ಪ್ರಜ್ವಲ್ ರೇವಣ್ಣ ಪ್ರಕರಣ: ಆಡಿಯೋ ಟೇಪ್‌ನಲ್ಲಿರುವ ನನ್ನ ಧ್ವನಿಯನ್ನು ತಿರುಚಲಾಗಿದೆ- ಎಲ್ಆರ್ ಶಿವರಾಮೇಗೌಡ

ಪ್ರಜ್ವಲ್ ರೇವಣ್ಣ ಪ್ರಕರಣ: ಆಡಿಯೋ ಟೇಪ್‌ನಲ್ಲಿರುವ ನನ್ನ ಧ್ವನಿಯನ್ನು ತಿರುಚಲಾಗಿದೆ- ಎಲ್ಆರ್ ಶಿವರಾಮೇಗೌಡ

Share

ಬೆಂಗಳೂರು: ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಇತ್ತೀಚೆಗಷ್ಟೇ ವೈರಲ್ ಆಗಿರುವ ಬಿಜೆಪಿ ಮುಖಂಡ ದೇವರಾಜೇಗೌಡ ಹಾಗೂ ತಮ್ಮ ನಡುವಿನ ದೂರವಾಣಿ ಸಂಭಾಷಣೆಯು ನನ್ನ ವಿರುದ್ಧದ ಷಡ್ಯಂತ್ರ ಎಂದು ಮಾಜಿ ಸಂಸದ ಎಲ್ಆರ್ ಶಿವರಾಮೇಗೌಡ ಹೇಳಿದ್ದಾರೆ.ಸಾಮಾಜಿಕ ಜಾಲತಾಣದಲ್ಲಿ ಶಿವರಾಮೇಗೌಡ ಸ್ಪಷ್ಟನೆ ನೀಡಿದ್ದು, ಕೆಲ ಅಪರಿಚಿತ ದುಷ್ಕರ್ಮಿಗಳು ತಮ್ಮ ಧ್ವನಿಯನ್ನು ಮಾರ್ಫಿಂಗ್ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.’ನನ್ನ 40 ವರ್ಷಗಳ ರಾಜಕೀಯ ಜೀವನದಲ್ಲಿ ನಾನು ರಾಜಕೀಯವಾಗಿ ಟೀಕಿಸಿದ್ದೇನೆ ಮತ್ತು ವೈಯಕ್ತಿಕವಾಗಿ ಎಂದಿಗೂ ಯಾರನ್ನೂ ಟೀಕಿಸಿಲ್ಲ. ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡರ ಸಾವಿಗೆ ನಾನು ಎಂದಿಗೂ ಹಾರೈಸಿಲ್ಲ’ ಎಂದು ಅವರು ಪೋಸ್ಟ್‌ನಲ್ಲಿ ಬರೆದಿದ್ದಾರೆ.ಏಪ್ರಿಲ್ 29 ರಂದು ರಾಜ್ಯದಾದ್ಯಂತ ಪೆನ್ ಡ್ರೈವ್ ವಿಚಾರ ವೈರಲ್ ಆದಾಗ ದೇವರಾಜೇಗೌಡ ಅವರು ತಮ್ಮನ್ನು ಭೇಟಿಯಾಗಿದ್ದರು. ಪೆನ್ ಡ್ರೈವ್ ಪ್ರಕರಣದಲ್ಲಿ ನಾನು ಯಾವುದೇ ರೀತಿಯ ಸಂಪರ್ಕ ಹೊಂದಿಲ್ಲ. ಆದರೆ, ನನ್ನ ರಾಜಕೀಯ ಪ್ರತಿಸ್ಪರ್ಧಿಗಳು ಅದರೊಂದಿಗೆ ನನ್ನನ್ನು ಜೋಡಿಸುತ್ತಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಆಡಿಯೋವನ್ನು ತಿರುಚಿ ಅಪ್‌ಲೋಡ್ ಮಾಡಿರುವುದನ್ನು ನಾನು ಗಮನಿಸಿದ್ದೇನೆ ಮತ್ತು ಅದರ ಹಿಂದೆ ಯಾರಿದ್ದಾರೆಂದು ನನಗೆ ತಿಳಿದಿದೆ. ಸರಿಯಾದ ಸಮಯದಲ್ಲಿ ನಾನು ಅವರಿಗೆ ಉತ್ತರಿಸುತ್ತೇನೆ’ ಎಂದು ಅವರು ಹೇಳಿದರು.

ತಮ್ಮ ವಿರುದ್ಧ ಷಡ್ಯಂತ್ರ ನಡೆಸುವವರ ವಿರುದ್ಧ ಪ್ರಕರಣ ದಾಖಲಿಸುವುದಾಗಿ ಹೇಳಿದರು.


Share