ಅನಧಿಕೃತ ಬೀಜ ಮತ್ತು ರಸಗೊಬ್ಬರ ಮಾರಾಟಗಾರರ ಪರವಾನಿಗೆಯನ್ನು ಕೂಡಲೆ ಅಮಾನತ್ತಿನಲ್ಲಿಡಲು ಕಲ್ಬುರ್ಗಿ ಜಿಲ್ಲಾಧಿಕಾರಿ ಆದೇಶ:ಮಹಾಂತಗೌಡ ನಂದಿಹಳ್ಳಿ ಹರ್ಷ.

ಅನಧಿಕೃತ ಬೀಜ ಮತ್ತು ರಸಗೊಬ್ಬರ ಮಾರಾಟಗಾರರ ಪರವಾನಿಗೆಯನ್ನು ಕೂಡಲೆ ಅಮಾನತ್ತಿನಲ್ಲಿಡಲು ಕಲ್ಬುರ್ಗಿ ಜಿಲ್ಲಾಧಿಕಾರಿ ಆದೇಶ:ಮಹಾಂತಗೌಡ ನಂದಿಹಳ್ಳಿ ಹರ್ಷ.

Share

ಕಲ್ಬುರ್ಗಿ ಜಿಲ್ಲೆಯ ವಿವಿಧ ಬೀಜ ಮತ್ತು ರಸಗೊಬ್ಬರ ಮಾರಾಟಗಾರರು ಕಾನೂನು ನಿಯಮ ಉಲ್ಲಂಘನೆ ಮಾಡಿರುವ ಪ್ರಯುಕ್ತ ಪರವಾನಿಗೆ ನೀಲಂಬನೆ / ಅಮಾನತ್ತಿನಲ್ಲಿಟ್ಟು ಆದೇಶಿಸಿರುವ ಕುರಿತು. ಜಂಟಿ ನಿರ್ದೇಶಕರು ಹಾಗೂ ಬೀಜ ಪರಿವೀಕ್ಷಕರು ಕಲ್ಬುರ್ಗಿ ರವರ ನೇತೃತ್ವದಲ್ಲಿ ಕಲ್ಬುರ್ಗಿ ಜಿಲ್ಲೆಯ ಎಲ್ಲಾ ತಾಲೂಕಿನ ಸಹಾಯಕ ಕೃಷಿ ಕೃಷಿ ನಿರ್ದೇಶಕರನೊಳಗೊಂಡ ತಂಡ ರಚಿಸಿ ಕಳೆದ ಒಂದು ವಾರದಿಂದ ಜಿಲ್ಲೆಯ ವಿವಿಧ ಕೃಷಿ ಪರಿಕರ ಮಾರಾಟ ಮಳಿಗೆಗಳಿಗೆ ದಿಡೀರ್ ದಾಳಿ ಮಾಡಿದಾಗ ಬೀಜ ಅದಿನಿಯಮ 1966 ಹಾಗೂ (ಬೀಜಗಳ) ನಿಯಂತ್ರಣ ಆದೇಶ 1983 ಉಲ್ಲಂಘಿಸಿರುವುದು ಕಂಡುಬಂದಿದ್ದು ಈ ಕೆಳಕಳಿಸಿದ ಕಲ್ಬುರ್ಗಿ ಅಫಜಲಪುರ ಜೇವರ್ಗಿ ಮತ್ತು ಯಡ್ರಾಮಿ ತಾಲೂಕಿನ ಬೀಜ ಮಾರಾಟಗಾರ ಪರವಾಗಿದೆ ನೀಲಂಬನೆ/ ಅಮಾನತ್ತಿನಲ್ಲಿಟ್ಟು ಆದೇಶಿಸಲಾಗಿರುತ್ತದೆ..1) ಓಂ ಪ್ರಕಾಶ್ ಶ್ರೀನಿವಾಸ್/ ಸಾಂಗ್ಸ್ ನೆಹರು ಗಂಜ ಕಲ್ಬುರ್ಗಿ 2) ನೀಲಾ ಎಂಟರ್ಪ್ರೈಸಸ್ ನೆಹರು ಗಂಜ್ ಕಲ್ಬುರ್ಗಿ 3) ಶ್ರೀ ಸಾಯಿ ಟ್ರೇಡರ್ಸ್ ಜೆವರ್ಗಿ 4) ಸೌದಗಾರ ಟ್ರೇಡರ್ಸ್ ಸೊನ್ನ ಜೇವರ್ಗಿ 5) ಭಾಗ್ಯವಂತಿ ಆಗ್ರೊ ಏಜೆನ್ಸಿ ಯಡ್ರಾಮಿ 6) ರೇವಣಸಿದ್ದೇಶ್ವರ ಆಗ್ರೋ ಕೇಂದ್ರ ಸೊನ್ನ ಜೇವರ್ಗಿ 7) ಗೊಲ್ಲಾಳೇಶ್ವರ ಆಗ್ರೋ ಏಜೆನ್ಸಿ ಆಪ್ಜಲ್ಪುರ . ಹಾಗೂ ರಸಗೊಬ್ಬರ ನಿಯಂತ್ರಣ ಆದೇಶ 1985ರ ನಿಯಮಾವಳಿ ಉಲ್ಲಂಘನೆ ಮಾಡಿದ ಕಾರಣ ಚಿಂಚೋಳಿ ಮತ್ತು ಜೇವರ್ಗಿ ತಾಲೂಕಿನ ಈ ಕೆಳ ಕಾಣಿಸಿದ ಚಿಲ್ಲರೆ ರಸಗೊಬ್ಬರ ಮಾರಾಟ ಪರವಾನಿಗೆಯನ್ನು ನೀಲಂಬನೆ/ ಅಮಾನತ್ತಿನಲ್ಲಿಟ್ಟು ಆದೇಶ ಹೊರಡಿಸಿದೆ 1) ಕೇತಕಿ ಸಂಗಮೇಶ್ವರ ಕೃಷಿ ಸೆಂಟರ್ ಸುಲೇಪೇಟ್ 2) ವೀರಭದ್ರೇಶ್ವರ ಕೃಷಿ ಸೆಂಟರ್ ಸುಲೇಪೇಟ್3) ದಂಡಗುಂಡ ಕೃಷಿ ಏಜೆನ್ಸಿ ಜೇವರ್ಗಿ 4) ಶ್ರೀ ಕರಿಸಿದ್ದೇಶ್ವರ ಟ್ರೇಡರ್ಸ್ ಜೆರಟಗಿ.. ಈ ಮೇಲಿನ ಬೀಜ ಮತ್ತು ರಸಗೊಬ್ಬರ ಮಾರಾಟ ಮಳಿಗೆಗಳ ನೀಲಂಬನೆ/ ಅಮಾನತ್ತಿನಲ್ಲಿಟ್ಟುವುದರಿಂದ ರೈತರು ಈ ಮೇಲ್ಕಾಣಿಸಿದ ಮಾರಾಟ ಮಳಿಗೆಗಳಿಂದ ಬಿತ್ತನೆ ಬೀಜ ಮತ್ತು ರಸಗೊಬ್ಬರ ಖರೀದಿಸಬಾರದೆಂದು ಈ ಮೂಲಕ ಸೂಚಿಸಲಾಗಿದೆ ಹಾಗೂ DAP ರಸಗೊಬ್ಬರಕ್ಕೆ ಸರ್ಕಾರ ನಿಗದಿಪಡಿಸಿದ1350/ಒಂದು ಚೀಲಕ್ಕೆ ದರ UREA ರಸಗೊಬ್ಬರ ದರ266 ಪ್ರತಿ ಒಂದು ಚೀಲಕ್ಕೆ ನಿಗದಿಪಡಿಸಲಾಗಿದೆ bollgard2 ಒಂದು ಪ್ಯಾಕಿಗೆ864 ರೂ ನಿಗದಿತ ದರವಾಗಿರುತ್ತದೆ ಹೆಚ್ಚಿನ ದರದಲ್ಲಿ ಯಾವುದೇ ಮಳಿಗೆಯವ್ರು ಏಜೆನ್ಸಿ ಅವರು ಮಾರಾಟ ಮಾಡಿದರೆ ರೈತರು ತಮ್ಮ ಹತ್ತಿರದ ಕೃಷಿ ನಿರ್ದೇಶಕರ ಕಚೇರಿ ಅಥವಾ ರೈತ ಸಂಪರ್ಕ ಕೇಂದ್ರಕ್ಕೆ ದೂರು ನೀಡಲು ಪತ್ರಿಕಾ ಪ್ರಕಟಣೆಯಲ್ಲಿ ಜಂಟಿ ಕೃಷಿ ನಿರ್ದೇಶಕರು ಸಮದ ಪಟೇಲ್ ಅವರು ಹಾಗೂ ಕಲ್ಬುರ್ಗಿ ಜಿಲ್ಲಾಧಿಕಾರಿಗಳು ಪೌಜಿಯ ತರನ್ನುಮ ಅವರು ಪತ್ರಿಕಾ ಪ್ರಕಟಣೆಗೆ ತಿಳಿಸಿದ್ದಾರೆ ಈ ವಿಷಯದ ಕುರಿತು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ರೈತ ಸೇನೆ ಜಿಲ್ಲಾಧ್ಯಕ್ಷರಾದ ಮಹಾಂತಗೌಡ ನಂದಿಹಳ್ಳಿ ಅವರು ರೈತರಿಗೆ ಈ ವಿಷಯದ ಕುರಿತು ಮುಂಜಾಗ್ರತೆ ವಹಿಸಲು ತಿಳಿಸಿದ್ದಾರೆ


Share