ಕಾರಿಗೆ ಸಿಲುಕಿ ಮಹಿಳೆ ಸಾವು…ಆತ್ಮಹತ್ಯೆ ಶಂಕೆ…

ಕಾರಿಗೆ ಸಿಲುಕಿ ಮಹಿಳೆ ಸಾವು…ಆತ್ಮಹತ್ಯೆ ಶಂಕೆ…

Share

ಹುಣಸೂರು: ಚಲಿಸುತ್ತಿದ್ದ ಕಾರಿಗೆ ಸಿಲುಕಿ ಮಹಿಳೆಯೊಬ್ಬಳು ಮೃತಪಟ್ಟ ಘಟನೆ ಹುಣಸೂರಿನ ಜಡಗನಕೊಪ್ಪಲು ಗ್ರಾಮದಲ್ಲಿ ನಡೆದಿದೆ.ಮಹಿಳೆ ಸಾವು ಆತ್ಮಹತ್ಯೆ ಎಂದು ಶಂಕಿಸಲಾಗಿದೆ.ಜಡಗನಕೊಪ್ಪಲು ಮುಖ್ಯರಸ್ತೆಯ ಮಧ್ಯದಲ್ಲಿ ನಿಂತ ಮಹಿಳೆ ಭಾರಿ ವಾಹನಗಳಿಗೆ ಸಿಲುಕಲು ಯತ್ನಿಸುತ್ತಿದ್ದಳೆಂದು ಹೇಳಲಾಗಿದೆ.ಲಾರಿಯೊಂದಕ್ಕೆ ಸಿಲುಕಬೇಕಿದ್ದ ಮಹಿಳೆ ಚಾಲಕನ ಸಮಯಪ್ರಜ್ಞೆಯಿಂದ ತಪ್ಪಿಸಿಕೊಂಡಿದ್ದಾಳೆ.ನಂತರ ಹಿಂದೆಯೇ ಬರುತ್ತಿದ್ದ ಕಾರಿಗೆ ಉದ್ದೇಶಪೂರ್ವಕವಾಗಿ ಸಿಲುಕಿ ಸಾವನ್ನಪ್ಪಿದ್ದಾಳೆಂದು ಹೇಳಲಾಗಿದೆ.ಬಿಳಿಕೆರೆ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ಕಾರನ್ನ ವಶಕ್ಕೆ ಪಡೆದಿದ್ದಾರೆ.ಮೃತಪಟ್ಟ ಮಹಿಳೆಯ ಮಾಹಿತಿ ಕಲೆಹಾಕಲು ಪೊಲೀಸರು ಮುಂದಾಗಿದ್ದಾರೆ.ಪ್ರತ್ಯಕ್ಷದರ್ಶಿಯೊಬ್ಬರು ಮಹಿಳೆಯ ಈ ಯತ್ನವನ್ನ ನೋಡಿರುವುದಾಗಿ ತಿಳಿದು ಬಂದಿದೆ.ಅಲ್ಲದೆ ಈ ವಿಚಾರವನ್ನ 112 ಪೊಲೀಸ್ ವಾಹನಕ್ಕೂ ಮುಟ್ಟಿಸಿದ್ದಾರೆಂದು ಹೇಳಲಾಗಿದೆ.ಮಹಿಳೆಯ ಸಾವು ಆಕಸ್ಮುಕವೋ ಅಥವಾ ಆತ್ಮಹತ್ಯೆಯೋ ತನಿಖೆಯಲ್ಲಿ ಖಚಿತಪಡಿಸಬೇಕಿದೆ…


Share

Leave a Reply

Your email address will not be published. Required fields are marked *