ಶ್ರೀನಿವಾಸಪುರ : ಮನುಷ್ಯನು ದಿನನತ್ಯದ ಜಂಜಾಟಗಳಲ್ಲಿ ತೊಡಗಿರುತ್ತಾನೆ . ಅವನಿಗೆ ಮಾನಸಿಕವಾಗಿ ಒಂದಿಲ್ಲದೊಂದು ಸಮಸ್ಯೆಗಳು ಇದ್ದೇ ಇರುತ್ತದೆ.ಎಷ್ಟೇ ಮಾನಸಿಕ ಒತ್ತಡಗಳು ಇದ್ದರೂ ಸಹ ದೇವಾಲಯಗಳಿಗೆ ಬಂದು ಹೋದರೆ ಮನಸ್ಸು ಸಂತಸಗೊಳ್ಳುತ್ತದೆ. ಮಾನಸಿಕವಾಗಿ ಸದೃಡವಾಗಿ ಇರಬಹುದುಎಂದು ತಹಶೀಲ್ದಾರ್ ಜಿ.ಎನ್.ಸುದೀಂದ್ರ ತಿಳಿಸಿದರು.ಪಟ್ಟಣದ ಪೊಲೀಸ್ ಸ್ಟೇಷನ್ ಬಳಿ ಸೋಮವಾರ ಗಣಪತಿ ಪ್ರತಿಷ್ಟಾಪನಾ ಕಾರ್ಯಕ್ರಮದಲ್ಲಿ ಪಾಲ್ಗುಂಡು ಮಾತನಾಡಿದರು.ಗಣಪತಿಯು ವಿಘ್ನಗಳನ್ನು ನಿವಾರಿಸುವವನು ಈ ಕಾರಣಕ್ಕಾಗಿ ವಿಶೇಷ ಮಹತ್ವವನ್ನು ನೀಡಲಾಗಿದೆ. ಹಾಗೂ ಯಾವುದೇ ಮಂಗಳಕರ ಕಾರ್ಯವನ್ನು ಆರಂಭಿಸುವ ಮುನ್ನ ಗಣಪತಿ ಪೂಜೆಯನ್ನು ಮಾಡಲಾಗವುದು. ಗಣೇಶನು ನಮ್ಮ ಪೂಜೆಯಿಂದ ಪ್ರಸನ್ನನಾದಾಗ ಅವನು ನಮ್ಮೆಲ್ಲಾ ತೊಂದರೆಗಳನ್ನು ದೂರ ಮಾಡುತ್ತಾನೆ. ಎಂಬ ನಂಬಿಕೆಯೊAದಿಗೆ ಶ್ರದ್ಧಾ ಭಕ್ತಿಯೊಂದಿಗೆ ಪೂಜೆ , ಪ್ರಾರ್ಥನೆ ಸಲ್ಲಿಸಿದಾಗ ಸಕಲ ಇಷ್ಟಾರ್ಥಗಳನ್ನು ನೆರವೇರಿಸುತ್ತಾನೆ ಎಂದರು.ಪೊಲೀಸ್ ನಿರೀಕ್ಷಕ ಎಂ.ಬಿ.ಗೊರವನಕೊಳ್ಳ ಮಾತನಾಡಿ ಸ್ವಾರ್ಥ ಜೀವನವನ್ನು ಬಿಟ್ಟು ಸಮಾಜಕ್ಕೆ ಉಪಯೋಗವಾಗುವಂತಹ ಕೆಲಸಕಾರ್ಯಗಳನ್ನು ಹಮ್ಮಿಕೊಂಡಾಗ ಮಾನಸಿಕ ಹಾಗು ದೈಹಿಕವಾಗಿ ಸದೃಡವಾಗಲು ಸಾಧ್ಯ, ಇದಲ್ಲದೆ ಪ್ರತಿ ದಿನ ದ್ಯಾನ,ಯೋಗ ಮಾಡುವುದರಿಂದ ಆರೋಗ್ಯ ಜೀವನವನ್ನು ನಡೆಸಬಹುದಾಗಿದೆ ಎಂದರು.ಗೌನಿಪಲ್ಲಿ ವೃತ್ತ ಪೊಲೀಸ್ ನಿರೀಕ್ಷಕ ಜಯಾನಂದ್ ಮಾತನಾಡಿದರು. ಪ್ರತಿಷ್ಟಾಪನಾ ಹಾಗು ಪೂಜಾ ಕಾರ್ಯಕ್ರಮಗಳನ್ನು ಅರುಣ್‌ಕುಮಾರ್ ಶರ್ಮ ತಂಡದವರು ನೆರವೇರಿಸಿದರು. ಇಒ ಎ.ಎನ್.ರವಿ, ಮುಖಂಡರಾದ ದಿಂಬಾಲ್ ಅಶೋಕ್, ಜಗದೀಶ್, ರಾಮು, ತಿಮ್ಮಯ್ಯ, ರಾಮಾಂಜಮ್ಮ, ವಕೀಲ ನಾಗರಾಜ್, ಪಿಎಸ್‌ಐ ಜುರಾಮ್, ಎಎಸ್‌ಐ ಗಳಾದ ಎಂ.ಡಿ.ನಾರಾಯಣಪ್ಪ, ಶ್ರೀನಿವಾಸ್,ರವೀಂದ್ರನಾಥ್, ಪೊಲೀಸ್ ಸಿಬ್ಬಂದಿಗಳಾದ ರಾಮಚಂದ್ರ, ಆನಂದ್, ಶ್ರೀನಾಥ್, ರಮೇಶ್ , ಮಂಜುನಾಥ್, ಶಿವಾನಂದ ಬಡಿಯಾರ್ ಇದ್ದರು.