ನು ಡಿ ಕಾಂಫೋಸ್ ಮಾಡಿ, ಇದಕ್ಕೆ ಫಂಗಿಸೈಡಸ್ಸ್ಗಳಾದ ಡ್ರೆöÊಕೋಡರ್ಮಾ, ಸೋಡಾ ಮನ್ಸ್ನ್ನು ಮಿಕ್ಸಿಮಾಡಿ ೬ ತಿಂಗಳು ಕಾಲ ಸಂರಕ್ಷಿಸಲಾಗುತ್ತದೆ. ಆ ಗೊಬ್ಬರದ ಮೇಲೆ ವಾರಕ್ಕೊಮ್ಮೆ ನೀರನ್ನ ಇದರ ಮೇಲೆ ಬಿಟ್ಟು ಹದ ಮಾಡಲಾಗುತ್ತದೆ. ಆ ಗೊಬ್ಬರವನ್ನ ಗಿಡಗಳಿಗೆ ಹಾಕಿದಾಗ ಹೆಚ್ಚು ಪರಿಣಾಮಕಾರಿಯಾಗಿ ಡಿ ಕಾಂಫೋಸ್ ಗೊಬ್ಬರವನ್ನ ಹಾಕಿದಾಗ ಕಾಯಿ ಒಳ್ಳೆಯ ಗಾತ್ರ ಬರಲು ಕಾರಣವಾಗುತ್ತದೆ. ತಿಪ್ಪೆಗೊಬ್ಬರ ಬಳಕೆ ಗಿಂತ ಡಿ ಕಾಂಫೋಸ್ ಗೊಬ್ಬರ ಹೆಚ್ಚು ಪರಿಣಾಮಕಾರಿ ಎಂದು ಮಾಹಿತಿ ನೀಡಿದರು.ನಮ್ಮ ರೈತರು ಬೇರೆ ಬೆಳಗಳಿಂದ ನಷ್ಟ ಆಗುತ್ತಿದ್ದಾರೆ. ಈ ಬೆಳೆಯು ರೈತರನ್ನ ಆರ್ಥಿಕವಾಗಿ ಸಭಲರಾಗುಲು ಈ ಬೆಳೆಯು ಕಾರಣವಾಗುತ್ತದೆ. ಈ ಬೆಳೆಗೆ ಮಾರುಕಟ್ಟೆ ಸಂಬದಿಸಿದತೆ ಯಾವುದೇ ತೊಂದರೆಗಳು ಇಲ್ಲ. ಒಂದು ಕಾಯಿ ೩೦೦ ಗ್ರಾಂನಿದ ೮೦೦ ಗ್ರಾಂ ವರೆಗೂ ತೂಕವಿದೆ, ನಮಗೆ ೧ ಕೆಜಿ ೧೮೦ ರೂ ಸಿಗುತ್ತಿದೆ.